ರಾಜ್ ಕಪೂರ್ ಜನ್ಮಶತಮಾನೋತ್ಸವಕ್ಕೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲು ಸೈಫ್-ಕರೀನಾ ಸೇರಿದಂತೆ ಕಪೂರ್ ಕುಟುಂಬ ಭೇಟಿ ನೀಡಿತು. ಕರೀನಾ ತಮ್ಮ ಮಕ್ಕಳಿಗಾಗಿ ಪ್ರಧಾನಿಯವರ ಆಟೋಗ್ರಾಫ್ ಪಡೆದರು. ಡಿಸೆಂಬರ್ 14 ರಂದು ರಾಜ್ ಕಪೂರ್ ಚಲನಚಿತ್ರೋತ್ಸವ ಆಯೋಜಿಸಲಾಗಿದ್ದು, 13 ರಿಂದ 15 ರವರೆಗೆ ಆಯ್ದ ಚಿತ್ರಗಳ ಪ್ರದರ್ಶನವಿರುತ್ತದೆ.

 ಬಾಲಿವುಡ್‌ ಜೋಡಿಯಾದ ಸೈಫ್‌ ಅಲಿ ಖಾನ್‌ ಮತ್ತು ಕರೀನಾ ಕಪೂರ್‍‌ ದಂಪತಿ ಸೇರಿದಂತೆ ಅವರ ಇಡೀ ಕುಟುಂಬವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ. ಮಾತ್ರವಲ್ಲದೇ, ಕರೀನಾ ಅವರು ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ಅವರಿಗಾಗಿ ಪ್ರಧಾನಿಯವರ ಆಟೋಗ್ರಾಫ್‌ ಕೂಡ ಪಡೆದುಕೊಂಡಿದ್ದಾರೆ. ಈ ಬಗ್ಗೆ ಖುದ್ದು ಕರೀನಾ ಕಪೂರ್‍‌ ಅವರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕರೀನಾ ಕಪೂರ್‍‌, ಸೈಫ್ ಅಲಿ ಖಾನ್, ಸಹೋದರ ರಣಬೀರ್ ಕಪೂರ್ , ಸೊಸೆ ಆಲಿಯಾ ಭಟ್ ಸಹೋದರಿ ಕರಿಷ್ಮಾ ಕಪೂರ್, ನೀತು ಕಪೂರ್, ರಿದ್ಧಿಮಾ ಕಪೂರ್ ಸಾಹ್ನಿ, ಭರತ್ ಸಾಹ್ನಿ, ರಿಮಾ ಜೈನ್, ಆಧಾರ್ ಜೈನ್, ಅರ್ಮಾನ್ ಜೈನ್, ಅನಿಸಾ ಮಲ್ಹೋತ್ರಾ, ನಿತಾಶಾ ನಂದಾ ಮನೋಜ್ ಜೈನ್ ಮತ್ತು ನಿಖಿಲ್ ನಂದಾ ಸೇರಿದಂತೆ ಇಡೀ ಕುಟುಂಬವನ್ನು ನೋಡಬಹುದಾಗಿದೆ.

ಅಷ್ಟಕ್ಕೂ ಈ ಭೇಟಿಯ ಹಿಂದಿರುವ ಉದ್ದೇಶ, ನಟ, ಕರೀನಾ ಕಪೂರ್‍‌ ಅಜ್ಜ ರಾಜ್ ಕಪೂರ್‍‌ ಅವರ ನೂರನೆಯ ಜನ್ಮದಿನಾಚರಣೆಗೆ ಪ್ರಧಾನಿಯವರನ್ನು ಆಹ್ವಾನಿಸುವ ಉದ್ದೇಶದಿಂದ ಅವರ ಆಹ್ವಾನದ ಮೇರೆಗೆ ಖಾನ್‌-ಕಪೂರ್‍‌ ಕುಟುಂಬದವರು ಅವರನ್ನು ಭೇಟಿಯಾಗಿದ್ದಾರೆ. ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಡೆಯಲಿರುವ ರಾಜ್ ಕಪೂರ್ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಲು ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವುದಾಗಿ ನಟಿ ಬರೆದುಕೊಂಡಿದ್ದಾರೆ.

ಖ್ಯಾತ ನಟಿ ಸಪ್ನಾ ಪುತ್ರನ ಅನುಮಾನಾಸ್ಪದ ಸಾವು: ಬೆಚ್ಚಿಬೀಳಿಸುವ ಕಥೆ ಹೇಳಿದ ಹೈಸ್ಕೂಲ್‌ ಸ್ನೇಹಿತರು!

ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ಅಲ್ಲಿಗೆ ಬರಲು ಸಾಧ್ಯವಾಗಿಲ್ಲವಾದ ಹಿನ್ನೆಲೆಯಲ್ಲಿ, ಅವರಿಗಾಗಿ ಪ್ರಧಾನಿ ಅವರಿಂದ ಆಟೋಗ್ರಾಫ್‌ ಪಡೆದುಕೊಂಡಿರುವುದಾಗಿ ಕರೀನಾ ತಿಳಿಸಿದ್ದಾರೆ. "ನಮ್ಮ ಅಜ್ಜ ರಾಜ್ ಕಪೂರ್ ಅವರ ಜೀವನ ಮತ್ತು ಪರಂಪರೆಯನ್ನು ಸ್ಮರಿಸಲು ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಮಾನಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದೇವೆ. ರಾಜ್ ಕಪೂರ್ 100 ಫಿಲ್ಮ್ ಫೆಸ್ಟಿವಲ್ ಮೂಲಕ ಭಾರತೀಯ ಚಿತ್ರರಂಗದ ಮೇಲೆ ಅವರು ಬೀರಿದ ಪ್ರಭಾವವನ್ನು ನೆನಪಿಸಿಕೊಳ್ಳುವುದು ಇದರ ಉದ್ದೇಶ ಎಂದಿದ್ದಾರೆ.

ಅಂದಹಾಗೆ ಇದೇ ಡಿಸೆಂಬರ್ 14 ರಂದು ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವ ನಡೆಯಲಿದೆ. ಇದರ ಅಂಗವಾಗಿ 13 ರಿಂದ 15 ರವರೆಗೆ ವಿವಿಧ ಚಿತ್ರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಇದು ಅದರಲ್ಲಿ ಆಗ್ (1948), ಬರ್ಸಾತ್ (1949), ಆವಾರಾ (1951), ಶ್ರೀ 420 (1955), ಜಾಗ್ತೇ ರಹೋ (1956), ಜಿಸ್ ದೇಶ್ ಮೇ ಗಂಗಾ ಬೇಹತಿ ಹೈ (1960), ಸಂಗಮ್ (1964), ಮೇರಾ ನಾಮ್ ಜೋಕರ್ (1970), ಬಾಬಿ (1973) ಮತ್ತು ರಾಮ್ ತೇರಿ ಗಂಗಾ ಮೈಲಿ (1985) ಸಿನಿಮಾಗಳನ್ನು ಸ್ಕ್ರೀನಿಂಗ್‌ ಮಾಡಲಾಗುವುದು ಎಂದು ತಿಳಿದುಬಂದಿದೆ.

ಅಪ್ಪು ನಿಜವಾಗಿ ಸತ್ತಿದ್ದು ಹೇಗೆ? ಈಗ ಎಲ್ಲಿದ್ದಾರೆ? ಆತ್ಮದ ಜೊತೆ ಸಂಭಾಷಿಸಿದ ರಾಮಚಂದ್ರ ಗುರೂಜಿ

View post on Instagram