Asianet Suvarna News Asianet Suvarna News

ನಕಲಿ ಮದ್ಯ ಸೇವಿಸಿ ತಮಿಳುನಾಡಿನಲ್ಲಿ 12 ಜನ ಸಾವು; ಜಿಲ್ಲಾಧಿಕಾರಿ ವರ್ಗಾವಣೆ, ಎಸ್‌ಪಿ ಅಮಾನತು!

ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ಇದೀಗ 12ಕ್ಕೆ ಏರಿಕೆಯಾಗಿದೆ. 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತ ಘಟನೆ ಸಂಬಂಧ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದರೆ, ಎಸ್‌ಪಿ ಅಮಾನತ್ತಾಗಿದ್ದಾರೆ.
 

Death Toll reach doubled after consuming illicit liquor in kallakurichi Tamil nadu ckm
Author
First Published Jun 19, 2024, 9:22 PM IST

ಕಲ್ಲಾಕುರಿಚಿ(ಜೂ.19)  ನಕಲಿ ಮದ್ಯ ಸೇವಿಸಿದ ಜನ ತೀವ್ರ ಅಸ್ವಸ್ಥಗೊಂಡಿರುವ ಘಟನೆಯಲ್ಲಿ ಸಾವಿನ ಸಂಖ್ಯೆ ಇದೀಗ 12ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.  ಇಂದು ತಮಿಳುನಾಡಿನ ಕಲ್ಲಾಕುರಿಚಿಯಲ್ಲಿ ನಕಲಿ ಮದ್ಯ ಸೇವಿಸಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ ಆರಂಭದಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ಘಟನೆ ಸಂಬಂಧ ಕಲ್ಲಾಕುರಿಚಿ ಜಿಲ್ಲಾಧಿಯಾರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಇತ್ತ ಪೊಲೀಸ್ ಎಸ್‌ಪಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಕರುಣಾಪುರಂ ಪಟ್ಟಣ ವ್ಯಾಪ್ತಿಯಲ್ಲಿ ಈ ನಕಲಿ ಮದ್ಯವನ್ನು ಮಾರಾಟ ಮಾಡಲಾಗಿದೆ. ದಿನಗೂಲಿ ನೌಕರರು ಇಂದು ಸಂಜೆ ಕಡಿಮೆ ಬೆಲೆಗೆ ಲಭ್ಯವಿದ್ದ ನಕಲಿ ಮದ್ಯವನ್ನು ಸೇವಿಸಿದ್ದಾರೆ. ಮದ್ಯ ಸೇವಿಸಿದ ಕೆಲ ಹೊತ್ತಲ್ಲೇ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ. ಹಲವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕೆಲವರು ಮನೆ ಸೇರಿಕೊಳ್ಳುವ ಹೊತ್ತಿಗೆ ಮೃತಪಟ್ಟಿದ್ದಾರೆ.

ಗೋಕರ್ಣ: ಅಕ್ರಮವಾಗಿ ಗೋವಾ ಮದ್ಯ ಮಾರಾಟ ಪೊಲೀಸ್ ಪೇದೆ ಬಂಧನ

ಘಟನೆ ಬೆನ್ನಲ್ಲೇ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಟಾವತ್ ಪ್ರತಿಕ್ರಿಯೆ ನೀಡಿದ್ದರು. ಘಟನೆಯಲ್ಲಿ ಸಾವಿನ ಸಂಖ್ಯೆ ಕುರಿತು ನಿಖರ ಮಾಹಿತಿ ತಿಳಿದಿಲ್ಲ. 20ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದಿದ್ದರು. ಆದರೆ ಜಿಲ್ಲಾಧಿಕಾರಿ ವ್ಯಾಪ್ತಿಯಲ್ಲಿ ಈ ರೀತಿ ಘಟನೆ ನಡೆದಿರುವ ಕಾರಣ ಜೊತೆಗೆ ಇದೇ ರೀತಿ ಪ್ರಕರಣ ಮರಕಳಿಸಿದ ಕಾರಣ ಇದೀಗ ಶ್ರವಣ್ ಕುಮಾರ್ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕೂಲಿ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಮರಳುವಾಗ ನಕಲಿ ಮದ್ಯ ಕುಡಿದ್ದಾರೆ. ಅಗ್ಗದ ಬೆಲೆಯಲ್ಲಿ ಲಭ್ಯವಾದ ಕಾರಣ ಬಹುತೇಕ ಕೂಲಿ ಕಾರ್ಮಿಕರು ಈ ನಕಲಿ ಮದ್ಯ ಸೇವಿಸಿದ್ದಾರೆ. ಮದ್ಯ ಸೇವಿಸಿ ಮನೆಗೆ ಮರಳಿದ ಹಲವರಿಗೆ ವಾಂತಿ ಭೇದಿ, ಹೊಟ್ಟೆ ನೋವು, ಅಸ್ವಸ್ಥೆತೆ ಕಾಣಿಸಿಕೊಂಡಿದೆ. ಆತಂಕ ಗೊಂಡ ಕುಟಂಬಸ್ಥರು ಆಸ್ಪತ್ರೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಗಂಭೀರವಾಗಿ ಅಸ್ವಸ್ಥಗೊಂಡ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಇದೀಗ ಹಲವು ಕಾರ್ಮಿಕರ ಪರಿಸ್ಥಿತಿ ಗಂಭೀರವಾಗಿದೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಕ್ಕೆ ಆಧಾರವಾಗಿದ್ದವರೇ ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಇದೀಗ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ನಕಲಿ ಮದ್ಯ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ. ಇದರ ಪರಿಣಾಮ ಅಮಾಯಕರು ಬಲಿಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ನಕಲಿ ಮದ್ಯ ಮಾರಾಟ ಮಾಡಿದವರು ನಾಪತ್ತೆಯಾಗಿದ್ದಾರೆ. 

2.43 ಲಕ್ಷ ಎಣ್ಣೆ ಬಾಟಲಿ ಮೇಲೆ ಹರಿದ ರೋಡ್ ರೋಲರ್, ಕ್ಷಣಾರ್ಧದಲ್ಲೇ 5 ಕೋಟಿ ಮೌಲ್ಯದ ಮದ್ಯ ನಾಶ!
 

Latest Videos
Follow Us:
Download App:
  • android
  • ios