ರಾಮಮಂದಿರದ ಆವರಣದಲ್ಲೇ ರಾಮಾಯಣ ಕಾಲದ ಸ್ಮಾರಕಗಳ ಮರುಸ್ಥಾಪನೆಗೆ ನಿರ್ಧಾರ
ಹಲವು ದಶಕಗಳ ಕಾನೂನು ಹೋರಾಟದ ಬಳಿಕ ರಘುಕುಲ ತಿಲಕ, ಮರ್ಯಾದಾ ಪುರುಷೋತ್ತಮ, ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಭವ್ಯ ಮಂದಿರದ ನಿರ್ಮಾಣ ಕಾರ್ಯ ಅಯೋಧ್ಯೆಯಲ್ಲಿ ಭರದಿಂದ ಸಾಗಿದೆ.
ಅಯೋಧ್ಯೆ: ಹಲವು ದಶಕಗಳ ಕಾನೂನು ಹೋರಾಟದ ಬಳಿಕ ರಘುಕುಲ ತಿಲಕ, ಮರ್ಯಾದಾ ಪುರುಷೋತ್ತಮ, ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಭವ್ಯ ಮಂದಿರದ ನಿರ್ಮಾಣ ಕಾರ್ಯ ಅಯೋಧ್ಯೆಯಲ್ಲಿ ಭರದಿಂದ ಸಾಗಿದೆ. ಈ ದೇವಾಲಯದ ಆವರಣದಲ್ಲಿಯೇ ರಾಮಾಯಣ ಕಾಲದ ಕೆಲವು ಐತಿಹಾಸಿಕ ಸ್ಮಾರಕಗಳನ್ನು ಸಂಗ್ರಹಿಸಿ ಇಡಲು ನಿರ್ಧರಿಸಲಾಗಿದ್ದು, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ತಜ್ಞರ ಸಲಹೆಯೊಂದಿಗೆ ಈ ಬಗ್ಗೆ ಯೋಜನೆ ರೂಪಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸೇರಿದ ರಾಮ ಜನ್ಮಭೂಮಿ ಆವರಣದಲ್ಲಿ 11 ಐತಿಹಾಸಿಕ ಸ್ಮಾರಕಗಳನ್ನು ಅವುಗಳ ಮೂಲ ರೂಪದಲ್ಲಿಯೇ ಸಂರಕ್ಷಿಸಿ ಪುನರ್‌ಸ್ಥಾಪಿಸಲಾಗುತ್ತದೆ.
ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿರುವ ಎಲ್ಲಾ ರಾಮಾಯಣ ಕಾಲದ ರಚನೆಗಳು ಮತ್ತು ಸ್ಥಳಗಳಿಗೆ ಪ್ರಮುಖ ಆದ್ಯತೆ ನೀಡಲು ಯೋಗಿ ಆದಿತ್ಯನಾಥ್ ಸರ್ಕಾರ (state government) ನಿರ್ಧರಿಸಿದೆ. ರಾಜ್ಯದಲ್ಲಿರುವ ರಾಮಾಯಣ ಕಾಲ ಐತಿಹಾಸಿಕ ಸ್ಥಳನ್ನು (historic places) ಗುರುತಿಸಿ ಸಮೀಕ್ಷೆ ಮಾಡಲು ದೆಹಲಿ ಮೂಲದ ವಾಸ್ತುಶಿಲ್ಪಿಯನ್ನು (architect) ಸರ್ಕಾರ ನೇಮಕ ಮಾಡಿದೆ. ದೆಹಲಿ ಮೂಲದ ವಾಸ್ತುಶಿಲ್ಪಿ(Antara Sharma) ತಮ್ಮ ತಂಡದ ಸದಸ್ಯರೊಂದಿಗೆ ಅಯೋಧ್ಯೆಯಲ್ಲಿರುವ ಐತಿಹಾಸಿಕ ಜಲಮೂಲಗಳು, ಮಠಗಳು ಮತ್ತು ದೇವಾಲಯಗಳನ್ನು ಸಮೀಕ್ಷೆ ಮಾಡಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳ ಪ್ರಕಾರ, ಈ ಸಮೀಕ್ಷೆಯಲ್ಲಿ 60 ಕ್ಕೂ ಹೆಚ್ಚು ಜಲಮೂಲಗಳು(water bodies), ದೇವಾಲಯಗಳು ಮತ್ತು ಮಠಗಳನ್ನು ಗುರುತಿಸಲಾಗಿದೆ. ಈ ತಂಡವು ರಾಮಾಯಣ ಕಾಲದ ರಚನೆಗಳ ವಿವರಗಳನ್ನು ಸಂಗ್ರಹಿಸಲು ಸ್ಥಳೀಯ ಇತಿಹಾಸಕಾರರ ಸಹಾಯವನ್ನೂ ಪಡೆಯುತ್ತಿದೆ.
ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳ ಬಗ್ಗೆ ವಿವರಿಸಿದ ಪೇಜಾವರ ಶ್ರೀ
ಅಯೋಧ್ಯೆಯ ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿ ಆರ್.ಪಿ.ಯಾದವ್ (R.P. Yadav) ಪ್ರಕಾರ, ಅಯೋಧ್ಯೆಯ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಸರ್ಕಾರ ಬಯಸಿದೆ. ಈ ಸಮೀಕ್ಷೆಯ ಮೂಲಕ, ಅಂತಹ ಎಲ್ಲಾ ರಚನೆಗಳನ್ನು ಗುರುತಿಸಲಾಗುವುದು ಎಂದು ಅವರು ಹೇಳಿದರು. ಸಮೀಕ್ಷೆಯ (survey) ನಂತರ, ಅಯೋಧ್ಯೆ ಆಡಳಿತವು ರಾಜ್ಯ ಸರ್ಕಾರದ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ ಎಂದು ಅಯೋಧ್ಯೆ ಸ್ಥಳೀಯ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ರಾಮ ಜನ್ಮಭೂಮಿ ಕ್ಯಾಂಪಸ್‌ನಲ್ಲಿ 11 ಐತಿಹಾಸಿಕ ರಚನೆಗಳನ್ನು ಗುರುತಿಸಿದೆ, ಅವುಗಳನ್ನು ಅವುಗಳ ಮೂಲ ರೂಪದಲ್ಲಿ ಸಂರಕ್ಷಿಸಿ ಪುನಃಸ್ಥಾಪಿಸಲಾಗುತ್ತದೆ. ಈ 11 ಐತಿಹಾಸಿಕ ಸ್ಥಳಗಳಲ್ಲಿ ಕುಬೇರ್ ತಿಲಾ (Kuber Tila), ಸೀತಾ ಕೂಪ್ (Sita Koop), ಸೀತಾ ರಸೋಯಿ ಮತ್ತು ನಲ್, ನೀಲ್, ಅಂಗದ್ ಮತ್ತು ಸುಗ್ರೀವ್ ತಿಲಾ ಕೂಡ ಸೇರಿವೆ. ಕುಬೇರ ತಿಲವನ್ನು(Kuber Tila) ಹಿಂದೂ ಮುಸ್ಲಿಂ ಐಕ್ಯತೆಯ (Hindu-Muslim unity) ಪ್ರತೀಕ ಎಂದೂ ಶ್ಲಾಘಿಸಲಾಗುತ್ತದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಪ್ರಕಾರ, ಈ 11 ಸ್ಥಳಗಳನ್ನು ಸಂರಕ್ಷಿಸಿ ಪುನಃಸ್ಥಾಪಿಸಲಾಗುವುದು. ಈ ರಚನೆಗಳ ಮರುಸ್ಥಾಪನೆಗಾಗಿ ತಜ್ಞರನ್ನು ಸಂಪರ್ಕಿಸಲು ಟ್ರಸ್ಟ್ ನಿರ್ಧರಿಸಿದೆ.
ಜನರಿಗೆ ಶ್ರೀರಾಮನ ದರ್ಶನ ಯಾವಾಗ? ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಜೊತೆ Exclusive Interview!
ರಾಮ ಜನ್ಮಭೂಮಿ ಕ್ಯಾಂಪಸ್‌ನಲ್ಲಿ (Ram Janmabhoomi campus) ಹನ್ನೊಂದು ರಚನೆಗಳನ್ನು ಗುರುತಿಸಲಾಗಿದೆ. ಅವೆಲ್ಲವನ್ನೂ ಅವುಗಳ ಮೂಲ ಸ್ವರೂಪಕ್ಕೆ ಮರು ಸ್ಥಾಪಿಸಲಾಗುವುದು. ಅವುಗಳ ಮರುಸ್ಥಾಪನೆಗಾಗಿ ಟ್ರಸ್ಟ್ ತಜ್ಞರನ್ನು ನಿಯೋಜಿಸಲಿದೆ ಎಂದು ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ (Anil Mishra) ಹೇಳಿದ್ದಾರೆ.