3 ತಿಂಗಳಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರ: ಇದರ ವಿಶೇಷತೆಗಳೇನು ಗೊತ್ತಾ?

ತಡರಾತ್ರಿಯೂ ಸಂಚರಿಸಲಿರುವ ಬಹುನಿರೀಕ್ಷಿತ ‘ವಂದೇ ಭಾರತ್‌ ಸ್ಲೀಪರ್‌ ರೈಲ’ನ್ನು ಅನಾವರಣಗೊಳಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಮುಂದಿನ ಮೂರು ತಿಂಗಳಲ್ಲಿ ಈ ರೈಲು ಪ್ರಯಾಣಿಕ ಸಂಚಾರ ಸೇವೆ ಆರಂಭಿಸಲಿದೆ ಎಂದು ತಿಳಿಸಿದ್ದಾರೆ.

Vande Bharat sleeper train service in 3 months Do you know its special features gvd

ಬೆಂಗಳೂರು (ಸೆ.02): ತಡರಾತ್ರಿಯೂ ಸಂಚರಿಸಲಿರುವ ಬಹುನಿರೀಕ್ಷಿತ ‘ವಂದೇ ಭಾರತ್‌ ಸ್ಲೀಪರ್‌ ರೈಲ’ನ್ನು ಅನಾವರಣಗೊಳಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಮುಂದಿನ ಮೂರು ತಿಂಗಳಲ್ಲಿ ಈ ರೈಲು ಪ್ರಯಾಣಿಕ ಸಂಚಾರ ಸೇವೆ ಆರಂಭಿಸಲಿದೆ ಎಂದು ತಿಳಿಸಿದ್ದಾರೆ. ಭಾರತ್‌ ಅರ್ಥ್‌ ಮೂವರ್ಸ್ ಲಿಮಿಟಿಡ್‌ (ಬಿಇಎಂಎಲ್‌) ನಿರ್ಮಿಸಿರುವ ವಂದೇ ಭಾರತ್‌ ಸ್ಲೀಪರ್‌ ರೈಲಿನ ಎರಡು ಮೂಲ ಮಾದರಿ (ಪ್ರೊಟೊಟೈಪ್‌) ರೈಲುಗಳ ಪರಿಶೀಲನೆ ಬಳಿಕ ಮಾತನಾಡಿದ ಅವರು, ‘ರೈಲು ಸೇವೆ ಆರಂಭಕ್ಕೂ ಮುನ್ನ ಹತ್ತು ದಿನ ತಾಂತ್ರಿಕ ಪರೀಕ್ಷೆ ಸೇರಿ ಹಲವು ಬಗೆಯ ಪ್ರಾಯೋಗಿಕ ಸಂಚಾರಕ್ಕೆ ಒಳಗಾಗಲಿದೆ. 

ಪ್ರೊಟೊಟೈಪ್‌ ರೈಲುಗಳ ತಪಾಸಣೆ ಪೂರ್ಣಗೊಂಡ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನು ನಿರ್ಮಿಸಲಾಗುವುದು. ಮುಂದಿನ ಒಂದೂವರೆ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ರೈಲುಗಳ ನಿರ್ಮಾಣ ಆರಂಭವಾಗಲಿದೆ. ಬಳಿಕ ತಿಂಗಳಿಗೆ ಎರಡರಿಂದ ಮೂರು ರೈಲುಗಳು ಸಂಚಾರಕ್ಕೆ ಸಿದ್ಧವಾಗಲಿವೆ’ ಎಂದು ತಿಳಿಸಿದರು. ‘ವಂದೇ ಭಾರತ್‌ ರೈಲಿನ ವಿನ್ಯಾಸವನ್ನು ಮೇಲ್ದರ್ಜೆಗೇರಿಸುವ ಕೆಲಸ ನಿರಂತರವಾಗಿದೆ. ಇದೇ ರೀತಿ ವಂದೇ ಭಾರತ್‌ ಮೆಟ್ರೋ, ವಂದೇ ಭಾರತ್‌ ಸ್ಲೀಪರ್‌ ಹಾಗೂ ಅಮೃತ್‌ ಭಾರತ್‌ ರೈಲುಗಳನ್ನೂ ನಾವಿನ್ಯವಾಗಿ ರೂಪಿಸಲಾಗುತ್ತಿದೆ. ವೈರಸ್‌ ನಿಯಂತ್ರಣ ವ್ಯವಸ್ಥೆ, ಹೆಚ್ಚು ಅಲುಗಾಡದ ರೀತಿ ರೂಪಿಸಲಾಗಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ’ ಎಂದರು.

Repoters Dairy: ದರ್ಶನ್‌ಗೆ ಕಾಡುತ್ತಿದೆ ‘ದುರ್ಯೋಧನ ಗ್ರಹಣ’: ಇದೇಕೆ ಹೀಗೆ ಸಾಲು ಸಾಲು ಕಂಟಕ?

‘ವಂದೇ ಭಾರತ್‌ ಸ್ಲೀಪರ್‌ ರೈಲಿನ ಆವೃತ್ತಿಯನ್ನು ರಾತ್ರಿ ವೇಳೆಯ ದೂರ ಪ್ರಯಾಣಕ್ಕೆ ಅಂದರೆ 800-1200 ಕಿ.ಮೀ. ಕ್ರಮಿಸಲು ಅನುಕೂಲವಾಗುಂತೆ ರೂಪಿಸಲಾಗಿದೆ. ಮುಖ್ಯವಾಗಿ ಮಧ್ಯಮ ವರ್ಗದ ಜನತೆಗೆ ಅನುಕೂಲಕರ ಎನ್ನಿಸಲಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಹೆಚ್ಚುಕಡಿಮೆ ಸರಿಸಮವಾಗಿ ಪ್ರಯಾಣಿಕ ದರ ಇರಲಿದೆ’ ಎಂದು ಹೇಳಿದರು. ವಂದೇ ಭಾರತ್‌ ರೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಾರತೀಯ ರೈಲ್ವೆ ಪ್ರತಿದಿನ 13 ಲಕ್ಷ ಊಟಗಳನ್ನು ಪೂರೈಸುತ್ತಿದೆ. ಈ ಸಂಬಂಧ ಶೇ.0.1ಕ್ಕಿಂತ ಕಡಿಮೆ ದೂರುಗಳು ದಾಖಲಾಗುತ್ತಿವೆ. 

ಆದರೂ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಗುತ್ತಿಗೆ ಅಡುಗೆದಾರರು, ಪೂರೈಕೆದಾರರ ಮೇಲೆ ಕ್ರಮ ವಹಿಸಲಾಗಿದೆ ಎಂದರು. ಇದಕ್ಕೂ ಮುನ್ನ ಸಚಿವರು ಬಿಇಎಂಎಲ್‌ ನೂತನ ವಂದೇ ಭಾರತ್‌ ನಿರ್ಮಾಣ ಘಟಕ ಹಾಗೂ 9.2 ಎಕರೆಯಲ್ಲಿ ನೂತನ ಹ್ಯಾಂಗರ್‌ ನಿರ್ಮಾಣಕ್ಕೆ ಚಾಲನೆ ನೀಡಿದರು. ಇಲ್ಲಿ ಬ್ರಾಡ್‌ ಗೇಜ್‌, ಸ್ಟ್ಯಾಂಡರ್ಡ್‌ ಗೇಜ್‌ ರೋಲಿಂಗ್ ಸ್ಟಾಕ್‌ ನಿರ್ಮಾಣ ಆಗಲಿದೆ. ಈ ವೇಳೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ರೈಲ್ವೆ ಮಂಡಳಿ ಸಿಇಒ, ಚೇರ್‌ಮನ್‌ ಸತೀಶ್‌ ಕುಮಾರ್‌, ಬಿಇಎಂಎಲ್‌ ವ್ಯವಸ್ಥಾಪಕ ನಿರ್ದೇಶಕ ಶಂತನು ರಾಯ್‌ ಇದ್ದರು.

ವಂದೇಭಾರತ್‌ ಸ್ಲೀಪರ್‌ ರೈಲು ಅನಾವರಣ: ಬಹುನಿರೀಕ್ಷಿತ ‘ವಂದೇ ಭಾರತ್‌’ ಸ್ಲೀಪರ್‌ ರೈಲು ಭಾನುವಾರ ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಇದನ್ನು ಅನಾವರಣಗೊಳಿಸಿದರು. ಈವರೆಗೆ ಚೇರ್‌ಕಾರ್‌ ವಂದೇಭಾರತ್‌ ರೈಲುಗಳು ಹಗಲಿನಲ್ಲಿ ಮಾತ್ರ ಸಂಚರಿಸುತ್ತಿದ್ದವು. ಆದರೆ ಸ್ಲೀಪರ್‌ ರೈಲುಗಳು ದೂರದ ಊರುಗಳಿಗೆ ರಾತ್ರಿ ವೇಳೆಯೂ ಸಂಚರಿಸಲಿವೆ. ಬಿಇಎಂಎಲ್‌ ನಿರ್ಮಿಸಿರುವ 16 ಬೋಗಿಗಳ ವಂದೇ ಭಾರತ್‌ ಸ್ಲೀಪರ್‌ ರೈಲು ಸದ್ಯ ಬೆಂಗಳೂರಿನಲ್ಲಿ ಇದ್ದು, ಶೀಘ್ರವೇ ಚೆನ್ನೈಗೆ ರವಾನೆ ಆಗಲಿದೆ. ಅಲ್ಲಿ 2 ರಿಂದ 3 ತಿಂಗಳ ಕಾಲ ತಪಾಸಣೆ ಆಗಲಿದೆ ಹಾಗೂ ಪ್ರಾಯೋಗಿಕ ಸಂಚಾರ ಆಗಲಿದೆ.  ಸುರಕ್ಷತೆ ಸಾಬೀತಾದ ಬಳಿಕ ರೈಲಿಗೆ ಅಧಿಕೃತ ಹಸಿರು ನಿಶಾನೆ ತೋರಿಸಲಾಗುತ್ತದೆ. ‘ಅಧಿಕೃತ ಆರಂಭಕ್ಕೆ 3 ತಿಂಗಳು ಹಿಡಿಯಲಿದೆ’ ಎಂದು ಸಚಿವ ವೈಷ್ಣವ್‌ ಹೇಳಿದ್ದಾರೆ.

ವಂದೇ ಭಾರತ್ ಸ್ಲೀಪರ್‌ ವಿಶೇಷ: ಐಷಾರಾಮಿ ಏರ್‌ಕ್ರಾಫ್ಟ್‌ ಮಾದರಿಯ ಸೌಲಭ್ಯವನ್ನು ಹೊಂದಿರುವ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 800ರಿಂದ 1200 ಕಿ.ಮೀ.ವರೆಗೂ ಸಂಚರಿಸಲಿದೆ. ನಿದ್ರಿಸಲು ಆರಾಮದಾಯಕ ಮಂಚ, ವಿಶಾಲವಾದ ಸ್ಥಳಾವಕಾಶ, ಗಾಳಿ ಬೆಳಕು ಹೊಂದಿದೆ. ಯುಎಸ್‌ಬಿ, ಚಾರ್ಜಿಂಗ್‌ ವ್ಯವಸ್ಥೆ, ಮೊಬೈಲ್‌, ಮ್ಯಾಗ್ಸಿನ್‌ ಹೋಲ್ಡರ್‌, ಸ್ನ್ಯಾಕ್‌ ಟೇಬಲ್‌ ಇದೆ. ಬಿಸಿನೀರು ಸ್ನಾನದ ವ್ಯವಸ್ಥೆ ಇದೆ.

ವಿಶೇಷವಾಗಿ ಡ್ರೈವಿಂಗ್‌ ಟ್ರೈಲರ್‌ ಬೋಗಿಯಲ್ಲಿ ಆರ್‌ಪಿಎಫ್‌ ಸೇರಿ ಭದ್ರತಾ ಸಿಬ್ಬಂದಿಯ ಶ್ವಾನದಳ ತಂಗಲು ‘ಡಾಗ್‌ ಬಾಕ್ಸ್’ ಇಡಲಾಗಿದೆ. ಅಗತ್ಯವಿದ್ದರೆ ಪ್ರಯಾಣಿಕರ ಸಾಕುನಾಯಿಗೂ ಇದನ್ನು ಕೊಡಲಾಗುತ್ತದೆ. ಅಂಗವಿಕಲ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಶೌಚಾಲಯವೂ ಇದೆ. ಆಟೋಮೆಟಿಕ್‌ ಡೋರ್‌, ಸೆನ್ಸರ್‌ ಆಧಾರಿತ ಅಂತರ್‌ ಸಂವಹನ ವ್ಯವಸ್ಥೆ, ಅಗ್ನಿ ಸುರಕ್ಷತಾ ಬಾಗಿಲು, ಲಗೇಜ್‌ ರೂಂ, ಓದಲು ದೀಪ, ರಾತ್ರಿಯಲ್ಲಿ ದೀಪ ಬಂದ್‌ ಆಗಿರುವಾಗ ಶೌಚಾಲಯಕ್ಕೆ ಹೋಗುವ ಪ್ರಯಾಣಿಕರಿಗೆ ಏಣಿಯ ಕೆಳಗೆ ಎಲ್‌ಇಡಿ ಲೈಟ್‌ ಕೊಡಲಾಗಿದೆ.

ಅಂಬೇಡ್ಕರ್ ನಿಗಮದಲ್ಲೂ 200 ಕೋಟಿ ಅಕ್ರಮ: ಎನ್.ರವಿಕುಮಾರ್‌

ಅಡುಗೆ ಸಿದ್ಧಪಡಿಸಲು ವಿಶೇಷ ಕೋಣೆಯಿದ್ದು, ಇಲ್ಲಿ ಓವೆನ್‌, ಫ್ರಿಡ್ಜ್‌, ನೀರು ಕಾಯಿಸುವ ವ್ಯವಸ್ಥೆ ಇದೆ. ಜೊತೆಗೆ ತ್ಯಾಜ್ಯದ ತೊಟ್ಟಿ ಇದೆ. ಸ್ಟೀಲ್‌ ಬಾಡಿಯ ರೈಲು ಇದಾಗಿದ್ದು, ಅಪಘಾತವಾದರೂ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗದಂತೆ ಸುರಕ್ಷತಾ ವಿನ್ಯಾಸ ರೂಪಿಸಲಾಗಿದೆ. ಒಳಾಂಗಣದಲ್ಲಿ ಗ್ಲಾಸ್‌ ಫೈಬರ್‌ ರೈನ್‌ಫೋರ್ಸ್ಡ್ ಪ್ಲಾಸ್ಟಿಕ್ಸ್‌ ಬಳಸಲಾಗಿದೆ. ಏರೋಡೈನಾಮಿಕ್‌ ಡಿಸೈನ್‌ ಅಳವಡಿಸಿಕೊಳ್ಳಲಾಗಿದೆ. ಅಗ್ನಿ ಸುರಕ್ಷತಾ ವ್ಯವಸ್ಥೆಯಿದೆ.

Latest Videos
Follow Us:
Download App:
  • android
  • ios