ಕೋವಿಡ್‌ ಲಸಿಕೆ ಪಡೆದವರ ಮಾಹಿತಿ ಸೋರಿಕೆ: ದತ್ತಾಂಶ ಸುರಕ್ಷತೆ ಎಲ್ಲಿದೆ?: ಕೇಂದ್ರಕ್ಕೆ ವಿಪಕ್ಷಗಳಿಂದ ಚಾಟಿ

ಕೋವಿಡ್‌ ಲಸಿಕೆ ನೀಡುವ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ್ದ ‘ಕೋವಿನ್‌’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಹಿರಿಯ ರಾಜಕೀಯ ನಾಯಕರು ಸೇರಿದಂತೆ ದೇಶದ ಎಲ್ಲ ನಾಗರಿಕರ ಮಾಹಿತಿ ಸೋರಿಕೆಯಾಗಿದೆ ಎಂಬ ಗಂಭೀರ ಮಾಹಿತಿಯೊಂದು ಬಹಿರಂಗವಾಗಿದೆ.

Data leak of Covid vaccine recipients Where is the data security Opposition lashes out at Centre akb

ನವದೆಹಲಿ: ಕೋವಿಡ್‌ ಲಸಿಕೆ ನೀಡುವ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ್ದ ‘ಕೋವಿನ್‌’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಹಿರಿಯ ರಾಜಕೀಯ ನಾಯಕರು ಸೇರಿದಂತೆ ದೇಶದ ಎಲ್ಲ ನಾಗರಿಕರ ಮಾಹಿತಿ ಸೋರಿಕೆಯಾಗಿದೆ ಎಂಬ ಗಂಭೀರ ಮಾಹಿತಿಯೊಂದು ಬಹಿರಂಗವಾಗಿದೆ.

ಟೆಲಿಗ್ರಾಂ ಆ್ಯಪ್‌ನಲ್ಲಿ ಭಾರತೀಯರ ಖಾಸಗಿ ಮಾಹಿತಿ, ಆಧಾರ್‌ ಹಾಗೂ ಪಾನ್‌ ಕಾರ್ಡ್‌ ವಿವರಗಳು ಲಭ್ಯ ಇವೆ ಎಂದು ಮಲಯಾಳ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, ಕಾಂಗ್ರೆಸ್‌ ನಾಯಕ ಕೆ.ಸಿ.ವೇಣುಗೋಪಾಲ್‌ (K C Venugopal), ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakshi Lekhi), ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ (Rajesh Bhushan), ಅವರ ಪತ್ನಿಯೂ ಆಗಿರುವ ಶಾಸಕಿ ರೀತೂ ಖಂಡೂರಿ, ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್(Veena George), ಖ್ಯಾತನಾಮ ಪತ್ರಕರ್ತರು ಸೇರಿದಂತೆ ಹಲವರ ಮಾಹಿತಿ ಸೋರಿಕೆಯಾಗಿರುವುದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳು ವೈರಲ್‌ ಆಗಿವೆ.

ಅಮೆರಿಕ ಫೇಸ್‌ಬುಕ್‌ ಗ್ರಾಹಕರಿಗೆ 6000 ಕೋಟಿ ಭರ್ಜರಿ ಪರಿಹಾರ

ಈ ವರದಿ ಬಹಿರಂಗವಾಗುತ್ತಿದ್ದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಮೋದಿ ಸರ್ಕಾರ ಬಲಿಷ್ಠ ದತ್ತಾಂಶ ಭದ್ರತೆಯನ್ನು ಅನುಸರಿಸುವುದಾಗಿ ಹೇಳುತ್ತದೆ. ಅದಲು ಎಲ್ಲಿದೆ ಎಂದು ತೃಣಮೂಲ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ತೀವ್ರ ಕಳವಳದಾಯಕವಾದ ಹಾಗೂ ಒಪ್ಪತಕ್ಕ ಬೆಳವಣಿಗೆಯಲ್ಲ ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಕಿಡಿಕಾರಿದ್ದಾರೆ.

ಈ ನಡುವೆ, ಕೋವಿನ್‌ ಪೋರ್ಟಲ್‌ ಯಾವುದೇ ವ್ಯಕ್ತಿಯ ಜನ್ಮದಿನಾಂಕ, ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನೂ ಪಡೆದುಕೊಂಡಿಲ್ಲ. ಆದಾಗ್ಯೂ ಈ ವಿವರವನ್ನು ಪರಿಶೀಲಿಸಲಾಗುತ್ತಿದೆ. ಯಾರಾದರೂ ಅನಧಿಕೃತವಾಗಿ ಕೋವಿನ್‌ ಆ್ಯಪ್‌ ಸಂಪರ್ಕ ಗಳಿಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಕೋವಿನ್‌ ಹ್ಯಾಕ್‌ ಆಗಿದೆ ಎಂಬುದನ್ನು ತಳ್ಳಿ ಹಾಕಿವೆ.

ಸಲ್ಮಾನ್‌ ಖಾನ್‌, ಸುಂದರ್‌ ಪಿಚೈ ಸೇರಿ 40 ಕೋಟಿ ಟ್ವಿಟ್ಟರ್‌ ಗ್ರಾಹಕರ ಮಾಹಿತಿ ಸೋರಿಕೆ..!

ಕೋವಿನ್‌ ಆ್ಯಪ್‌ನ ದತ್ತಾಂಶ ಸೋರಿಕೆ ಕುರಿತು ವ್ಯಾಪಕ ವರದಿಯಾಗುತ್ತಿದ್ದಂತೆ, ಆ ಮಾಹಿತಿಯನ್ನು ನೀಡುವ ಟೆಲಿಗ್ರಾಂನ ಬಾಟ್‌ ಸ್ಥಗಿತಗೊಂಡಿದೆ.

ಮಹಾ ಸೋರಿಕೆ:

ಟೆಲಿಗ್ರಾಂನಲ್ಲಿ ಬಾಟ್‌ ಚಾನಲ್‌ವೊಂದಿದೆ. ಕೋವಿನ್‌ ಪೋರ್ಟಲ್‌ನಲ್ಲಿ ನೋಂದಾಯಿತವಾಗಿರುವ ಯಾವುದೇ ಮೊಬೈಲ್‌ ಸಂಖ್ಯೆಯನ್ನು ಬಾಟ್‌ನಲ್ಲಿ ನಮೂದಿಸುತ್ತಿದ್ದಂತೆ, ಲಸಿಕಾಕರಣಕ್ಕಾಗಿ ಉಪಯೋಗಿಸಲಾಗಿದ್ದ ಗುರುತಿನ ಚೀಟಿಯ ಸಂಖ್ಯೆ, ಲಿಂಗ, ಜನ್ಮ ದಿನಾಂಕ, ಹೆಸರು, ಆತ/ಆಕೆಯ ಡೋಸ್‌ಗಳು ಎಲ್ಲ ಮಾಹಿತಿಯೂ ಹೊರಬೀಳುತ್ತದೆ. ಈ ಮಹಾ ದತ್ತಾಂಶ ಸೋರಿಕೆಯಿಂದಾಗಿ ಭಾರತೀಯರ ಆಧಾರ್‌ ಕಾರ್ಡ್‌, ವೋಟರ್‌ ಐಡಿ ಹಾಗೂ ಪ್ಯಾನ್‌ ಕಾರ್ಡ್‌ ಸಂಖ್ಯೆಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ಎಲ್ಲರಿಗೂ ಲಭ್ಯವಾದಂತಾಗಿದೆ ಎಂದು ಕೇರಳ ವೆಬ್‌ಸೈಟ್‌ ವರದಿ ಮಾಡಿದೆ. 2021ರಲ್ಲಿ ಕೋವಿನ್‌ ಆ್ಯಪ್‌ ಹ್ಯಾಕ್‌ ಆಗಿದೆ. 15 ಕೋಟಿ ಜನರ ಡೇಟಾ ಬೇಸ್‌ ಮಾರಾಟವಾಗಿದೆ ಎಂಬ ವರದಿಗಳು ಬಂದಿದ್ದವು. ಆದರೆ ಸೈಬರ್‌ ಸೆಕ್ಯುರಿಟಿ ಸಂಶೋಧಕರು ಅದನ್ನು ಆ ಸಂದರ್ಭದಲ್ಲಿ ತಳ್ಳಿ ಹಾಕಿದ್ದರು.

ಕೋವಿನ್‌ ಮಾಹಿತಿ ಸೋರಿಕೆ ಆಗಿ​ಲ್ಲ: ಸಚಿವ ಆರ್‌​ಸಿ

ನವ​ದೆ​ಹ​ಲಿ: ಕೋವಿನ್‌ ವೆಬ್‌​ಸೈಟ್‌/ಆ್ಯಪ್‌ ಅನ್ನು ಹ್ಯಾಕ್‌ ಮಾಡ​ಲಾ​ಗಿದೆ ಎಂಬುದನ್ನು ನಿರಾ​ಕ​ರಿ​ಸಿ​ರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರ​ಶೇ​ಖರ್‌, ‘ಕೋವಿನ್‌ ಆ್ಯಪ್‌ನ ದತ್ತಾಂಶ ಸೋರಿಕೆ ಆಗಿಲ್ಲ. ಅದರ ಬದ​ಲಿಗೆ ಕೋವಿನ್‌ ಹೊರ​ತಾ​ದ ಇನ್ನಾ​ವುದೋ ವೆಬ್‌​ನಲ್ಲಿನ ದತ್ತಾಂಶ​ ಈ ಹಿಂದೆ ಸೋರಿಕೆ ಆಗಿ​ರ​ಬ​ಹುದು. ಅದನ್ನು ಈಗ ಕೋವಿ​ನ್‌​ನೊಂದಿಗೆ ಸಮೀ​ಕ​ರಿ​ಸುವ ಯತ್ನ ನಡೆ​ದಿ​ದೆ’ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಇದ​ಲ್ಲದೆ, ‘ಭಾರ​ತೀಯ ಕಂಪ್ಯೂ​ಟರ್‌ ತುರ್ತು ಪ್ರತಿ​ಕ್ರಿಯೆ ತಂಡವು (ಸಿ​ಇ​ಆ​ರ್‌​ಟಿ-ಇನ್‌) ಕೂಡಲೇ ಈ ಸಮ​ಸ್ಯೆ​ಯನ್ನು ಸರಿ​ಪ​ಡಿ​ಸಲು ಕಾರ್ಯ​ತ​ತ್ಪ​ರ​ವಾ​ಗಿದ್ದು, ಇಡೀ ವ್ಯವ​ಸ್ಥೆ​ಯ​ನ್ನು ಪರಿ​ಶೀ​ಲ​ನೆಗೆ ಒಳ​ಪ​ಡಿ​ಸಿದೆ. ರಾಷ್ಟ್ರೀಯ ದತ್ತಾಂಶ ನೀತಿ​ಯನ್ನು ಅಂತಿ​ಮ​ಗೊ​ಳಿ​ಸ​ಲಾ​ಗಿದೆ. ಇದು ದತ್ತಾಂಶ ಸಂಗ್ರಹ, ಮಾಹಿತಿ ಪಡೆ​ಯು​ವುದು ಹಾಗೂ ಭದ್ರ​ತೆಗೆ ಏಕೀ​ಕೃತ ಚೌಕಟ್ಟು ರೂಪಿ​ಸ​ಲಿ​ದೆ’ ಎಂದಿ​ದ್ದಾ​ರೆ.

Latest Videos
Follow Us:
Download App:
  • android
  • ios