Operation Ganga: ಉಕ್ರೇ​ನ್‌​ನ​ಲ್ಲಿನ ಭಾರ​ತೀ​ಯರ ರಕ್ಷ​ಣೆ​ಯಲ್ಲಿ ಬೆಳ​ಗಾವಿ ಸೊಸೆ!

* ರೆಸ್ಕ್ಯೂ ವಿಮಾನದಲ್ಲಿ ಪೈಲಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ

* ಉಕ್ರೇ​ನ್‌​ನ​ಲ್ಲಿನ ಭಾರ​ತೀ​ಯರ ರಕ್ಷ​ಣೆ​ಯಲ್ಲಿ ಬೆಳ​ಗಾವಿ ಸೊಸೆ

Daughter In Law Of Belagavi Disha in Operation Ganga Ukraine Evacuation pod

ಬೆಳಗಾವಿ(ಮಾ.07): ಬೆಳಗಾವಿಯ ಕುಟುಂಬವೊಂದರ ಸೊಸೆಯಾಗಿರುವ ಮಹಿಳಾ ಪೈಲಟ್‌ ಒಬ್ಬರು ಉಕ್ರೇನನಿಂದ ಭಾರತೀಯರನ್ನು ಕರೆತರುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬೆಳಗಾವಿಯ ಶಿವಬಸವ ನಗರದ ನಿವಾಸಿ ಪದ್ಮಜಾ ಪ್ರಹ್ಲಾದ ಮಣ್ಣೂರ ದಂಪತಿ ಪುತ್ರ ಆದಿತ್ಯಾ ಅವರ ಪತ್ನಿಯಾಗಿರುವ ದಿಶಾ ಅವ​ರು ಉಕ್ರೇನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಕೆಲಸದಲ್ಲಿ ತೊಡಗಿದ್ದಾರೆ. ಸದ್ಯ ಪದ್ಮಜಾ ಕುಟುಂಬ ಮುಂಬೈಯಲ್ಲಿ ವಾಸವಾಗಿದ್ದರೆ, ದಿಶಾ ದೆಹಲಿಯಲ್ಲಿ ವಾಸವಾಗಿದ್ದಾರೆ.

ಉಕ್ರೇನ್‌ನಲ್ಲಿ ಗಾಯಗೊಂಡಿದ್ದ ಹರ್ಜೋತ್ ವಾಯುಪಡೆಯ ವಿಶೇಷ ವಿಮಾನದಲ್ಲಿ ಭಾರತಕ್ಕೆ!

ದಿಶಾ ಮತ್ತು ಪತಿ ಆದಿತ್ಯಾ ಮಣ್ಣೂರ ಇಬ್ಬರು ಕೂಡ ಏರ್‌ ಇಂಡಿಯಾದ ಪೈಲಟ್‌ಗಳಾಗಿದ್ದಾರೆ. ದಿಶಾ 2011ನೇ ಸಾಲಿನಲ್ಲಿ ನ್ಯೂಜಿಲೆಂಡ್‌ನ ವೆಲಿಂಗಟನ್‌ನಲ್ಲಿ ಪೈಲಟ್‌ ತರಬೇತಿ ಪಡೆದು 2017ರಲ್ಲಿ ಏರ್‌ ಇಂಡಿಯಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅಂದಿನಿಂದಲೂ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ವಿಮಾನ ಹಾರಿಸಿರುವ ಹೆಗ್ಗಳಿಕೆ ದಿಶಾರದ್ದು. ದಿಶಾ ಅವರು ಏರ್‌ ಇಂಡಿಯಾ ಲಿಮಿಟೆಡ್‌ನ ಪೈಲಟ್‌ ಡ್ರೀಮ್ ಲೈನರ್‌ ಬಿ 787 ವಿಮಾನವನ್ನು ಹಾರಿಸಿ ದಾಖಲೆ ಗೈದಿರುವರು. ಸದ್ಯ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಲ್ಲಿ ಸಿಲುಕಿಕೊಂಡು ಜೀವ ರಕ್ಷಣೆಗಾಗಿ ಪರದಾಡುತ್ತಿರುವ 242 ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲು ಅವರು ಇತ್ತೀಚೆಗೆ ಏರ ಇಂಡಿಯಾದ ಇನ್ನೂ 4 ಪೈಲಟ್‌Üಳೊಂದಿಗೆ 1ನೇ ರೆಸ್ಕೂ್ಯ ವಿಮಾನ ಎ ಆಯ… 1947 ಅನ್ನು ನವದೆಹಲಿಯಿಂದ ಉಕ್ರೇನ್‌(ಕೀವ್‌) ಹೋಗಿ ನೂರಾರು ಭಾರತೀಯರನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತದ ಪ್ರಭಾವ ಹೆಚ್ಚುತ್ತಿರುವುದೇ ಆಪರೇಶನ್‌ ಗಂಗಾ ಯಶಸ್ಸಿಗೆ ಕಾರಣ

ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚುತ್ತಿರುವುದೇ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಭಾರತ ಕೈಗೊಂಡಿರುವ ಆಪರೇಶನ್‌ ಗಂಗಾ ಯಶಸ್ವಿಯಾಗಲು ಕಾರಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಪುಣೆಯಲ್ಲಿ ಸಿಂಬಯಾಸಿಸ್‌ ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

’ಉಕ್ರೇನ್‌ನಲ್ಲಿ ಸಿಲಿಕಿರುವವರನ್ನು ಕರೆತರಲು ಹಲವು ದೊಡ್ಡ ದೇಶಗಳು ಅನೇಕ ಸವಾಲುಗಳನ್ನು ಎದುರಿಸಿದವು. ಆದರೆ ಭಾರತ ಆಪರೇಶನ್‌ ಗಂಗಾ ಯೋಜನೆಯಡಿ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಅಂತಾರಾಷ್ಟ್ರೀಯವಾಗಿ ಭಾರತ ಹೊಂದಿರುವ ವರ್ಚಸ್ಸಿನಿಂದಾಗಿ ಇದು ಸಾಧ್ಯವಾಯಿತು. ದೇಶದ ಯುವಶಕ್ತಿ ಉಕ್ರೇನ್‌ನಲ್ಲಿ ಉಂಟಾಗಿದ್ದಂತಹ ಸವಾಲುಗಳು ಎದುರಿಸಲು ಶಕ್ತವಾಗಿದೆ. ಇದು ಭಾರತ ಬದಲಾಗಿರುವುದನ್ನು ಸೂಚಿಸುತ್ತಿದೆ. ಕೋವಿಡ್‌ ಸಾಂಕ್ರಾಮಿಕವನ್ನು ಭಾರತ ಸಮರ್ಥವಾಗಿ ನಿಭಾಯಿಸಿತ್ತು. ಈಗ ಉಕ್ರೇನ್‌ ಬಿಕ್ಕಟ್ಟನ್ನು ನಿಭಾಯಿಸಿದ್ದೇವೆ’ ಎಂದು ಅವರು ಹೇಳಿದರು.

ಅಂದು ಪುಟಿನ್ ಹಿಂದೆ ಕೈಕಟ್ಟಿ ನಿಂತಿದ್ದ ಮೋದಿ, ಮತ್ತೆ ವೈರಲ್ ಆಯ್ತು ಫೋಟೋ

ಉಕ್ರೇನಿಂದ 86 ಕನ್ನಡಿಗರ ಆಗಮನ: ಒಟ್ಟು 458

ಆಪರೇಷನ್‌ ಗಂಗಾ ಕಾರ್ಯಾಚರಣೆಯಲ್ಲಿ ಉಕ್ರೇನ್‌ನಿಂದ ರಾಜ್ಯಕ್ಕೆ ಭಾನುವಾರ 86 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ಮೂಲಕ ಒಟ್ಟಾರೆ ಎಂಟು ದಿನಗಳಲ್ಲಿ 458 ಕನ್ನಡಿಗರು ಉಕ್ರೇನ್‌ನಿಂದ ತವರಿಗೆ ಮರಳಿದ್ದಾರೆ.

ಶನಿವಾರದ ಅಂತ್ಯಕ್ಕೆ ರಾಜ್ಯದ 372 ವಿದ್ಯಾರ್ಥಿಗಳು ಆಗಮಿಸಿದ್ದರು. ಭಾನುವಾರ ಮುಂಬೈಗೆ ಬಂದ ಒಂದು ವಿಮಾನಗಳಲ್ಲಿ ಏಳು ಮಂದಿ, ದೆಹಲಿಗೆ ಬಂದ ಐದು ವಿಮಾನಗಳಲ್ಲಿ 69 ಮಂದಿ ಸೇರಿ ಒಂದೇ ದಿನ 86 ಮಂದಿ ಆಗಮಿಸಿದ್ದಾರೆ. ಇವರೆಲ್ಲರೂ ಆರು ತಂಡಗಳಾಗಿ ಪ್ರತ್ಯೇಕ ವಿಮಾನಗಳಲ್ಲಿ ಮಧ್ಯಾಹ್ನದಿಂದ ತಡರಾತ್ರಿವರೆಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇವರನ್ನು ಪೋಷಕರು ಆನಂದ ಬಾಷ್ಪದೊಂದಿಗೆ ಬರಮಾಡಿಕೊಂಡರು. ಬಳಿಕ ತಮ್ಮ ಊರುಗಳಿಗೆ ತೆರಳಿದರು.

ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ಸಹಾಯವಾಣಿಗೆ 693 ಮಂದಿ ನೋಂದಣಿಯಾಗಿದ್ದು, ಈ ಪೈಕಿ ಕಳೆದ ಎಂಟು ದಿನಗಳಲ್ಲಿ 458 ಮಂದಿ ಹಿಂದಿರುಗಿದ್ದಾರೆ. ಇನ್ನೂ 235 ಮಂದಿ ಉಕ್ರೇನ್‌ನಲ್ಲಿ ಉಳಿದಿದ್ದಾರೆ. ಸೋಮವಾರವೂ ಉಕ್ರೇನ್‌ನಿಂದ ಅಪರೇಷನ್‌ ಗಂಗಾ ವಿಮಾನಗಳು ಆಗಮಿಸುತ್ತಿದ್ದು, ರಾಜ್ಯದ 100ಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ರಾಜ್ಯದ ನೋಡಲ್‌ ಅಧಿಕಾರಿ ಮನೋಜ್‌ ರಾಜನ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios