Shocking news: ಕೇರಳದಲ್ಲಿ ಅಪ್ರಾಪ್ತ ದಲಿತ ಅಥ್ಲೀಟ್ ಮೇಲೆ 5 ವರ್ಷಗಳ ಕಾಲ 64 ಜನರಿಂದ ಬಲತ್ಕಾರ!

ಕೇರಳದಲ್ಲಿ 18 ವರ್ಷದ ದಲಿತ ಅಥ್ಲೀಟ್ ಒಬ್ಬರ ಮೇಲೆ 5 ವರ್ಷಗಳಿಂದ 64 ಜನರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೋಚ್‌ಗಳು, ಸಹ ಆಟಗಾರರು ಸೇರಿದಂತೆ ಹಲವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಳ ಕಲ್ಯಾಣ ಸಮಿತಿಯ ಭೇಟಿಯ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು 15 ಜನರನ್ನು ಬಂಧಿಸಿದ್ದಾರೆ.

Dalit athlete assault by 64 people for 5 years in Kerala rav

ಪಟ್ಟಣಂತಿಟ್ಟ (ಜ.12): ಕೇರಳದಲ್ಲಿ 18 ವರ್ಷದ ದಲಿತ ಅಥ್ಲೀಟ್‌ ಮೇಲೆ ಆಕೆಯ ಕೋಚ್‌ಗಳು, ಸಹ ಆಟಗಾರರು ಸೇರಿದಂತೆ 64 ಪುರುಷರು 5 ವರ್ಷಗಳಿಂದ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಇದೀಗ ದೂರು ನೀಡಿದ್ದು, ಇದರನ್ವಯ ಪೊಲೀಸರು ಆರೋಪಿಗಳ ವಿರುದ್ಧ 4 ಎಫ್‌ಐಆರ್‌ ದಾಖಲಿಸಿ 15 ಮಂದಿಯನ್ನು ಬಂಧಿಸಿದ್ದಾರೆ.

‘8ನೇ ತರಗತಿಯಲ್ಲಿದ್ದಾಗ ಅಂದರೆ 13 ವರ್ಷದವಳಿದ್ದಾಗ ಕಿರುಕುಳ ಆರಂಭವಾಯಿತು. ಪಕ್ಕದ ಮನೆಯ ವ್ಯಕ್ತಿಯೊಬ್ಬ ನನಗೆ ಅಶ್ಲೀಲ ವಿಡಿಯೋ ತೋರಿಸಿ ಲೈಂಗಿಕವಾಗಿ ಬಳಸಿಕೊಂಡ. ನಂತರ ಕೆಲವರು ನನ್ನ ಬಡತನ ದುರ್ಬಳಕೆ ಮಾಡಿಕೊಂಡು ಶೋಷಣೆ ಮಾಡಿದರು. ನಾನು ಅಥ್ಲೀಟ್‌ ಆಗಿದ್ದ ಕಾರಣ ಕೋಚ್‌ಗಳು, ಆಟಗಾರರೂ ರೇಪ್‌ ಮಾಡಿದರು. ಈ ವೇಳೆ ನನ್ನ ಅಶ್ಲೀಲ ವಿಡಿಯೋ ಶೂಟ್‌ ಮಾಡಿಕೊಂಡು ಅವರು ಇತರ ಪರಿಚಯಸ್ಥರ ಜತೆ ಹಂಚಿಕೊಂಡರು ಹಾಗೂ ಬ್ಲಾಕ್‌ ಮೇಲ್‌ ಆರಂಭಿಸಿದರು. ಆಗ ಇತರರು ಕೂಡ ವಿಡಿಯೋ ತೋರಿಸಿ ಶೋಷಣೆ ನಡೆಸಿದರು’ ಎಂದು ಆಕೆ ಹೇಳಿಕೊಂಡಿದ್ದಾಳೆ.

ಸ್ಫೂರ್ತಿಯಾಯ್ತಾ ಶ್ರದ್ಧಾ ಕೇಸ್? 8 ತಿಂಗಳ ಹಿಂದೆ ಪಾರ್ಟ್ನರ್ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಕಿರಾತಕ ಅರೆಸ್ಟ್

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:

ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ) ಸದಸ್ಯರು ವಾಡಿಕೆಯಂತೆ ಫೀಲ್ಡ್‌ ವಿಸಿಟ್‌ ಮಾಡುವಾಗ ಯುವತಿಯ ಮನೆಗೂ ಹೋಗಿದ್ದು, ಆಗ ಯುವತಿ ಕರಾಳ ಕೃತ್ಯದ ಬಾಯಿ ಬಿಟ್ಟಿದ್ದಾಳೆ. ಬಳಿಕ ಈ ಸಮಿತಿ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ. ಯುವತಿಯು ಅತ್ಯಾಚಾರಿಗಳ ಜತೆ ಮಾತನಾಡಲು ತಂದೆಯ ಫೋನ್‌ ಬಳಸಿದ್ದು, ಅದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಸಲು ಪತ್ತಣಂತಿಟ್ಟ ಎಸ್ಪಿ ವಿಶೇಷ ತಂಡ ರಚಿಸಿದ್ದಾರೆ. 15 ಜನರನ್ನು ಬಂಧಿಸಿ ಉಳಿದವರಿಗೆ ಬಲೆ ಬೀಸಿದ್ದಾರೆ.

Latest Videos
Follow Us:
Download App:
  • android
  • ios