ಸಾರ್ವಜನಿಕ ಸ್ಥಳದಲ್ಲೇ ಕೆಲ ಜನರು ದಲಿತ ಯುವಕನ ಮೇಲೆ ಹಲ್ಲೆ  ಯುವಕನ ಖಾಸಗಿ ಅಂಗಾಂಗಗಳಿಗೆ ಮೊಣಕೈನಿಂದ ಗುದ್ದಿ, ಎಳೆದಾಡಿ, ಒದ್ದು ಹಲ್ಲೆ ಪ್ರಕರಣ ಸಂಬಂಧ ಓರ್ವ ಆರೋಪಿ ಬಂಧನ

ಲಖನೌ (ಜು.11): ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಕೆಲ ಜನರು ದಲಿತ ಯುವಕನ ಖಾಸಗಿ ಅಂಗಾಂಗಗಳಿಗೆ ಮೊಣಕೈನಿಂದ ಗುದ್ದಿ, ಎಳೆದಾಡಿ, ಒದ್ದು ಮತ್ತು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಇತರ ತಪ್ಪಿತಸ್ಥರ ಬಂಧನಕ್ಕಾಗಿ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಾಯ್‌ಫ್ರೆಂಡ್ ಕೆಲಸದಿಂದ ತೆಗೆದ ಕಂಪನಿಗೆ ಬೆಂಕಿ ಇಟ್ಟ ಗರ್ಲ್‌ಫ್ರೆಂಡ್!

ಮತ್ತೊಂದು ವಿಡಿಯೋದಲ್ಲಿ ಹಾಡಹಗಲೇ ಜನರ ಸಮ್ಮುಖದಲ್ಲಿ ವ್ಯಕ್ತಿಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ, ಅವರ ಪ್ಯಾಂಟ್‌ ಬಿಚ್ಚಿ ಖಾಸಗಿ ಭಾಗಗಳಿಗೆ ಮರದ ಕೋಲಿನಿಂದ ಹಲ್ಲೆ ನಡೆಸುವ ಅಮಾನವೀಯ ವಿಡಿಯೋ ಸಹ ಹರಿದಾಡುತ್ತಿದೆ.