ಸಾಲದ ಶೂಲ... ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ ಕುಟುಂಬ, ಪತ್ನಿ ಸಾವು

  • ಫೇಸ್‌ಬುಕ್‌ ಲೈವ್‌ಗೆ ಬಂದು ವ್ಯಾಪಾರಿ ಆತ್ಮಹತ್ಯೆಗೆ ಯತ್ನ
  • ಪತ್ನಿ ಸಾವು, ಉದ್ಯಮಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಜಿಎಸ್‌ಟಿಯಿಂದ ಸಂಕಷ್ಟಕ್ಕೀಡಾಗಿದ್ದೇನೆ ಎಂದ ವ್ಯಾಪಾರಿ
Debt problem UP Trader Attempts suicide On Facebook Live Wife Died akb

ಉತ್ತರಪ್ರದೇಶ(ಫೆ.9): ಸಾಲದ ಸುಳಿಗೆ ಸಿಲುಕಿದ್ದ ಉತ್ತರಪ್ರದೇಶದ (Uttar Pradesh) ವ್ಯಾಪಾರಿಯೊಬ್ಬರು ಫೇಸ್‌ಬುಕ್‌ ಲೈವ್‌ಗೆ ಬಂದು ವಿಷ ಸೇವಿಸಿ ಪತ್ನಿ ಸಮೇತರಾಗಿ ಆತ್ಮಹತ್ಯೆಗೆ ಯತ್ನಿಸಿದ್ದು, ದುರಂತದಲ್ಲಿ ಪತ್ನಿ ಸಾವಿಗೀಡಾಗಿದ್ದಾರೆ. ಉತ್ತರಪ್ರದೇಶದ ಬಾಗಪತ್‌ನಲ್ಲಿ(Baghpat) ಮಂಗಳವಾರ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಅನೇಕ ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಬಾಗ್‌ಪತ್‌ನಲ್ಲಿ ಶೂ ವ್ಯಾಪಾರಿ ರಾಜೀವ್ ತೋಮರ್(Rajiv Tomar) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಅವರ ಪತ್ನಿ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ನಾಳೆ ಮತದಾನ ನಡೆಯಲಿರುವ ಪಟ್ಟಣಗಳ ಪೈಕಿ ಬಾಗ್‌ಪತ್‌ ಕೂಡ ಒಂದಾಗಿದೆ. ನಾಳೆಯಿಂದ ಉತ್ತರಪ್ರದೇಶದಲ್ಲಿ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಭಾಗ್‌ಪತ್‌ನಲ್ಲೂ ನಾಳೆ ಮತದಾನವಿದೆ. ರಾಜೀವ್ ತೋಮರ್  ಆತ್ಮಹತ್ಯೆಗೆ ಯತ್ನಿಸುವ ವೇಳೆ ಫೇಸ್‌ಬುಕ್‌ ಲೈವ್‌ ಬಂದು ಮಾತನಾಡಿದ ಎರಡು ನಿಮಿಷಗಳ ವೀಡಿಯೊ ಈಗ ವೈರಲ್‌ ಆಗಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ರಾಜಕಾರಣಿಗಳು ಪ್ರತಿಕ್ರಿಯಿಸಿದ್ದಾರೆ. 

Cover Story: ಮೊಬೈಲ್‌ ಆ್ಯಪ್‌ನಲ್ಲಿ ಸಾಲ ಮಾಡ್ತೀರಾ.? ಹಾಗಾದ್ರೆ ಈ ಸುದ್ದಿ ನೋಡಿ

ವೀಡಿಯೋದಲ್ಲಿ, ರಾಜೀವ್ ತೋಮರ್‌ನ ಪತ್ನಿ ಆತ ವಿಷ ಕುಡಿಯದಂತೆ ತಡೆಯಲು ಪ್ರಯತ್ನಿಸುತ್ತಿರುವಾಗ ಪೊಟ್ಟಣವನ್ನು ಹರಿದ ತೋಮರ್‌ ಅದರಲ್ಲಿದ್ದ ವಸ್ತುಗಳನ್ನು ನುಂಗುತ್ತಾನೆ. ವಿಡಿಯೋ ಫ್ರೇಮ್‌ನಿಂದ ಹೊರ ಹೋಗುವ ಮೊದಲು ಆಕೆ ಅವನನ್ನು ಉಗುಳುವಂತೆ ಮಾಡಲು ಪ್ರಯತ್ನಿಸುತ್ತಿರುವ ದೃಶ್ಯವಿದೆ. 'ನನಗೆ ಮಾತನಾಡುವ ಸ್ವಾತಂತ್ರ್ಯವಿದೆ ಎಂದು ನಾನು ಭಾವಿಸುತ್ತೇನೆ, ನಾನು ಹೊಂದಿರುವ ಸಾಲವನ್ನು ನಾನು ತೀರಿಸುತ್ತೇನೆ, ನಾನು ಸತ್ತರೂ ನಾನು ಅದನ್ನು ತೀರಿಸುತ್ತೇನೆ, ಆದರೆ ನಾನು ಈ ವೀಡಿಯೊವನ್ನು ಸಾಧ್ಯವಾದಷ್ಟು ಶೇರ್ ಮಾಡಬೇಕೆಂದು ವಿನಂತಿಸುತ್ತೇನೆ, ಆದರೆ ನಾನು ದೇಶ ವಿರೋಧಿ ಅಲ್ಲ ದೇಶದ ಮೇಲೆ ನಂಬಿಕೆ ಇದೆ, ಆದರೆ ನಾನು ಮೋದಿಜಿ (ಪ್ರಧಾನಿ ನರೇಂದ್ರ ಮೋದಿ) ಅವರಿಗೆ ಹೇಳಲು ಬಯಸುತ್ತೇನೆ, ನೀವು ಸಣ್ಣ ವ್ಯಾಪಾರಿಗಳು ಮತ್ತು ರೈತರ ಹಿತೈಷಿಗಳಲ್ಲ, ನಿಮ್ಮ ನೀತಿಗಳನ್ನು ಬದಲಿಸಿ', ಎಂದು ರಾಜೇಶ್‌ ತೋಮರ್ ಕಣ್ಣೀರು ಹಾಕಿದರು.

GST Fraud: 4521 ಕೋಟಿ ರೂ. ನಕಲಿ GST ಇನ್‌ವೈಸ್... ಎಂಥಾ ಕಿರಾತಕ!

ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ತನ್ನ ವ್ಯವಹಾರಕ್ಕೆ ಭಾರಿ ಹೊಡೆತ ನೀಡಿದೆ ಎಂದು ತೋಮರ್‌ ದೂರಿದರು. ಈ ಫೇಸ್‌ಬುಕ್‌ನಲ್ಲಿ ಲೈವ್ ನೋಡುತ್ತಿದ್ದವರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಆಗಮಿಸಿ ರಾಜೀವ್‌ ತೋಮರ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಗೆ ಪ್ರಿಯಾಂಕಾ ಗಾಂಧಿ (Priyanka Gandhi Vadra) ಬೇಸರ ವ್ಯಕ್ತಪಡಿಸಿದ್ದಾರೆ. 'ಬಾಗ್‌ಪತ್‌ನಲ್ಲಿ ಉದ್ಯಮಿ ಮತ್ತು ಅವರ ಪತ್ನಿಯ ಆತ್ಮಹತ್ಯೆಗೆ ಯತ್ನ ಮತ್ತು ಅವರ ಪತ್ನಿಯ ಸಾವಿನ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಕುಟುಂಬ ಸದಸ್ಯರಿಗೆ ನನ್ನ ಸಂತಾಪಗಳು. ರಾಜೀವ್  ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ನಾವು ಯುಪಿಯಾದ್ಯಂತ ಸಣ್ಣ ವ್ಯಾಪಾರಿಗಳು ಹಾಗೂ ವ್ಯವಹಾರಸ್ಥರ ಈ ರೀತಿಯ ಸಂಕಟವನ್ನು ನೋಡುತ್ತಿದ್ದೇವೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಮತ್ತು ಲಾಕ್‌ಡೌನ್ ಅವರಿಗೆ ಹೆಚ್ಚು ಹಾನಿ ಉಂಟು ಮಾಡಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ವರದಿಗಳ ಪ್ರಕಾರ, ಎರಡು ಮಕ್ಕಳ ತಂದೆಯಾದ ರಾಜೀವ್ ತೋಮರ್ ಕೆಲವು ಸಮಯದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು.

Latest Videos
Follow Us:
Download App:
  • android
  • ios