ನೀವು ಜೆಪ್ಟೋ, ಬುಕ್‌ಮೈ ಶೋ, ಇಂಡಿಗೋ ಸೇರಿದಂತೆ 9 ಆ್ಯಪ್‌ಗಳು ಗ್ರಾಹಕರಿಗೆ ವಂಚಿಸಿರುವುದು ಪತ್ತೆಯಾಗಿದೆ. ಡಾರ್ಕ್ ಪ್ಯಾಟರ್ನ್ ಮೂಲಕ ಗ್ರಾಹಕರಿಗೆ ಮೋಸ ಮಾಡಲಾಗಿದೆ ಅನ್ನೋದು ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರ ಪತ್ತೆ ಹಚ್ಚಿ ದಂಡ ವಿಧಿಸಿದೆ.
ನವದೆಹಲಿ (ಆ.06) ಆ್ಯಪ್ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅದರಲ್ಲೂ ಇ ಕಾಮರ್ಸ್ ಸೇರಿದಂತೆ ಹಲವು ಆ್ಯಪ್‌ಗಳ ಮೇಲೆ ಹಲವರು ಅವಲಂಬಿತರಾಗಿದ್ದಾರೆ. ದಿನಸಿ, ಆಹಾರ, ಎಲೆಕ್ಟ್ರಾನಿಕ್ ಸೇರಿದಂತೆ ಗೃಹಪಯೋಗಿ ವಸ್ತುಗಳ ಖರೀದಿಗೆ ಇ ಕಾಮರ್ಸ್ ಆ್ಯಪ್ ಪ್ರಮುಖವಾಗಿದೆ. ಹೀಗೆ ಪ್ರತಿ ನಿತ್ಯ ಬಳಕೆ ಮಾಡುವ ಸರ್ವೀಸ್ ಒರಿಯೆಂಟೆಡ್ ಆ್ಯಪ್ ಗ್ರಾಹಕರಿಗೆ ವಂಚಿಸುವುದಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಪತ್ತೆ ಹಚ್ಚಿದೆ. ಜೆಪ್ಟೋ, ಬುಕ್‌ಮೈಶೋ, ಇಂಡಿಗೋ ಸೇರಿದಂತೆ 9 ಆ್ಯಪ್‌ಗಳಿಗೆ ಪ್ರಾದಿಕಾರ ಒಟ್ಟು 20 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಶಾಕ್
ಭಾರತದಲ್ಲಿ ಪ್ರಮುಖ ಇ ಕಾಮರ್ಸ್ ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್ ವಿರುದ್ದ ಪ್ರಾಧಿಕಾರ ಕಠಿಣ ಕ್ರಮ ಕೈಗೊಂಡಿದೆ. ಕ್ವಿಕ್ ಕಾಮರ್ಸ್ ಎಂದೇ ಜನಪ್ರಿಯವಾಗಿರುವ ಜೆಪ್ಟೋ, ಟಿಕೆಟ್ ಬುಕಿಂಗ್ ಮೂಲಕ ದೈತ್ಯನಾಗಿರುವ ಬುಕ್ ಮೈಶೋ, ವಿಮಾನಯಾ ಇಂಡಿಗೋ , ಸ್ಪೆಸ್‌ಜೆಟ್ ಸೇರಿ 9 ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ. ಈ ಆ್ಯಪ್‌ಗಳು ಆನ್‌ಲೈನ್ ಗ್ರಾಹಕಕರನ್ನು ದಾರಿ ತಪ್ಪಿಸುವ, ನಿರ್ಧಾರಗಳನ್ನು ಮಾನ್ಯುಪ್ಯುಲೇಟ್ ಮಾಡುವ ಡಾರ್ಕ್ ಪ್ಯಾಟರ್ನ್ ವಿಧಾನ ಅನುಸರಿಸುತ್ತಿದ್ದಾರೆ ಎಂದು ಪ್ರಾದಿಕಾರ ಹೇಳಿದೆ.
ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಡಾರ್ಕ್ ಪ್ಯಾಟರ್ನ್ ಅಪಾಯ
ಜೆಪ್ಟೋ, ಬುಕ್‌ಮೈಶೋ ಸೇರಿದಂತೆ 9 ಆ್ಯಪ್‌ಗಳಿಗೆ ಪ್ರಾಧಿಕಾರ ದಂಡ ವಿಧಿಸಲು ಕಾರಣವಾಗಿದ್ದು ಡಾರ್ಕ್ ಪ್ಯಾಟರ್ನ್ ಮೋಸ. ಏನಿದು ಡಾರ್ಕ್ ಪ್ಯಾಟರ್ನ್? ಪ್ರಮುಖವಾಗಿ ಆನ್‌ಲೈನ್ ಮೂಲಕ ವಸ್ತುಗಳು, ಆಹಾರ ಸೇರಿ ಯಾವುದೇ ಖರೀದಿಯಲ್ಲಿ ಗ್ರಾಹಕರಿಗೆ ತಿಳಿಯದಂತೆ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುವುದು. ಹಿಡನ್ ಚಾರ್ಜಸ್, ಕೊನೆಯ ಹಂತದಲ್ಲಿ ಗ್ರಾಹಕರಿಗೆ ಗೊತ್ತಾಗದಂತೆ ಸಬ್‌ಸ್ಕ್ರಿಪ್ಸನ್, ದೇಣಿಗೆ ಸೇರಿದಂತೆ ಇತರ ಚಾರ್ಜಸ್ ವಸೂಲಿ ಮಾಡುವುದೇ ಡಾರ್ಕ್ ಪ್ಯಾಟರ್ನ್. 2023ರಲ್ಲಿ ಭಾರತದಲ್ಲಿ ಡಾರ್ಕ್ ಪ್ಯಾಟರ್ನ್ ವಂಚನೆ ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಆನ್‌ಲೈನ್ ಖರೀದಿಯಲ್ಲಿ ಗ್ರಾಹಕರು ಹೆಚ್ಚುವರಿಯಾಗಿ, ಮರೆಮಾಚಿದ ಶುಲ್ಕ ಪಾವತಿ ಮಾಡುವುದನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ಇದೇ ನಿಮಯದಡಿ 9 ಆ್ಯಪ್‌ಗಳಿಗೆ ಒಟ್ಟು 20 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಹಲವು ಇ ಕಾಮರ್ಸ್ ಸೇವೆ ಪಡೆಯುವಾಗ ಭಯ ಹುಟ್ಟಿಸುವ ವಿಧಾನಕ್ಕೂ ಡಾರ್ಕ್ ಪ್ಯಾಟರ್ನ್ ಎನ್ನಲಾಗುತ್ತದೆ. ಉದಾಹರಣೆಗೆ ವಿಮಾನ ಪ್ರಯಾಣದ ವೇಳೆ ಟಿಕೆಟ್ ಖರೀದಿಸುವಾಗ, ವಿಮೆ ಪಡೆಯಲು ಸೂಚಿಸುತ್ತದೆ. ವಿಮೆ ಬೇಡ ಎಂದು ಅನ್‌ಟಿಕ್ ಮಾಡಿದಾ ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ ಎಂಬ ಭಯ ಹುಟ್ಟಿಸುವ ವಾಕ್ಯಗಳನ್ನು ಹಾಕಲಾಗುತ್ತದೆ. ಇನ್ನು ಸಿನಿಮಾ ಸೇರಿದಂತೆ ಇತರ ಟಿಕೆಟ್ ಬುಕಿಂಗ್ ವೇಳೆ ಸಮಾಜ ಸೇವೆಗಾಗಿ, ಚಾರಿಟಿಗಾಗಿ 1 ರೂಪಾಯಿ , 5 ರೂಪಾಯಿ ಆಟೋಮೇಟ್ ಆಗಿ ಟಿಕ್ ಆಗಿರುತ್ತದೆ. ಈ ರೀತಿಯಿಂದ ಹಣ ವಸೂಲಿ ಮಾಡುತ್ತಿದ್ದ, ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದ 9 ಆ್ಯಪ್‌ಗಳಿಗೆ ದಂಡ ವಿಧಿಸಲಾಗಿದೆ.


