ದೆಹಲಿ(ಮೇ.29): ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಇದೇ ಮೊದಲ ಬಾರಿಗೆ ಗರಿಷ್ಠ ಪ್ರಕರಣಗಳು ದೆಹೆಲಯಲ್ಲಿ ದಾಖಲಾಗಿದೆ. ಬರೋಬ್ಬರಿ 1,024 ಕೊರೋನಾ ಪ್ರಕರಣ 24 ಗಂಟೆಯಲ್ಲಿ ದಾಖಲಾಗಿದೆ. ಇಷ್ಟೇ ಅಲ್ಲ 316 ಮಂದಿ ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ನಗರದ ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕು ಸೇರಿದಂತೆ ಹಲವು ಕಾರಣಗಳಿಂದ ಮೃತಪಟ್ಟ ಶವಗಳೇ ತುಂಬಿಹೋಗಿದೆ.

ಲೋಕನಾಯಕ ಜಯಪ್ರಕಾಶ್ ಆಸ್ಪತ್ಪೆಯ ಶವಗಾರದಲ್ಲಿ ಗರಿಷ್ಠ 45 ಮೃತ ದೇಹಗಳನ್ನಿಡಲು ವ್ಯವಸ್ಥೆ ಇದೆ. ಆದರೆ ಇದೀಗ 108 ಶವಗಳನ್ನು ಇಡಲಾಗಿದೆ. ಇನ್ನು 28 ಶವಗಳಿಗೆ ಜಾಗವಿಲ್ಲದೆ ಆಸ್ಪತ್ರೆಯ ಪ್ಯಾಸೇಜ್‌ನಲ್ಲಿ ಇಡಲಾಗಿದೆ. ಅತ್ತ ಮೃತ ದೇಹವಿಡಲು ಶವಾಗಾರವೂ ಇಲ್ಲ, ಇತ್ತ ಅಂತ್ಯ ಸಂಸ್ಕಾರ ಮಾಡುವವರೂ ಇಲ್ಲದೆ ಶವಗಳು ಅನಾಥವಾಗಿ ಬಿದ್ದಿದೆ. 

ಘಾಟ್‌ನಲ್ಲಿ ಸಿಬ್ಬಂದಿ ಕೊರತೆಯಿಂದ ಅಂತ್ಯಸಂಸ್ಕಾರ ತಡವಾಗುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ದೆಹಲಿಯಲ್ಲಿ 18,281 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದೆ.