Asianet Suvarna News Asianet Suvarna News

Cyclone Jawad: ಒಡಿಶಾ, ಪಶ್ಚಿಮ ಬಂಗಾಳದಲ್ಲಿ ವರುಣನ ಆರ್ಭಟ!

  • ಆಂಧ್ರಪ್ರದೇಶ, ಪ.ಬಂಗಾಳ ಮತ್ತು ಒಡಿಶಾದಲ್ಲಿ ಚಂಡಮಾರುತ ಭೀತಿ
  • ಜವಾದ್ ಮತ್ತಷ್ಟು ದುರ್ಬಲಗೊಳ್ಳಲಿದ್ದು ಪುರಿ ತಲುಪುವ ಸಾಧ್ಯತೆ 
  • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ಜವಾದ್
Cyclone Jawad effect Heavy rain lashes in Odisha and west Bengal
Author
Bengaluru, First Published Dec 5, 2021, 5:29 PM IST
  • Facebook
  • Twitter
  • Whatsapp

ಭುವನೇಶ್ವರ (ಡಿ.5): ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತದಿಂದ ಉಂಟಾಗಿರುವ  ಜವಾದ್ ಚಂಡಮಾರುತದ  (Cyclone Jawad) ಪರಿಣಾಮವಾಗಿ ಭಾನುವಾರದಂದು ಒಡಿಶಾದಲ್ಲಿ  ಭಾರಿ ಪ್ರಮಾಣದಲ್ಲಿ ವರುಣ ಆರ್ಭಟಿಸುತ್ತಿದ್ದಾನೆ.  ಕಳೆದ 6 ಗಂಟೆಗಳಲ್ಲಿ ಚಂಡಮಾರುತ ಪ್ರತಿ ಗಂಟೆಗೆ 20  ಕಿ.ಮೀ ವೇಗದಲ್ಲಿ ಉತ್ತರ-ಈಶಾನ್ಯದತ್ತ ಚಲಿಸಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. ಮಧ್ಯಾಹ್ನದ ಸಮಯಕ್ಕೆ  ಚಂಡಮಾರುತ ಮತ್ತಷ್ಟು ವಾಯುಭಾರ ಕುಸಿತದೊಂದಿಗೆ ಪುರಿ ಬಳಿ ಇರುವ ಒಡಿಶಾ (Odisha) ಕಡಲ ತೀರಕ್ಕೆ ತಲುಪಿದೆ. ಮಧ್ಯರಾತ್ರಿ ವೇಳೆಗೆ ಒಡಿಶಾದ ಕಡಲ ತೀರ, ಪಶ್ಚಿಮಬಂಗಾಳ (West Bengal) ಕಡಲ ತೀರದೆಡೆಗೆ ಚಂಡಮಾರುತ ತಲುಪಲಿದೆ ಎಂದು  ಭಾರತೀಯ ಹವಾಮಾನ ಇಲಾಖೆ (Indian meteorological department) ಅಂದಾಜಿಸಿದೆ.

ರಾಜ್ಯದ ಗಂಜಾಮ್, ಖುರ್ದಾ,ಪುರಿ, ಕೇಂದ್ರಪಾರ ಹಾಗೂ ಜಗತ್ಸಿಂಗ್ ಪುರ್ ಗಳಲ್ಲಿ ಚಂಡಮಾರುತದ ಪರಿಣಾಮ ಭಾರಿ ಮಳೆಯಾಗುತ್ತಿದ್ದು,  ಗಂಜಾಮ್ ನ ಖಾಲಿಕೋಟೆಯಲ್ಲಿ (158 ಮಿ.ಮೀ ) ನಯಾಗರ್ (107.5 ಮಿ.ಮೀ ) ಛತ್ರಪುರ (86.6 ಮಿ.ಮೀ ) ಹಾಗೂ ಭುವನೇಶ್ವರ (42.3 ಮಿ.ಮೀ) ಮಳೆಯಾಗಿದೆ.

Cyclone Jawad: ಒಡಿಶಾದ ಮೇಲೆ ಕಣ್ಣಿಟ್ಟ ಜೋವಾದ್ ಚಂಡಮಾರುತ

ಸ್ಥಳಾಂತರ ಕಾರ್ಯ ಆರಂಭ: ಜವಾದ್ ಚಂಡಮಾರುತದಿಂದ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದರಿಂದ ಒಡಿಶಾ ಮತ್ತು ಆಂಧ್ರಪ್ರದೇಶ ಕರಾವಳಿ ಜಿಲ್ಲೆಗಳಲ್ಲಿ ಸ್ಥಳಾಂತರಿಸುವಿಕೆ ಕಾರ್ಯವನ್ನು ಈಗಾಗಲೇ ಶುರು ಮಾಡಲಾಗಿದೆ. ಆಂಧ್ರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದಲ್ಲಿ ಒಟ್ಟು 64 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ ಸಿಬ್ಬಂದಿ ನಿಯೋಜಿಸಲಾಗಿದೆ. ಈಗಾಗಲೇ ಸುಮಾರು 60 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿವೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.

Cyclone Jawad: ಆಂಧ್ರ, ಒಡಿಶಾಗೆ ಆತಂಕ, ಎಚ್ಚೆತ್ತ ಸರ್ಕಾರ: ಪ್ರಧಾನಿ ಮೋದಿಯಿಂದ ಪರಿಶೀಲನಾ ಸಭೆ

ರಾಜ್ಯದಲ್ಲೂ ಮುಂದುವರೆಯಲಿದೆ ಮಳೆ: ಒಡಿಶಾ ಜೊತೆಗೆ  ಆಂಧ್ರಪ್ರದೇಶ,  ಪಶ್ಚಿಮ ಬಂಗಾಳದಲ್ಲೂ ಜವಾದ್ ಚಂಡಮಾರುತ (Cyclone Jawad) ಆರ್ಭಟಿಸಲಿದ್ದು, ಈಗಾಗಲೇ ಕೊಲ್ಕತ್ತಾದಲ್ಲಿ ಕೂಡ ಮಳೆ ಆರಂಭವಾಗಿದೆ.  ಉಳಿದಂತೆ ಪಶ್ಚಿಮ ಬಂಗಾಳದ ದಕ್ಷಿಣ ಜಿಲ್ಲೆಗಳಾದ ದಕ್ಷಿಣ ಮತ್ತು ಉತ್ತರದ 24 ಪರಗಣ ಜಿಲ್ಲೆಗಳು, ಮಿಡ್ನಾಪುರದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳು, ಹೂಗ್ಲಿ, ನಾದಿಯಾ ಮತ್ತು ಝಾರ್​ಗ್ರಾಮ್​​ಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರಿಂದ ಅಗತ್ಯ ಕ್ರಮಗಳನ್ನು ತೆಗದುಕೊಳ್ಳಲಾಗಿದೆ. ಚಂಡಮಾರುತದ ಪರಿಣಾಮ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆ (Heavy Rain) ಹೆಚ್ಚಾಗುವ ಸಾಧ್ಯತೆ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಈಗಾಗಲೇ ಮಳೆ ಸುರಿಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ಮಳೆ ಆರಂಭವಾಗಿದ್ದು, ಕೆಲವು ಕಡೆ ಮೋಡ ಕವಿದ ವಾತಾವರಣ ಮುದುವರೆದಿದೆ. ರಾಜ್ಯಾದ್ಯಂತ ಇನ್ನು ಕೆಲ ದಿನಗಳವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Cyclone Jawad:ಒಡಿಶಾದಲ್ಲಿ ಹೆಚ್ಚಿದ ಭೀತಿ, ಕರ್ನಾಟಕದ ರೈಲು ಸಂಚಾರ ಬಂದ್

ಉತ್ತರ ಭಾರತದ ಹಲವೆಡೆ ಮಳೆ ಸಾಧ್ಯತೆ: ದಕ್ಷಿಣ ಥೈಲ್ಯಾಂಡ್​​ನ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗಿ ಬಿರುಗಾಳಿ ಬೀಸಿ ಈ ಮಳೆ ಆರಂಭವಾಗಿದೆ. ಇದು ಚಂಡಮಾರುತ ಸ್ವರೂಪ ಪಡೆದು ಅಂಡಮಾನ್​ ಸಾಗರದ ದಕ್ಷಿಣ ಕರಾವಳಿ ಮೂಲಕ ಭಾರತವನ್ನು ಪ್ರವೇಶಿಸಿದೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾ ಮಾತ್ರವಲ್ಲದೆ ಮುಂಬೈ, ಗುಜರಾತ್, ರಾಜಸ್ತಾನ (rajastan), ದೆಹಲಿ (delhi), ಹರಿಯಾಣ, ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ, ಉತ್ತರಾಖಂಡ್​ ಮತ್ತು ಉತ್ತರ-ಮಧ್ಯ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಅಕ್ಟೋಬರ್ ತಿಂಗಳಾಂತ್ಯದಲ್ಲೇ  ಡಿಸೆಂಬರ್ ಮೊದಲ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ (Bay of Bengal) ಚಂಡಮಾರುತ (cyclone) ಏಳುವ ಸಾಧ್ಯತೆ  ಹೆಚ್ಚಿದ್ದು, ಒಡಿಶಾದಲ್ಲಿ ಡಿಸೆಂಬರ್​ 2ರಿಂದ 5ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಇದೀಗ ಮಳೆ ಇನ್ನು ಹಲವು ದಿನ ಮುಂದುವರೆಯಲಿದೆ ಎಂದು ವರದಿ ತಿಳಿಸಿದೆ.

Follow Us:
Download App:
  • android
  • ios