Relationship: ಹೆಂಡ್ತಿ ಗಂಡನ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಮುಖ್ಯ ಕಾರಣಗಳಿವು
ಹೆಂಡತಿಯಾದವಳು ಗಂಡನ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಹಲವು ಕಾರಣಗಳಿರಬಹುದು. ಅವರ ಆರೋಗ್ಯ ಮತ್ತು ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿರಬಹುದು ಅಥವಾ ಸಾಮಾಜಿಕ ಹಾಗೂ ಮಾನಸಿಕ ಕಾರಣಗಳಾಗಿರಬಹುದು. ಆದ್ದರಿಂದ ಹೆಂಡತಿ ಗಂಡನ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಮುಖ್ಯ ಕಾರಣಗಳೇನು ಎಂದು ಇಲ್ಲಿ ಕೊಡಲಾಗಿದೆ ನೋಡಿ…

ಪ್ರೀತಿ ಕಡಿಮೆಯಾದರೆ
ಸಂಬಂಧ ಚೆನ್ನಾಗಿರಲು ಪ್ರೀತಿ ಬಹಳ ಮುಖ್ಯ. ಪ್ರೀತಿ ಕಡಿಮೆಯಾದರೆ ಅದು ಸಂಬಂಧದಲ್ಲಿ ಅಡ್ಡಿ ಉಂಟುಮಾಡುತ್ತದೆ. ಗಂಡ ತನ್ನ ಆಲೋಚನೆಗಳು, ಭಾವನೆಗಳು ಮತ್ತು ವಾಸ್ತವಗಳನ್ನು ವ್ಯಕ್ತಪಡಿಸದಿದ್ದರೆ ಅದು ಹೆಂಡತಿಗೆ ತುಂಬಾ ನಕರಾತ್ಮಕವಾದ ಭಾವನೆ ಉಂಟು ಮಾಡುತ್ತದೆ. ಆದ್ದರಿಂದ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಪ್ರೀತಿಯನ್ನು ತೋರಿಸುವುದು ಮತ್ತು ನೀಡುವುದು ಬಹಳ ಮುಖ್ಯ .
ಪ್ರತಿಯೊಂದು ಸಣ್ಣ ವಿಷಯಕ್ಕೂ ಜಗಳಗಳು ಪ್ರಾರಂಭ
ನೀವು ಸದಾ ಜಗಳವಾಡುತ್ತಲೇ ಇದ್ದರೆ ಸ್ವಲ್ಪ ಸಮಯದ ನಂತರ ಯಾವುದೇ ಮಹಿಳೆ ಆ ಸಂಬಂಧದಲ್ಲಿ ಮುಂದುವರಿಯುವುದಕ್ಕೆ ಇಷ್ಟಪಡಲ್ಲ. ಇಂದಿನ ಯುಗದಲ್ಲಿ ಪ್ರತಿಯೊಬ್ಬ ಮಹಿಳೆ ಬಹಿರಂಗವಾಗಿ ತನ್ನ ಧ್ವನಿಯನ್ನು ಎತ್ತಲು ಪ್ರಾರಂಭಿಸಿದ್ದಾಳೆ. ಒಂದು ವೇಳೆ ಹೆಂಡತಿ ತನ್ನ ಗಂಡನೊಂದಿಗೆ ಒತ್ತಡ ಅನುಭವಿಸುತ್ತಿದ್ದರೆ, ಸಂತೋಷ ಕಾಣದಿದ್ದರೆ ಸಂಬಂಧವು ಕೊನೆಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ಹೆಂಡತಿಯನ್ನು ಪ್ರತಿಯೊಂದು ಸಣ್ಣ ವಿಷಯಕ್ಕೂ ತಡೆಯುವ ಬದಲು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
ದೂರವಾಗಲು ಪ್ರಾರಂಭ
ಹೆಂಡತಿ ತನ್ನ ಸಂಗಾತಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳಲು ಪ್ರಾರಂಭಿಸಿದಾಗ ಅವಳು ಬೇರೊಬ್ಬರ ಬಗ್ಗೆ ಆಸಕ್ತಿ ಹೊಂದಲು ಪ್ರಾರಂಭಿಸುತ್ತಾಳೆ. ಅಂತಹ ಸಮಯದಲ್ಲಿ ಅವಳು ನಿಮ್ಮಿಂದ ದೂರವಾಗಲು ಪ್ರಾರಂಭಿಸುತ್ತಾಳೆ. ಅದಕ್ಕಾಗಿಯೇ ಗಂಡನಾದವನು ಅವಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
ಸಂಬಂಧದಲ್ಲಿ ನೆಮ್ಮದಿಯಿಲ್ಲ
ಹೆಂಡತಿ ತನ್ನ ಗಂಡನೊಂದಿಗೆ ಆರಾಮದಾಯಕವಾಗಿರಲು ಸಾಧ್ಯವಾಗದಿದ್ದರೆ ಇದರಿಂದಾಗಿ ಆಕೆಯ ಗಂಡನೂ ಅವಳಲ್ಲಿ ಆಸಕ್ತಿ ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ. ಸಂಬಂಧದಲ್ಲಿ ಸಂಪೂರ್ಣವಾಗಿ ಆರಾಮದಾಯಕವಾಗಿರುವುದು ಬಹಳ ಮುಖ್ಯ. ಅನ್ಯೋನ್ಯತೆಯ ಸಮಯದಲ್ಲಿಯೂ ಹೆಂಡತಿ ತನ್ನ ಗಂಡನೊಂದಿಗೆ ಆರಾಮದಾಯಕವಾಗಿರಲು ಸಾಧ್ಯವಾಗದಿದ್ದಾಗ ದೂರ ಸರಿಯಲು ಪ್ರಾರಂಭಿಸುತ್ತಾಳೆ. ಹೆಂಡತಿ ದೈಹಿಕವಾಗಿ ಉತ್ತಮವಾಗಿರಲು ಸಾಧ್ಯವಾಗದಿದ್ದಾಗ ಇಬ್ಬರ ನಡುವೆ ಅಂತರ ಬರಲು ಪ್ರಾರಂಭಿಸುತ್ತದೆ.
ಅನುಚಿತ ನಡವಳಿಕೆ
ಅವಮಾನ, ಹಿಂಸೆ ಅಥವಾ ಇತರ ಬೆದರಿಕೆಯಂತಹ ಯಾವುದೇ ರೀತಿಯ ಅನುಚಿತ ನಡವಳಿಕೆಯು ಹೆಂಡತಿ ತಮ್ಮ ಗಂಡನಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಲು ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ಸಂಗಾತಿಯಿಂದ ದೂರವಿರಲು ಒಲವು ತೋರಬಹುದು.
ಭಾವನಾತ್ಮಕ ದುರುಪಯೋಗ
ಕೆಲವು ಪಾರ್ಟನರ್ಸ್ ಭಾವನಾತ್ಮಕ ದೌರ್ಜನ್ಯದಲ್ಲಿ ತೊಡಗುತ್ತಾರೆ. ಇದು ಮಹಿಳೆಯರ ವಿಷಯಕ್ಕೆ ಬಂದಾಗ ಹೆಚ್ಚು ಮುಖ್ಯವಾಗಿದೆ. ಈ ದೌರ್ಜನ್ಯವು ಅವರನ್ನು ಅಸುರಕ್ಷಿತ ಅಥವಾ ಕೀಳಾಗಿ ಭಾವಿಸುವಂತೆ ಮಾಡುತ್ತದೆ. ಇದು ಹೆಂಡತಿ ಗಂಡನಿಂದ ದೂರವಾಗುವಂತೆ ಮಾಡಬಹುದು.