ಲೀವ್ ಇನ್ ರಿಲೇಶನ್‌ಶಿಪ್‌ನಿಂದ ದೂರವಿರಿ, ಇಲ್ಲಾ 50 ಪೀಸ್ ಆಗ್ತೀರಿ, ಯುಪಿ ರಾಜ್ಯಪಾಲರ ಎಚ್ಚರಿಕೆ ನೀಡಿದ್ದಾರೆ. ಹುಡುಗಿಯರಿಗೆ ನೀಡಿದ ಎಚ್ಚರಿಕೆ ಮಾತು ಇದೀಗ ವಿವಾದಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಯುಪಿ ರಾಜ್ಯಪಾಲೆ ಹೇಳಿದ್ದೇನು?
ಲಖನೌ (ಅ.09) ಲೀವ್ ಇನ್ ರಿಲೇಶನ್‌ಶಿಪ್ ಜೋಡಿಗಳ ಪ್ರಕರಣಗಳು ವರದಿಯಾಗುವುದು ಮಾತ್ರವಲ್ಲ, ದೇಶಾದ್ಯಂತ ಕೋಲಾಹಲ ಸೃಷ್ಟಿಸಿದ ಘಟನೆಗಳೇ ಹೆಚ್ಚು. ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿನ ಮನಸ್ತಾಪ ಅತೀ ಭೀಕರವಾಗಿ ಅಂತ್ಯಗೊಂಡ ಉದಾಹರಣೆಗಳಿವೆ. ಯುವ ಸಮೂಹ ಉದ್ದೇಶಿ ಮಾತನಾಡಿದ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹುಡುಗಿಯರು, ಯುವತಿಯರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಲೀವ್ ಇನ್ ರಿಲೇಶನ್‌ಶಿಪ್‌ನಿಂದ ದೂರ ಉಳಿಯಿರಿ, ಇಲ್ಲದಿದ್ದೆ 50 ತುಂಡುಗಳಾಗಿ ಪತ್ತೆಯಾಗುತ್ತೀರಿ ಎಂದು ಆನಂದಿಬೆನ್ ಪಟೇಲ್ ಎಚ್ಚರಿಸಿದ್ದಾರೆ. ಈ ಎಚ್ಚರಿಕೆ ಇದೀಗ ವಿವಾದವಾಗಿದೆ.
ವೈಯುಕ್ತಿಕ ನಿರ್ಧಾರದಲ್ಲಿ ಹತ್ತು ಬಾರಿ ಯೋಚಿಸಿ
ವಾರಣಾಸಿಯ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ 47ನೇ ಕಾನ್ವೋಕೇಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜ್ಯಪಾಲೆ ಆನಂದಿಬೆನ್ ಪಟೇಲ್, ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದ್ದಾರೆ. ಹೆಣ್ಣುಮಕ್ಕಳನ್ನುದ್ದೇಶಿ ಕೆಲ ಸಲಹೆ ನೀಡಿದ್ದಾರೆ. ಹೆಣ್ಣುಮಕ್ಕಳು ತೆಗೆದುಕೊಳ್ಳುವ ತಮ್ಮ ವೈಯುಕ್ತಿಕ ನಿರ್ಧಾರ ಕುರಿತು ಹಲವು ಭಾರಿ ಆಲೋಚಿಸಬೇಕು. ಬಳಿಕ ಪಶ್ಚತ್ತಾಪ ಪಟ್ಟರೆ ಪ್ರಯೋಜನವಿಲ್ಲ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆನಂದಿಬೆನ್ ಪಟೇಲ್ ಹೇಳಿದ್ದಾರೆ. ಇದೇ ವೇಳೆ ಬಹುತೇಕ ಲೀವ್ ಇನ್ ರಿಲೇಶನ್‌ಶಿಪ್ ಪ್ರಕರಣದ ಅಂತ್ಯದ ಕುರಿತು ಮಾತನಾಡಿದ ಪಟೇಲ್, ಹೆಣ್ಣುಮಕ್ಕಳು ಈ ಸಂಬಂಧದಿಂದ ದೂರವಿರಬೇಕು ಎಂದು ಎಚ್ಚರಿಸಿದ್ದಾರೆ.
ಪ್ರತಿ ಹೆಜ್ಜೆ ಇಡುವಾಗಲು ಎಚ್ಚರಿಕೆ ಅಗತ್ಯ
ಹೆಣ್ಣುಮಕ್ಕಳು ಪ್ರತಿ ಹೆಜ್ಜೆ ಇಡುವಾಗಲು ಎಚ್ಚರಿಕೆ ಅಗತ್ಯ. ಲೀವ್ ಇನ್ ರಿಲೇಶನ್‌ಶಿಪ್ ಹೆಣ್ಣಿನ ಸುರಕ್ಷತೆ ಹಾಗೂ ಭವಿಷ್ಯಕ್ಕೆ ಉತ್ತಮವಲ್ಲ.ಇದು ಇಡೀ ಜೀವನವನ್ನೇ ಹಾಳಮಾಡಬಲ್ಲದು ಎಂದು ಆನಂದಿಬೆನ್ ಪಟೇಲ್ ಎಚ್ಚರಿಸಿದ್ದಾರೆ. ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಹೆಣ್ಣುಮಕ್ಕಳ ಮೇಲೆ ಆಗಿರುವ ದಾಳಿ ಕುರಿತು ಉಲ್ಲೇಖಿಸಿದ ಆನಂದಿಬೆನ್ ಪಟೇಲ್ ಇದರ ಅಂತ್ಯ ಹಲವು ತುಂಡುಗಳಾಗಿ ಆಗಿದೆ. ಹೀಗಾಗಿ ಈ ಸಂಬಂಧಕ್ಕೆ ಜೋತು ಬಿದ್ದರೆ, 50 ಪೀಸ್ ಆಗಿ ಎಲ್ಲಾದರು ಪತ್ತೆಯಾಗುತ್ತೀರಾ ಎಂದು ಆನಂದಿಬೆನ್ ಪಟೇಲ್ ಎಚ್ಚರಿಸಿದ್ದಾರೆ.
ಲೀವ್ ಇನ್ ರಿಲೇಶನ್‌ಶಿಪ್ ಫಲಿತಾಂಶ 50 ಪೀಸ್
ನೀವು ಲೀವ್ ಇನ್ ರಿಲೇಶನ್‌ಶಿಪ್ ಫಲಿತಾಂಶ ನೋಡಿದ್ದೀರಾ? ರಾಜ್ಯಪಾಲೆಯಾಗಿ ನನೆಗೆ ಪ್ರತಿ ದಿನ ವರದಿಗಳು ಬರುತ್ತಿದೆ. ಈ ಪೈಕಿ ಹೆಚ್ಚು ಪ್ರಕರಣಗಳು ಲೀವ್ ಇನ್ ರಿಲೇಶನ್‌ಶಿಪ್ ಹತ್ಯೆ ಕುರಿತು ಆಗಿದೆ. ಕಳೆದ 10 ದಿನದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿದೆ.ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಬುದುಕನ್ನು ಸುಂದರವಾಗಿ ಕಟ್ಟಿಕೊಂಡ ಉದಾಹರಣೆ ಎಲ್ಲಿದೆ. ಇದು ಆ ಕ್ಷಣಕ್ಕೆ ಹುಟ್ಟಿಕೊಳ್ಳವ ಸಂಬಂಧ. ಇದರಿಂದ ಭವಿಷ್ಯವೂ ಇಲ್ಲ, ನೆಮ್ಮದಿಯೂ ಇಲ್ಲ, ಸುರಕ್ಷತೆಯೂ ಇಲ್ಲ. ಕೊನೆಗೆ 50 ಪೀಸ್ ಪತ್ತೆ ಇದೇ ಫಲಿತಾಂಶ ಎಂದು ಆನಂದಿಬೆನ್ ಪಟೇಲ್ ಹೇಳಿದ್ದಾರೆ. ನಮ್ಮ ಹೆಣ್ಣುಮಕ್ಕಳು ಯಾಕೆ ಈ ರೀತಿ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಇತ್ತೀಚೆಗೆ ಪೋಕ್ಸ್ ಪ್ರಕರಣದ ಸಂತ್ರಸ್ತರನ್ನು ಭೇಟಿ ಮಾಡಿದ್ದೇನೆ. ಪ್ರತಿಯೊಬ್ಬ ಹೆಣ್ಣುಮಗುವಿನ ದಾರುಣ ಕತೆ ಕೇಳಿ ನೊಂದಿದ್ದೇನೆ. ಸಂಕಟಪಟ್ಟಿದ್ದೇನೆ. ಅವರಿಗೆ ನ್ಯಾಯಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಈ ಕೂಪಕ್ಕೆ ಬೀಳದಂತೆ ಎಚ್ಚರವಹಿಸಬೇಕು ಎಂದು ಆನಂದಿಬೆನ್ ಪಟೇಲ್ ಎಚ್ಚರಿಸಿದ್ದಾರೆ.
ವಿಶ್ವವಿದ್ಯಾಲಯಗಳು, ಕಾಲೇಜುಗಳು ಮಾರ್ಗದರ್ಶನ ನೀಡಬೇಕು
ವಿಶ್ವವಿದ್ಯಾಲಯ, ಕಾಲೇಜುಗಳು ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವ ಕುರಿತು ತಿಳಿ ಹೇಳಬೇಕು. ಗೊತ್ತಿಲ್ಲದಂತೆ ಹೇಗೆ ಹೆಣ್ಣುಮಕ್ಕಳನ್ನು ಟ್ರಾಪ್‌ನಲ್ಲಿ ಸಿಲುಕಿಸುತ್ತಾರೆ. ಮೋಸದ ಬೆಲೆಗ ಬೀಳಿಸುತ್ತಾರೆ ಅನ್ನೋ ಕುರಿತು ಜಾಗೃತಿ ಮೂಡಿಸಬೇಕು. ನಮ್ಮ ಹೆಣ್ಣುಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಬೆಳೆಯಬೇಕು. ಇದಕ್ಕೆ ಲೀವ್ ಇನ್ ರಿಲೇಶನ್‌ಶಿಪ್ ಸೇರಿದಂತೆ ಇತರ ಸಂಬಂಧ ತಡೆಗೋಡೆ ತಂದು ಕೊನೆಗೆ ಕಣ್ಮೀರು ಹಾಕುವುದಲ್ಲ ಎಂದು ಆನಂದಿಬೆನ್ ಪಟೇಲ್ ಎಚ್ಚರಿಸಿದ್ದಾರೆ.
