ತ್ರಿಪುರಾ(ಮೇ.12): ಲಾಕ್‌ಡೌನ್‌ನಿಂದಾಗಿ ಮನೆಗೆ ಹೋಗಲಾಗದೆ ಅದಷ್ಟೋ ಮಂದಿ ಪರದಾಡುತ್ತಿದ್ದಾರೆ. ಅಂಥದ್ದರಲ್ಲಿ ತ್ರಿಪುರಾದ ಗೋವಿಂದ ದೇವನಾಥ್‌ ಎಂಬ ಕೂಲಿ ಕಾರ್ಮಿಕ ಬರೋಬ್ಬರಿ 30 ಸಾವಿರ ರು. ಖರ್ಚು ಮಾಡಿ ಕಾರೊಂದನ್ನು ಬಾಡಿಗೆ ಪಡೆದು ಮನೆಗೆ ತೆರಳುವಲ್ಲಿ ಯಶಸ್ವಿಯಾಗಿದ್ದಾನೆ.

ದೇಶದಲ್ಲಿ 70000 ಗಡಿ ದಾಟಿದ ಸೋಂಕು, ಒಂದೇ ದಿನ ದಾಖಲೆಯ 174 ಸಾವು!

ಆದರೆ, ಮನೆ ಮಂದಿಯೇ ಆತನನ್ನು ಮನೆಯ ಒಳಗೆ ಬಿಟ್ಟುಕೊಂಡಿಲ್ಲ! ತನಗೆ ಕೊರೋನಾ ಇಲ್ಲ ಎಂದು ದೇವನಾಥ್‌ ಹೇಳಿದರೂ ಹೆಂಡತಿ, ಮಕ್ಕಳು ನಂಬುತ್ತಲೇ ಇಲ್ಲ. ಹೀಗಾಗಿ ತಾನು ಎಲ್ಲಿ ಉಳಿದುಕೊಳ್ಳುವುದು ಎಂದು ತಿಳಿಯದೆ ದೇವನಾಥ್‌ ಮಾಧ್ಯಮಗಳ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಲಾಕ್‌ಡೌನ್‌ ಘೋಷಣೆಗೂ ಮುನ್ನ ಅಸ್ಸಾಂನ ತನ್ನ ಮಾವನ ಮನೆಗೆ ತೆರಳಿದ್ದ ದೇವನಾಥ್‌ ಲಾಕ್‌ಡೌನ್‌ ತೆರವಾಗುವುದನ್ನೇ ಕಾಯುತ್ತಿದ್ದ. ಆದರೆ, ಈಗ ಮನೆಗೆ ಬಂದರೂ ಪ್ರಯೋಜನ ಆಗಿಲ್ಲ.

"