ಬೆಂಗಳೂರು-ಮದುರೈ ಸೇರಿ 3 ವಂದೇ ಭಾರತ್ ರೈಲಿಗೆ ಮೋದಿ ಚಾಲನೆ, ಇಲ್ಲಿದೆ ರೈಲು ವೇಳಾಪಟ್ಟಿ!
ಬೆಂಗಳೂರು ಮದುರೈ ಸೇರಿ 3 ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಮೂಲಕ ಬೆಂಗಳೂರಿಗೆ 8ನೇ ವಂದೇ ಭಾರತ್ ರೈಲು ಸೇವೆ ಸಿಕ್ಕಿದೆ.
ಬೆಂಗಳೂರು(ಆ.31) ದೇಶಾದ್ಯಂತ ವಂದೇ ಭಾರತ್ ರೈಲು ಸಂಚಾರ ವಿಸ್ತರಣೆಯಾಗುತ್ತಿದೆ. ಇದೀಗ ಬೆಂಗಳೂರಿನಿಂದ 8ನೇ ವಂದೇ ಭಾರತ್ ರೈಲಿಗೆ ಚಾಲನೆ ಸಿಕ್ಕಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಬೆಂಗಳೂರು ಮದುರೈ ಸೇರಿದಂತೆ ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಲಕ್ನೋ-ಮೀರತ್ ಹಾಗೂ ಚೆನ್ನೈ-ನಾಗರಕೊಯಿಲ್ ಚಾಲನೆ ಸಿಕ್ಕ ಇನ್ನೆರಡು ವಂದೇ ಭಾರತ್ ರೈಲು.
ಇಂದು ಉತ್ತರ ಹಾಗೂ ದಕ್ಷಿಣದ ನಡುವೆ ಹೊಸ ಸಂಪರ್ಕ ಅಧ್ಯಾಯ ಆರಂಭಗೊಂಡಿದೆ. ದೇಶದ ವಿಕಾಸ ಯಾತ್ರೆ ಅಡಿಯಲ್ಲಿ ಎಲ್ಲೆಡೆ ಸಂಪರ್ಕ ಕಲ್ಪಿಸಲಾಗುತ್ತಿದೆ. ವಿಸ್ತರಿಸಿದ ವಂದೇ ಭಾರತ್ ವಿಕಸಿತ ಭಾರತಕ್ಕೆ ಪೂರಕವಾಗಿದೆ. ಮಂದಿರ ನಗರ ಮದುರೈಯನ್ನು ದೇಶದ ಇಟಿ ನಗರ ಬೆಂಗಳೂರು ಜೊತೆ ಸಂಪರ್ಕಿಸಿದೆ ಎಂದು ಮೋದಿ ಹೇಳಿದ್ದಾರೆ.
ಹುಬ್ಬಳ್ಳಿ, ಗದಗ ರೈಲುಗಳಿಗೆ ಬೈಪಾಸ್ ವ್ಯವಸ್ಥೆ ಮಾಡಿ, ವಿಜಯಪುರಕ್ಕೆ ಪ್ರಯಾಣದ ಅವಧಿ ತಗ್ಗಿಸಿ: ಎಂ.ಬಿ. ಪಾಟೀಲ!
ಬೆಂಗಳೂರು ಮದುರೈ ನಡುವಿನ 430 ಕಿಲೋಮೀಟರ್ ದೂರ ಪ್ರಯಾಣವನ್ನು ವಂದೇ ಭಾರತ್ ರೈಲು 8 ಗಂಟೆಯಲ್ಲಿ ಕ್ರಮಿಸಲಿದೆ. ಹಾಲಿ ಇರುವ ಎಕ್ಸ್‌ಪ್ರೆಸ್ ರೈಲುಗಳು ಈ ದೂರ ಕ್ರಮಿಸಲು 9 ಗಂಟೆ ಸಮಯ ತೆಗದುಕೊಳ್ಳುತ್ತದೆ. ಮಧುರೈಯಿಂದ 20671 ವಂದೇ ಭಾರತ್ ರೈಲು ಹಾಗೂ ಬೆಂಗಳೂರಿನಿಂದ 20672 ರೈಲು ಪ್ರಯಾಣ ನಡೆಸಲಿದೆ. ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣದಿಂದ ಮಧ್ಯಾಹ್ನ 1.30ಕ್ಕೆ ಈ ರೈಲು ಹೊರಡಲಿದೆ. ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ಮೊದಲ ನಿಲುಗಡೆಯಾಗಲಿದೆ. ಬಳಿಕ ಸೇಲಂ, ನಮಕ್ಕಲ್, ಕರೂರ್, ತಿರುಚಿರಾಪಲ್ಲಿ, ದಿಂಡುಗಲ್ ರೈಲು ನಿಲ್ದಾಣದಲ್ಲಿ ನಿರುಗಡೆಯಾಗಲಿದೆ. ಮಧ್ಯಾಹ್ನ 1.30ಕ್ಕೆ ಹೊರಟ ರೈಲು ಮದುರೈಗೆ ರಾತ್ರಿ 9.45ಕ್ಕೆ ತಲುಪಲಿದೆ. ಮದುರೈನಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು ಮಧ್ಯಾಹ್ನ 1.ಗಂಟೆಗೆ ಬೆಂಗಳೂರು ತಲುಪಲಿದೆ.
20671 ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದ್ದಾರೆ. ಈ ರೈಲು ಸಂಜೆ 7.30 ರ ವಳೆಗೆ ಬೆಂಗಳೂರಿನ ಕಷ್ಣರಾಜಪುರಂ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಈ ರೈಲನ್ನು ಜನಪ್ರತಿನಿಧಿಗಳು ಸೇರಿದಂತೆ ಹಲವು ನಾಯಕರು ಸ್ವಾಗತ ಕೋರಲಿದ್ದಾರೆ. ರಾತ್ರಿ 8 ಗಂಟೆ ವೇಳೆಗೆ ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣ ತಲುಪಲಿದೆ.
ಬೆಂಗಳೂರಿನಿಂದ ಮತ್ತೊಂದು ನಗರಕ್ಕೆ ವಂದೇ ಭಾರತ್ ರೈಲು ನಾಳೆ ಆರಂಭ, ಇದು ನಗರದ 8ನೇ ಟ್ರೈನ್!
ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ನಿರ್ಮಾಣವಾಗಿರೋ ವಂದೇ ಭಾರತ್ ಟ್ರೈನ್ ಇದೀಗ ದೇಶದ ಮೂಲೆ ಮೂಲೆಯಲ್ಲಿ ಸಂಚರಿಸುತ್ತಿದೆ. ಬೆಂಗಳೂರು ಮದುರೈ ಬೆಂಗಳೂರಿನಿಂದ ಲಭ್ಯವಿರುವ 8ನೇ ವಂದೇ ಭಾರತ್ ರೈಲಾಗಿದೆ.