ಅಂದು ಪುಟಿನ್ ಹಿಂದೆ ಕೈಕಟ್ಟಿ ನಿಂತಿದ್ದ ಮೋದಿ, ಮತ್ತೆ ವೈರಲ್ ಆಯ್ತು ಫೋಟೋ

* ಉಕ್ರೇನ್, ರಷ್ಯಾ ಯುದ್ಧದ ಮಧ್ಯೆ ವೈರಲ್ ಆಗ್ತಿದೆ ಮೋದಿಯ ಆ ಫೋಟೋ

* ಅಂದು ಪುಟಿನ್ ಹಿಂದೆ ಕೈಕಟ್ಟಿ ನಿಂತಿದ್ದ ಮೋದಿ

* ಇಂದು ಯುದ್ಧ ಕೊನೆಗೊಳ್ಳಲು ಇಡೀ ವಿಶ್ವವೇ ಮೋದಿ ಕಡೆ ನೋಡುತ್ತಿದೆ

narendra Modi Photo With Russia President Putin in 2001 Goes Viral pod

ಮಾಸ್ಕೋ(ಮಾ.07): 2001 ರ ನವೆಂಬರ್ ತಿಂಗಳು, ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕುರ್ಚಿಯ ಮೇಲೆ ಕುಳಿತಿದ್ದರು. ಉಭಯ ನಾಯಕರ ಸಭೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಭಾರತದ ಈಗಿನ ಪ್ರಧಾನಿ ನರೇಂದ್ರ ಮೋದಿ ಹಿಂದೆ ಕೈ ಕಟ್ಟಿ ನಿಂತಿದ್ದರು. ಆಗ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಎರಡು ದಶಕಗಳ ಹಿಂದಿನ ಈ ಚಿತ್ರ ಐತಿಹಾಸಿಕವಾಗಿದೆ. ಪ್ರಸ್ತುತ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದ್ದು, ಇಡೀ ವಿಶ್ವವೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರತ್ತ ಕಣ್ಣು ಹಾಯಿಸುತ್ತಿರುವ ಸಂದರ್ಭದಲ್ಲಿ ಈ ಹಳೆಯ ಚಿತ್ರ ಮತ್ತೊಮ್ಮೆ ವೈರಲ್ ಆಗಿದೆ.

ಪುಟಿನ್ ಕೂಡ ಊಹಿಸಿರಲಿಕ್ಕಿಲ್ಲ

21 ವರ್ಷಗಳ ಹಿಂದೆ, ಅಟಲ್ ಬಿಹಾರಿ ವಾಜಪೇಯಿ ಮತ್ತು ವ್ಲಾದಿಮಿರ್ ಪುಟಿನ್ ಭೇಟಿಯಾದಾಗ, ತನ್ನ ಹಿಂದೆ ನಿಂತ ವ್ಯಕ್ತಿ ಮುಂದೊಂದು ದಿನ ವಿಶ್ವದ ಪ್ರಭಾವಿ ನಾಯಕರಾಗಿ ಹೊರಹೊಮ್ಮುತ್ತಾರೆ ಎಂದು ಪುಟಿನ್ ಊಹಿಸಿರಲಿಕ್ಕಿಲ್ಲ. ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದಾಗ, ವಿಶ್ವದ ನಾಯಕರು ಬೆಚ್ಚಿಬಿದ್ದರು. ಪ್ರಧಾನಿ ಮೋದಿ ಅವರು ಪುಟಿನ್ ಅವರೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದಾರೆ ಎಂದು ಅವರು ಯೋಚಿಸುತ್ತಿದ್ದರು. ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ನಡುವೆ ಉತ್ತಮ ಒಡನಾಟ ಇದೆ ಮತ್ತು ಇದು ಇಡೀ ಜಗತ್ತಿಗೆ ತಿಳಿದಿದೆ. ಉಕ್ರೇನ್ ಮೇಲಿನ ದಾಳಿಯ ಕೆಲವೇ ಗಂಟೆಗಳ ನಂತರ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ದೂರವಾಣಿ ಕರೆ ಮಾಡಿದರು. ಉಕ್ರೇನ್‌ನ ವಿವಿಧ ನಗರಗಳಿಂದ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಬಗ್ಗೆ ಅವರು ಚರ್ಚಿಸಿದರು. ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ತನ್ನ ಜನರನ್ನು ಮನೆಗೆ ಕರೆತರಲು ಭಾರತವು 'ಆಪರೇಷನ್ ಗಂಗಾ' ಎಂಬ ದೊಡ್ಡ ಅಭಿಯಾನವನ್ನು ಪ್ರಾರಂಭಿಸಿತು.

ಉಕ್ರೇನ್‌ನಲ್ಲಿ ಗಾಯಗೊಂಡಿದ್ದ ಹರ್ಜೋತ್ ವಾಯುಪಡೆಯ ವಿಶೇಷ ವಿಮಾನದಲ್ಲಿ ಭಾರತಕ್ಕೆ!

ಉಕ್ರೇನ್ ಮೋದಿಯತ್ತ ನೋಡುತ್ತಿದೆ

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸ್ವತಃ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದಾರೆ ಮತ್ತು ರಷ್ಯಾದ ಮೇಲೆ ತಮ್ಮ ಪ್ರಭಾವವನ್ನು ಬಳಸಲು ಮನವಿ ಮಾಡಿದ್ದಾರೆ. ಉಕ್ರೇನ್‌ನ ರಾಯಭಾರಿ ಭಾರತದ ಭವ್ಯ ಇತಿಹಾಸವನ್ನು ನೆನಪಿಸುವ ಮೂಲಕ ಸಹಾಯಕ್ಕಾಗಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದರು. ಇನ್ನು ಕೆಲವೇ ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷರ ನಡುವಿನ ಉತ್ತಮ ಬಾಂಧವ್ಯದಿಂದಾಗಿ ಉಕ್ರೇನ್ ಬಿಕ್ಕಟ್ಟು ಬಗೆಹರಿಯಬಹುದು ಎಂದು ಅಮೆರಿಕ, ಯುರೋಪಿಯನ್ ಯೂನಿಯನ್ ಸೇರಿದಂತೆ ವಿಶ್ವದಾದ್ಯಂತದ ದೇಶಗಳು ಆಶಾಭಾವ ಇಟ್ಟುಕೊಂಡಿವೆ. ಭಾರತವೂ ತನ್ನ ಹಿತಾಸಕ್ತಿಗೆ ಆದ್ಯತೆ ನೀಡಿ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ತೆಗೆದುಕೊಂಡ ನಿರ್ಣಯದ ಮತದಾನದಿಂದ ಭಾರತ ದೂರ ಉಳಿದಿದ್ದರೂ, ಶಾಂತಿ ಮತ್ತು ಸಂವಾದದ ಮೂಲಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಒತ್ತಾಯಿಸುತ್ತಿದೆ. ಉಕ್ರೇನ್ ಅಧ್ಯಕ್ಷರಾಗಲಿ ಅಥವಾ ಅವರ ಮಂತ್ರಿಗಳು, ದಾಳಿಯನ್ನು ನಿಲ್ಲಿಸುವಂತೆ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಕೇಳುವ ನಿರೀಕ್ಷೆಯಿದೆ.

Ukraine Crisis: ತನ್ನ ಕೈಗೊಂಬೆ ವಿಕ್ಟರ್‌ಗೆ ಉಕ್ರೇನ್‌ ಅಧ್ಯಕ್ಷ ಗಾದಿ ನೀಡಲು ರಷ್ಯಾ ಪ್ಲ್ಯಾನ್‌

ಅಮೇರಿಕಾ-ಚೀನಾ ಕೂಡ ನೋಡುತ್ತಲೇ ಇದ್ದವು

ವಿಶ್ವದ ಸೂಪರ್ ಪವರ್ ಎಂದು ಹೇಳಿಕೊಳ್ಳುವ ಅಮೆರಿ, ಚೀನಾ ಅಥವಾ ಇತರ ದೇಶಗಳು ಉಕ್ರೇನ್‌ನಲ್ಲಿ ಸಿಲುಕಿರುವ ತಮ್ಮ ನಾಗರಿಕರನ್ನು ರಕ್ಷಿಸಲು ಯೋಜನೆಗಳನ್ನು ಮಾಡುತ್ತಲೇ ಇದ್ದವು ಹೀಗಿರುವಾಗಲೇ ಭಾರತದ ಜಂಬೋ ಜೆಟ್‌ಗಳು ಉಕ್ರೇನ್‌ನ ನೆರೆಯ ದೇಶಗಳಲ್ಲಿ ಇಳಿಯಲು ಪ್ರಾರಂಭಿಸಿದವು. ಒಂದು ವಾರದೊಳಗೆ ಮೋದಿ ಮತ್ತೆ ಮಾಸ್ಕೋಗೆ ಕರೆ ಮಾಡಿ ನೇರವಾಗಿ ಪುಟಿನ್ ಜೊತೆ ಮಾತನಾಡಿದರು. ಪಿಎಂ ಮೋದಿಯವರ ಈ ನಡೆಯಿಂದಾಗಿ, ಉಕ್ರೇನ್‌ನಲ್ಲಿ ರಷ್ಯಾದ ದಾಳಿಗೆ ಸಿಕ್ಕಾಕೊಂಡ ಭಾರತೀಯರು ಸುಲಭವಾಗಿ ಹೊರಬರಲು ಸಾಧ್ಯವಾಯಿತು. ಕೈಯಲ್ಲಿ ಅಥವಾ ಬಸ್‌ಗಳಲ್ಲಿ ಭಾರತದ ತ್ರಿವರ್ಣ ಧ್ವಜವು ಹಿಡಿದು ನಾಗರಿಕರು ಗಡಿ ತಲುಪಿದ್ದಾರೆ. ಒಂದೆಡೆ ಬಾಂಬ್ ದಾಳಿ ನಡೆದಿದ್ದು, ಇನ್ನೊಂದೆಡೆ ಪಾಕಿಸ್ತಾನ, ಟರ್ಕಿ ವಿದ್ಯಾರ್ಥಿಗಳೂ ತ್ರಿವರ್ಣ ಧ್ವಜದ ನೆರವಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪುಟಿನ್ ಜೊತೆಗಿನ ಪ್ರಧಾನಿ ಮೋದಿಯವರ ನೇರ ಮಾತುಕತೆ ಮತ್ತು ಭಾರತೀಯ ರಾಜತಾಂತ್ರಿಕತೆಯಿಂದಾಗಿ ಭಾರತೀಯ ವಿದ್ಯಾರ್ಥಿಗಳ ಗುಂಪು ಸುಲಭವಾಗಿ ಉಕ್ರೇನ್‌ನ ನೆರೆಯ ರಾಷ್ಟ್ರಗಳನ್ನು ತಲುಪಿದರು ಮತ್ತು ಅಲ್ಲಿಂದ ಅವರನ್ನು ಮನೆಗೆ ಕರೆತರಲಾಗುತ್ತಿದೆ. ಉಕ್ರೇನ್‌ನ ಸುಮಿಯಲ್ಲಿ ಸಿಲುಕಿರುವ ನೂರಾರು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಪ್ರಯತ್ನಗಳೂ ನಡೆಯುತ್ತಿವೆ. ಪೋಲ್ಟೋವಾ ಮೂಲಕ ಪಶ್ಚಿಮ ಗಡಿಗಳಿಗೆ ಅವರನ್ನು ಕರೆದೊಯ್ಯಲು ಪೋಲ್ಟವಾ ನಗರದಲ್ಲಿ ಭಾರತೀಯ ರಾಯಭಾರ ಕಚೇರಿಯ ತಂಡವನ್ನು ನಿಯೋಜಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಮನೆಗೆ ಕರೆತರುವ ನಿರೀಕ್ಷೆಯಿದೆ.

Russia Ukraine Crisis: ರಷ್ಯಾದಿಂದ ಪರಮಾಣು ಅಸ್ತ್ರ ತಾಲೀಮು ಆರಂಭ!

ಆ ಭೇಟಿಯನ್ನೂ ಮೋದಿಯೂ ಮರೆಯಲಿಲ್ಲ

ಪ್ರಧಾನಿ ಮೋದಿ ಕೂಡ 2001ರ ಆ ಸಭೆಯನ್ನು ಮರೆತಿಲ್ಲ. 2019 ರಲ್ಲಿ, ಪ್ರಧಾನಿ ಮೋದಿ ಅವರು 20 ನೇ ಭಾರತ-ರಷ್ಯಾ ಶೃಂಗಸಭೆಗೆ ಮಾಸ್ಕೋಗೆ ಹೋದಾಗ, ಅವರು ನಾಲ್ಕು ಚಿತ್ರಗಳನ್ನು ಟ್ವೀಟ್ ಮಾಡಿದ್ದರು. ಎರಡು ಚಿತ್ರಗಳು 2001 ರ ಆ ಸಮಯದಲ್ಲಿ ತೆಗೆದ ಫೋಟೋಗಳಾಗಿತ್ತು. ಪುಟಿನ್ ಭೇಟಿಯ ಕುರಿತು ರಷ್ಯಾದ ಸುದ್ದಿ ಸಂಸ್ಥೆಗೆ ತಿಳಿಸಿದ ಅವರು, 'ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮಾಸ್ಕೋಗೆ ಬಂದಿದ್ದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ ಮತ್ತು ಇದು ನಮ್ಮ ಮೊದಲ ಭೇಟಿಯಾಗಿದೆ, ಆದರೆ ಪುಟಿನ್ ನಾನು ಕಡಿಮೆ ಪ್ರಾಮುಖ್ಯತೆ ಮತ್ತು ಸಣ್ಣ ರಾಜ್ಯ ಅಥವಾ ಹೊಸ ವ್ಯಕ್ತಿ ಎಂಬ ಭಾವನೆಯನ್ನು ನೀಡಲಿಲ್ಲ. ಸೌಹಾರ್ದಯುತವಾಗಿ ವರ್ತಿಸಿದರು ಮತ್ತು ಸ್ನೇಹದ ಬಾಗಿಲು ತೆರೆಯಿತು ಎಂದಿದ್ದರು. 

Latest Videos
Follow Us:
Download App:
  • android
  • ios