Asianet Suvarna News Asianet Suvarna News

ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸಾಧು ವಿಜಯ್‌ ದಾಸ್‌ ಸಾವು!

ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಾರ್ವಜನಿಕವಾಗಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸಾಧು ವಿಜಯ್‌ ದಾಸ್‌, ಶುಕ್ರವಾರ ನಿಧನರಾಗಿದ್ದಾರೆ. ಎರಡು ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ್ದ ಸಂತ ವಿಜಯ್‌ ದಾಸ್‌ ಅವರನ್ನು ದೆಹಲಿಯ ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.
 

Death of Saint Vijay das Who committed Suicide against  illegal stone mining pasopa area of Bharatpur in rajasthan san
Author
Bengaluru, First Published Jul 23, 2022, 1:13 PM IST | Last Updated Jul 23, 2022, 1:13 PM IST

ನವದೆಹಲಿ (ಜುಲೈ 21): ರಾಜಸ್ಥಾನದ ಭರತ್‌ಪುರದ ಪಸೋಪಾ ಪ್ರದೇಶದಲ್ಲಿ ನಡೆಯುತ್ತಿದ್ದಅಕ್ರಮ ಗಣಿಗಾರಿಕೆಯ ವಿರುದ್ಧ ಅಂದಾಜು ಎರಡು ವರ್ಷಗಳ ಕಾಲ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಎರಡು ದಿನಗಳ ಹಿಂದೆಯಷ್ಟೇ ಸಂತ ವಿಜಯ್‌ ದಾಸ್‌ ಅವರು ಸಾರ್ವಜನಿಕವಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸಾಕಷ್ಟು ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿದ್ದ ಕಾರಣಕ್ಕೆ ಅವರನ್ನು ನವದೆಹಲಿಯ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಅವರು ನವದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರನ್ನು ಸಫ್ದರ್‌ಜಂಗ್‌ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಎರಡು ದಿನಗಳ ಹಿಂದೆ ಗಂಭೀರ ಸ್ಥಿತಿಯಲ್ಲಿದ್ದ ಸಂತನನ್ನು ಜೈಪುರದಿಂದ ಸ್ಥಳಾಂತರಿಸಲಾಗಿತ್ತು. ಜುಲೈ 20 ರಂದು ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸಂತರ ಪಾರ್ಥಿವ ಶರೀರವನ್ನು ನವದೆಹಲಿಯಿಂದ ಯುಪಿಯ ಬರ್ಸಾನಾಗೆ ತರಲಾಗುವುದು, ಅಲ್ಲಿ ಅವರ 16 ವರ್ಷದ ಮೊಮ್ಮಗಳಿಗೆ ಸಂತರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆ ಬಳಿಕ ಇಂದು ಸಂಜೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಗಣಿಗಾರಿಕೆ ವಿರುದ್ಧ ಸಂತ ಸಮಾಜದ ಧರಣಿ ಸತ್ಯಾಗ್ರಹ ಸುಮಾರು 500 ದಿನಗಳಿಂದ ನಡೆಯುತ್ತಿತ್ತು.

ಪ್ರತಿಭಟನೆಗೆ ಮಣಿದ ಆಡಳಿತ: ವಿಜಯ್‌ ದಾಸ್ ಅವರು ಆತ್ಮಹತ್ಯೆಗೆ ಯತ್ನಿಸುವ ಮುನ್ನ, ಇನ್ನೊಬ್ಬ ಬಾಬಾ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಆದರೆ, ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ವಿಜಯ್‌ ದಾಸ್ ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲಿಯೇ ಸ್ಥಳೀಯ ಆಡಳಿತವು ಸಂತ ಸಮಾಜದ ಬೇಡಿಕೆಯನ್ನು ಒಪ್ಪಿಕೊಂಡಿದ್ದು, ಗಣಿಗಾರಿಕೆ ನಿಲ್ಲಿಸುವುದಾಗಿ ಹೇಳಿದೆ. ಅದರ ಬೆನ್ನಲ್ಲಿಯೇ ಸುದೀರ್ಘ ದಿನಗಳ ಕಾಲ ನಡೆದ ಪ್ರತಿಭಟನೆಯೂ ಕೊನೆಯಾಗಿದೆ.

16 ವರ್ಷದ ಮೊಮ್ಮಗಳು ಅನಾಥ: ಹರಿಯಾಣ ಸಂತ ವಿಜಯ್ ದಾಸ್ ಅವರು ಹರಿಯಾಣದ ಫರಿದಾಬಾದ್ ಜಿಲ್ಲೆಯ ಬದಲಾ ಗ್ರಾಮದ ನಿವಾಸಿಯಾಗಿದ್ದರು. ಸನ್ಯಾಸಿಯಾಗುವ ಮೊದಲು ಅವರ ಹೆಸರು ಮಧುಸೂದನ್ ಶರ್ಮಾ. ಅವರ ಮಗ ಮತ್ತು ಸೊಸೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇದಾದ ನಂತರ ಬಾಬಾ ಮತ್ತು ಅವರ ಒಬ್ಬ ಮೊಮ್ಮಗಳು ಕುಟುಂಬದಲ್ಲಿ ಉಳಿದಿದ್ದರು. ಈಗ ವಿಜಯ್‌ ದಾಸ್ ಕೂಡ ನಿಧನರಾಗಿರುವುದರಿಂದ 16 ವರ್ಷದ ಮೊಮ್ಮಗಳು ಮಾತ್ರವೇ ಕುಟುಂಬದಲ್ಲಿದ್ದಾರೆ.

ಆದಿಬದ್ರಿ-ಕಂಕಂಚಲ್ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ: ಮಗ ಮತ್ತು ಸೊಸೆಯ ಮರಣದ ನಂತರ, ಅವರು 12 ವರ್ಷಗಳ ಹಿಂದೆ ಉತ್ತರ ಪ್ರದೇಶದ ಬರ್ಸಾನಕ್ಕೆ ಬಂದಿದ್ದರು, ಅವರು ತಮ್ಮ ಮೊಮ್ಮಗಳ ಜೊತೆ ಉತ್ತರ ಪ್ರದೇಶದ ಬರ್ಸಾನಾದ ಮಾನ್ ದೇವಸ್ಥಾನದಲ್ಲಿ ವಾಸವಿದ್ದರು. ಸಂತ ವಿಜಯ್ ದಾಸ್ ಮೊಮ್ಮಗಳು ದುರ್ಗಾ ಅವರನ್ನು ಗುರುಕುಲದಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಸಿದ್ದರು. ಸಂತ ರಮೇಶ್‌ ಬಾಬಾ ಅವರ ಸಂಪರ್ಕಕ್ಕೆ ಬಂದ ಬಳಿಕ ಋಷಿಗಳ ಸಭೆಯಲ್ಲಿ ಸಂತ ವಿಜಯ್‌ ದಾಸ್‌ ಎನ್ನುವ ಹೆಸರನ್ನು ಪಡೆದುಕೊಂಡಿದ್ದರು. 2017ರಲ್ಲಿ ರಾಜಸ್ಥಾನದಲ್ಲಿ ತೀರಾ ಧಾರ್ಮಿಕ ಪ್ರದೇಶವಾದ ಆದಿಬದ್ರಿ ಹಾಗೂ ಕಂಕಂಚಲ್ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ನಿಲ್ಲಿಸುವ ಪ್ರತಿಭಟನೆಗೆ ಕೈಜೋಡಿಸಿದ್ದರು.

ಅಕ್ರಮ ಕಲ್ಲುಗಣಿಗಾರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿ!

ಒಂದೂವರೆ ವರ್ಷಗಳ ಹಿಂದೆ ಪಸೋಪಾ ಗ್ರಾಮದ ಪಸೋಪಾನಾಥ ದೇವಾಲಯದ ಮಹಂತರನ್ನಾಗಿ ವಿಜಯ್‌ ದಾಸ್‌ ಅವರನ್ನು ನೇಮಕ ಮಾಡಲಾಗಿತ್ತು. ದೇವಸ್ಥಾನದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಅವರ ಮೇಲಿತ್ತು. ದೆಹಲಿಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ, ಮಧ್ಯಾಹ್ನದ ವೇಳೆಗೆ ಅವರ ದೇಹವನ್ನು ಬರ್ಸಾನಾಗೆ ತರಲಾಗುವುದು. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬರ್ಸಾನಾದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಋಷಿಮುನಿಗಳು ಅವರ ನಿವಾಸಕ್ಕೆ ಆಗಮಿಸಿದ್ದಾರೆ.

ಕನ್ಹಯ್ಯಾ ಹಂತಕನನ್ನು ಬಿಜೆಪಿ ನಾಯಕರೇ ಶಿಫಾರಸು ಮಾಡಿದ್ದರು: ಹಳೇ ವಿಚಾರ ಕೆದಕಿದ ಗೆಹ್ಲೋಟ್

10 ಬಸ್‌ಗಳ ವ್ಯವಸ್ಥೆ: ಬಾಬಾ ಅವರ ಅಂತಿಮ ಸಂಸ್ಕಾರವನ್ನು ಭರತ್‌ಪುರದ ಪಸೋಪಾದಲ್ಲಿ ನಡೆಸಬೇಕಾಗಿತ್ತು, ಆದರೆ ಆಡಳಿತವು ಇಂದು ಋಷಿಗಳು ಮತ್ತು ಗ್ರಾಮಸ್ಥರಿಗೆ ಬರ್ಸಾನಾದಲ್ಲಿ ಅಂತಿಮ ವಿಧಿಗಳನ್ನು ನಡೆಸುವಂತೆ ಮನವಿ ಮಾಡಿದೆ. ಈ ಕುರಿತು ಸಂತ ಸಮಾಜದ ಸಭೆ ನಡೆಸಿ ಬರ್ಸಾನಾದಲ್ಲಿ ಅಂತಿಮ ಸಂಸ್ಕಾರಕ್ಕೆ ಒಪ್ಪಿಗೆ ಸೂಚಿಸಲಾಯಿತು. ಬಾಬಾ ವಿಜಯ್ ದಾಸ್ ಕೂಡ ಹಲವು ವರ್ಷಗಳಿಂದ ಬರ್ಸಾನಾದ ಮನ್ ಮಂದಿರದಲ್ಲಿ ನೆಲೆಸಿದ್ದರು. ಬರ್ಸಾನಾದ ಮನ್ ಮಂದಿರದ ಬಳಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಬಾಬಾ ಆಪ್ತ ಸಂತ ರಾಧಾಕೃಷ್ಣ ಶಾಸ್ತ್ರಿ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಭರತ್‌ಪುರ ಜಿಲ್ಲಾಡಳಿತವು ಸಾಧು-ಸಂತರು ಮತ್ತು ಗ್ರಾಮಸ್ಥರನ್ನು ಪಸೋಪಾದಿಂದ ಬರ್ಸಾನಾಕ್ಕೆ ಕರೆದೊಯ್ಯಲು 10 ಬಸ್‌ಗಳನ್ನು ವ್ಯವಸ್ಥೆ ಮಾಡಿದೆ.

Latest Videos
Follow Us:
Download App:
  • android
  • ios