ನವದೆಹಲಿ(ಮೇ.08): ಕೊರೋನಾ ನಿಯಂತ್ರದಲ್ಲಿ ಕೇಂದ್ರ ಸರ್ಕಾರ ಎಡವುತ್ತಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಅಧಿಕಾರಗ ವಿಕೇಂದ್ರೀಕರಣ ಅಗತ್ಯ. ಆಯಾ ರಾಜ್ಯದ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು. ಬದಲಾಗಿ ಕೇಂದ್ರವೇ ಎಲ್ಲಾ ಅಧಿಕಾರ ಚಲಾಯಿಸಿದರೆ ದೇಶದಲ್ಲಿ ವಿಪತ್ತು ಎದುರಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಘುರಾಮ್ ರಾಜನ್ ಜೊತೆ ಫೇಸ್‌ಬುಕ್‌ ಲೈವ್‌ನಲ್ಲಿ ರಾಹುಲ್ ಗಾಂಧಿ; ಚೇಂಜ್ ಆಗುತ್ತಾ ಇಮೇಜ್ ?.

ಮಾಧ್ಯಮ ಪ್ರತಿನಿಧಿಗಳ ಜೊತೆ ನಡೆಸಿದ ವಿಡಿಯೋ ಕಾನ್ಫೆರನ್ಸ್‌ನಲ್ಲಿ ರಾಹುಲ್ ಗಾಂಧಿ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಕೇಂದ್ರ ಸರ್ಕಾರ ಮಾಡುತ್ತಿರುವ ತಪ್ಪುಗಳ ಕುರಿತು ಮಾತನಾಡಿದ್ದಾರೆ. ಕಾಂಗ್ರೆ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಗಳು ಈಗಾಗಲೇ ದೂರು ನೀಡಿದ್ದಾರೆ. ಕೊರೋನಾ ನಿಯಂತ್ರಕ್ಕೆ ಸಂಬಂಧಿಸಿ ಹಲವು ನಿರ್ಧಾರಗಳು ಹಾಗೂ ಕ್ರಮಗಳನ್ನು ಕೇಂದ್ರವೇ ನಿರ್ಧರಿಸುತ್ತಿದೆ. ಹೀಗಾಗಿ ಪ್ರತಿ ವಿಚಾರಕ್ಕೆ ಕೇಂದ್ರದ ಅಪ್ಪಣೆಗೆ ಕಾಯಬೇಕಾಗಿದೆ. ಇದರಿಂದ ಕೊರೋನಾ ನಿಯಂತ್ರಣ ಹೇಗ ಸಾಧ್ಯ. ಕೇಂದ್ರ ವರದಿ ಆಧಾರದಲ್ಲಿ ಎಲ್ಲವನ್ನೂ ನಿರ್ಧರಿಸುತ್ತಿದೆ. ಆದರೆ ಸ್ಥಳೀಯ ಸರ್ಕಾರಗಳಿಗೆ ವಾಸ್ತವತೆ ತಿಳಿದಿರುತ್ತದೆ. ಈ ಕುರಿತು ಕೇಂದ್ರ ಎಚ್ಚರ ವಹಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

 

ರಾಹುಲ್‌ ಗಾಂಧಿ ಜೊತೆ ಡೇಟ್‌ ಮಾಡಲು ಬಯಸಿದ್ರಂತೆ ಈ ಬಾಲಿವುಡ್‌ ದಿವಾ!

ರಾಜ್ಯಗಳಲ್ಲಿನ ರೆಡ್, ಆರೇಂಜ್, ಗ್ರೀನ್ ವಲಯಗಳನ್ನು ಜಿಲ್ಲಾಧಿಕಾರಿಗಳು, ಆಯಾ ರಾಜ್ಯ ಸರ್ಕಾಗಳು ನಿರ್ಧರಿಬೇಕು, ಇದನ್ನು ಕೇಂದ್ರ ನಿರ್ಧರಿಸಿವುದು ಸರಿಯಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ಸದ್ಯ ಕೆಲ ಕ್ಷೇತ್ರಗಳಲ್ಲಿ ಹೆಸರಿಗೆ ಸ್ವಲ್ವ ಹಣ ನೀಡಿ ಕೇಂದ್ರ ಸರ್ಕಾರ ಕೈತೊಳೆದುಕೊಂಡಿದೆ. ವಲಸೆ ಕಾರ್ಮಿಕರ ಜೀವನ ದುಸ್ತರವಾಗಿದೆ. ಇನ್ನು ಈಗಲೇ ನಿರೋದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಇದು ಸುನಾಮಿಯಾಗಿ ಬದಲಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಯಾವ ಯೋಜನೆಯಾಗಲಿ, ಮುಂಜಾಗ್ರತ ಕ್ರಮವಾಗಲಿ ಕೈಗೊಂಡಿಲ್ಲ. ಬಡವರಿಗೆ, ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರ 65,000 ಕೋಟಿ ರೂಪಾಯಿ ಹಣವನ್ನು ನೀಡಬೇಕು. ಈ ಮೂಲಕ ಸಂಕಷ್ಟದ ಸಮಯದಲ್ಲಿ ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಕೇಂದ್ರ ನೆರವಾಗಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.