ನವದೆಹಲಿ (ಜು. 05)  ಕೊರೋನಾ ವೈರಸ್ ಆತಂಕದ ನಡುವೆಯೂ ಚಿನ್ನದ ದರ ಮಾತ್ರ ಏರಿಕೆಯ ಹಾದಿಯಲ್ಲೇ ಇದೆ. ಇದಕ್ಕೆ ಕಾರಣಗಳು ಮಾತ್ರ ವಿಚಿತ್ರವಾಗಿವೆ.  ಎರಡನೇ ತ್ರೈಮಾಸಿಕಕ್ಕೆ ಕೊನೆಗೊಂಡಂತೆ ಈ ವರ್ಷ ಚಿನ್ನದ ದರ ಬರೋಬ್ಬರಿ ಶೇ.  17  ರಷ್ಟು ಏರಿಕೆ  ದಾಖಲಿಸಿದೆ.

ಲಾಕ್ ಡೌನ್ ನಂತರದಲ್ಲಿ ಏಷ್ಯಾ ಮಾರುಕಟ್ಟೆ ತೆರೆದುಕೊಂಡ ಮೇಲೆ ಚಿನ್ನದ ದರ ಗಣನೀಯ ಏರಿಕೆ ಸಾಧಿಸಿದೆ. ಚೀನಾ ಮತ್ತು ಭಾರತದ ಖರೀದಿದಾರರು ಅಥವಾ ಹೂಡಿಕೆದಾರರ ಕಾರಣಕ್ಕೆ ಬೆಲೆ ಏರಿಕೆಯಾಗಿದೆ.

ಭಾರತ ಮತ್ತು ಚೀನಾ ದೊಡ್ಡ ಮಾರುಕಟ್ಟೆ:  ಚೀನಾ ಮತ್ತು ಭಾರತ ಚೀನಾ ಖರೀದಿಯ ದೊಡ್ಡ್ ಮಾರುಕಟ್ಟೆಗಳು, ಆಭರಣದ ವ್ಯಾಪಾರ ವಹಿವಾಟಿಗೆ ಕೊರೋನಾ ತಡೆ ಹಾಕಿದ್ದರೂ ಚಿನ್ನದ ಮೇಲಿನ ಮೋಹ ಮಾತ್ರ ಜನರಿಗೆ ಕಡಿಮೆಯಾಗಿಲ್ಲ. 

ಚಿನ್ನದ ಮಾಸ್ಕ್ ಧರಿಸಿದ ವರ್ತಕ, ಏನಪ್ಪಾ ನಿನ್ನ ಲೀಲೆ

ಚಿನ್ನದ ಕಡೆ ಬಂದ ಪಾಶ್ಚಿಮಾತ್ಯ ಹೂಡಿಕೆದಾರರು:  ಇನ್ನೊಂದು ಕಡೆ ಪಾಶ್ಚಿಮಾತ್ಯ ಹೂಡಿಕೆದಾರರು ಸೇಫ್ ಇನ್ವೆಸ್ಟ್ ಮೆಂಟ್ ಎಂದು ಚಿನ್ನದ ಮೊರೆ ಹೋಗಿದ್ದಾರೆ.  Exchange-traded fund ಮಾರುಕಟ್ಟೆಯಲ್ಲೂ ಚಿನ್ನದ ಹೊಳೆದಿದೆ.  ಚಿನ್ನದ ದರ ಏರಿಕೆಗೆ ಅಭಿವೃದ್ಧಿ ಶೀಲ ರಾಷ್ಟ್ರಗಳ ಕೊಡಗೆ ಶೇ.  18 ರಷ್ಟಿದೆ. ಭಾರತದ ವಿಚಾರಕ್ಕೆ ಬಂದರೆ ರೂಪಾಯಿ ಕುಸಿತ ಸಹ ಪರಿಣಾಮ ಬೀರಿದೆ.

ಸುರಕ್ಷಿತ ಹೂಡಿಕೆ:  2011 ರ ನಂತರ ಇದೇ ಮೊದಲ ಬಾರಿಗೆ ಒಂದು ಓನ್ಸ್ ಚಿನ್ನ  1800  ಡಾಲರ್ ನಲ್ಲಿ ವಹಿವಾಟು ದಾಖಲಿಸಿದೆ. ಇದೊಂದು ದಾಖಲೆಯೇ ಸರಿ. ಕೊರೋನಾ ಕಾರಣಕ್ಕೆ ಏಷ್ಯಾದ ರಾಷ್ಟ್ರಗಳು ಆರ್ಥಿಕ ಹೊಡೆತಕ್ಕೆ ಸಿಲುಕಿವೆ. ಪರಿಣಾಮ ಜನರು ಸುರಕ್ಷಿತ ಹೂಡಿಕೆಯನ್ನು ಹುಡುಕಿದ್ದು ಅವರಿಗೆ ಸಿಕ್ಕಿದ್ದು ಚಿನ್ನ. 

ವ್ಯತಿರಿಕ್ತ ವ್ಯವಸ್ಥೆ:  ಆಭರಣದ ವಿಚಾರಕ್ಕೆ ಬಂದರೆ ನಮಗೆ ವ್ಯತಿರಿಕ್ತ ಪರಿಣಾಮ ಕಾಣಿಸುವುದು. ಚೀನಾದಲ್ಲಿ ಆಭರಣಗಳ ಮಾರಾಟ ಅಥವಾ ಖರೀದಿ ದರ ಶೇ. 23 ಕುಸಿದಿದೆ, ಭಾರತದಲ್ಲಿ ಶೇ. 36 ಕೆಳಕ್ಕೆ ಇಳಿದಿದೆ. 

ನನ್ನ ಕೆಲಸವೇ ಶಾಶ್ವತ ಎಂಬ ನಂಬಿಕೆ ಈ ಪರಿಸ್ಥಿತಿಯಲ್ಲಿ ಇಲ್ಲ, ಈ ಸಂದರ್ಭದಲ್ಲಿ ಚಿನ್ನ ಖರೀದಿ ಮಾಡುವ ಯೋಚನೆ ಮುಂದಕ್ಕೆ ಹಾಕಿದ್ದೇನೆ ಎಂದು ದೆಹಲಿಯ ಇಂಜಿನಿಯರ್ ಒಬ್ಬರು ಹೇಳುತ್ತಾರೆ. ರಿಟೈಲ್ ಇಂಡಸ್ಟ್ರಿ ಅದರಲ್ಲೂ ಚಿನ್ನದ ವ್ಯಾಪಾರ ಸವಾಲು ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಜಾಸ್ತಿಯಾಗಲಿದೆ ಎಂದು ಆಭರಣ ವರ್ತಕರೊಬ್ಬರು ಹೇಳುತ್ತಾರೆ.