Asianet Suvarna News

ಬಾಯ್‌ಫ್ರೆಂಡ್  ಕೆಲಸದಿಂದ ತೆಗೆದ ಕಂಪನಿಗೆ ಬೆಂಕಿ ಇಟ್ಟ ಗರ್ಲ್‌ಫ್ರೆಂಡ್!

* ಗೆಳೆಯನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸಿಟ್ಟು
* ಕಂಪನಿಗೆ ಬೆಂಕಿ ಇಡಲು ಮುಂದಾದ ಗೆಳತಿ
* ಆರೋಪಿಯನ್ನು ಬಂಧಿಸಿದ ಪೊಲೀಸರು

Vengeful woman tries to set cloth factory afire after boyfriend sacked from job Gujarat mah
Author
Bengaluru, First Published Jul 10, 2021, 10:16 PM IST
  • Facebook
  • Twitter
  • Whatsapp

ರಾಜ್‌ಕೋಟ್ (ಜು. 10) ತನ್ನ ಬಾಯ್ ಫ್ರೆಂಡ್ ನನ್ನು ಕೆಲಸದಿಂದ ತೆಗೆದು ಹಾಕಿದ ಸಿಟ್ಟಿಗೆ ಕೋಪಗೊಂಡ ಗೆಳತಿ ಫ್ಯಾಕ್ಟರಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾಳೆ.

ಗುಜರಾತ್‌ನ ಗಾಂಧಿಧಾಮದಿಂದ ವರದಿಯಾಗಿದ್ದು  ಆರೋಪಿಯನ್ನು 24 ವರ್ಷದ ಯುವತಿ ಮಾಯಾಬೆನ್ ಪರ್ಮಾರ್ ಎಂದು ಗುರುತಿಸಲಾಗಿದೆ.  ಗಣೇಶನಗರ ಪ್ರದೇಶದ ನಿವಾಸಿ ಮಾಯಾಬೆನ್ ಪರ್ಮಾರ್ ಎಂದು  ಜುಲೈ 5 ರಂದು ಸಂಜೆ 5: 30 ರ ಸುಮಾರಿಗೆ, ಬಳಸಿದ ಬಟ್ಟೆಗಳನ್ನು ಮರುಬಳಕೆ ಮಾಡುವ ಕಂಪನಿ ಕೆನಮ್ ಇಂಟರ್ನ್ಯಾಷನಲ್ (ಪಿ) ಲಿಮಿಟೆಡ್‌ನ ಕಾರ್ಖಾನೆಗೆ ಬೆಂಕಿ ಇಡುವ ಯತ್ನ ಮಾಡಿದ್ದಾಳೆ.  ಬಟ್ಟೆಯಿಂದ ಸಿದ್ಧಮಾಡಿಕೊಂಡಿದ್ದ ಸೂಡಿಯನ್ನು ಬಳಸಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ.

ಮನೆ ಬಾಡಿಗೆ ಬೇಡ ...ಕಿಸ್ ಕೊಟ್ಟರೆ ಸಾಕು

ಆಕೆ ಬೆಂಕಿ ಹಚ್ಚಿದನ್ನು ಕಂಪನಿಯ ನೌಕರನೊಬ್ಬ ಗಮನಿಸಿದ್ದಾನೆ. ತಕ್ಷಣ ಅದನ್ನು ಆರಿಸುವ ಕೆಲಸ ಮಾಡಿದ್ದು ಸಿಸಿಟಿವಿ ದೃಶ್ಯಾವಳಿ ಆಧರಿಸಿದಾಗ ಯುವತಿ ಸಿಕ್ಕಿಬಿದ್ದಿದ್ದಾಳೆ.

ಯುವತಿಯನ್ನು ಹಿಡಿದು ಮ್ಯಾನೇಜ್ ಮೆಂಟ್ ಈ ಬಗ್ಗೆ ಪ್ರಶ್ನೆ ಮಾಡಿದಾಗ ಆಕೆ ತನ್ನ ಗೆಳೆಯನನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದೆ ಎಂಬ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪೊಲೀಸರು ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

Follow Us:
Download App:
  • android
  • ios