ಕೋಲಾಹಲಕ್ಕೆ ಕಾರಣವಾದ ಕರ್ವಾ ಚೌತ್ ಜಾಹೀರಾತು? ಸಲಿಂಗ ಸಂಬಂಧ!
* ಜಾಹೀರಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಪ್ರತಿಕ್ರಿಯೆ
* ಸಲಿಂಗ ಸಂಬಂಧವನ್ನು ಪ್ರಚುರಪಡಿಸುವ ಜಾಹೀರಾತಾ?
* ಕರ್ವಾ ಚೌತಯ್ ಗೆಂದು ತಯಾರಿಸಿದ ಜಾಹೀರಾತು
ಮುಂಬೈ(ಅ. 23) ಕೆಲವೊಂದು ಜಾಹೀರಾತುಗಳು ವಿವಾದಕ್ಕೆ ಕಾರಣವಾಗಿಬಿಡುತ್ತವೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್ ನಟ ವಿಕ್ಕಿ ಕೌಶಲ್ ಒಳಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಟೀಕೆಗಳು ಹರಿದು ಬಂದಿದ್ದವು. ಈಗ ಕರ್ವಾ ಚೌತ್ ಜಾಹೀರಾತೊಂದು ಸದ್ದು ಮಾಡುತ್ತಿದೆ.
ಡಾಬರ್ ಸಂಸ್ಥೆಯ ಜಾಹೀರಾತೊಂದು ಸೋಶಿಯಲ್ ಮೀಡಿಯಾದಲ್ಲಿ ಬಗೆ ಬಗೆಯ ಪ್ರತಿಕ್ರಿಯೆಗೆ ವೇದಿಕೆ ಮಾಡಿಕೊಟ್ಟಿದೆ. ಇಬ್ಬರು ಮಹಿಳೆಯರು ತಮ್ಮ ಮೊದಲ ಕರ್ವಾ ಚೌತ್ ಸಂಭ್ರಮಕ್ಕೆ ಸಿದ್ಧರಾಗುತ್ತಿರುತ್ತಾರೆ. ಮನೆಯ ಹಿರಿಯ ಮಹಿಳೆಯೊಬ್ಬರು ಅವರಿಗೆ ಹೊಸ ಬಟ್ಟೆಗಳನ್ನು ತಂದು ನೀಡುತ್ತಾರೆ. ಕರ್ವಾ ಚೌತ್ ಕಾರಣಕ್ಕೆ ಉಪವಾಸ ವ್ರತ ಮಾಡುತ್ತಿರುವುದನ್ನು ಇಬ್ಬರು ಮಹಿಳೆಯರು ತಿಳಿಸುತ್ತಾರೆ.
ಆದರೆ ನಂತರ ಈ ಇಬ್ಬರು ಮಹಿಳೆಯರನ್ನು ಸಂಗಾತಿಗಳು ಎಂಬಂತೆ ಬಿಂಬಿಸಿರುವುದು ಗೊತ್ತಾಗುತ್ತದೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ಹರಿದು ಬಂದಿವೆ. ಇದೊಂದು ಸಲಿಂಗಿಗಳ ಸ್ನೇಹಿ ಜಾಹೀರಾತು ಎಂದು ಕೆಲವರು ಬಣ್ಣಿಸಿದರೆ.. ಈ ರೀತಿಯಲ್ಲಿ ಸಲಿಂಗ ಸಂಬಂಧಕ್ಕೆ ಮಹತ್ವ ನೀಡುವ ಅಗತ್ಯ ಇತ್ತಾ ಎಂದು ಪ್ರಶ್ನೆ ಮಾಡಿದವರು ಇದ್ದಾರೆ.
ವಿಸ್ಕಿ ಪ್ರಚಾರ ಮಾಡಿದ ನಟಿ.. ಇದೆಲ್ಲ ಬೇಕಿತ್ತಾ?
ಡಾಬರ್ ಸಂಸ್ಥೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಕೆಲವರು ವಾದ ಮುಂದಿಟ್ಟಿದ್ದರೆ ಸಲಿಂಗ ಸಂಬಂಧಕ್ಕೆ ಈಗಾಗಲೇ ಕಾನೂನಿನ ಮಾನ್ಯತೆ ಇದೆಯಲ್ಲ ಎಂದು ಹೇಳಿದವರು ಇದ್ದಾರೆ. ನೀವು ಬಣ್ಣದ ಆಧಾರದಲ್ಲಿ ಸೌಂದರ್ಯ ಅಳೆಯುತ್ತೀರಾ ಎಂದು ಪ್ರಶ್ನೆ ಮಾಡಿದವರು ಇದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಿಂದ ಮಿಶ್ರ
ಏನಿದು ಕರ್ವಾ ಚೌತ್; ಪತಿ-ಪತ್ನಿಯರ ನಡುವಿನ ಬಾಂಧವ್ಯ ಹೆಚ್ಚಲು ಈ ಆಚರಣೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ವಿಶೇಷ ಮಾನ್ಯತೆ ಇದ್ದು ಉಪವಾಸ ಮಾಡಿ ಪತಿಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ.