ಆರ್ಡರ್ ಅದಲು ಬದಲಾಗಿ ದೂರು ನೀಡಿದ ಘಟನೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಆರ್ಡರ್ ಅದಲು ಬದಲಾದರೂ, ಸಸ್ಯಾಹಾರಿ ಪನ್ನೀರ್ ಬದಲು ಮಟನ್ ಬಿರಿಯಾನಿ ನೀಡಿದರೂ ಗ್ರಾಹಕನಿಗೆ ಕಂಪ್ಲೇಟ್ ಇಲ್ಲ, ಬದಲಾಗಿ ಧನ್ಯವಾದ ತಿಳಿಸಿದ್ದಾನೆ. ಏನಿದು ಘಟನೆ
ಲಖನೌ(ಏ.09) ಹಬ್ಬಕ್ಕೆ ಶುದ್ಧ ಸಸ್ಯಾಹಾರಿ ಆಹಾರ ಆರ್ಡರ್ ಮಾಡಿದ ಮಹಿಳೆಗೆ ಚಿಕನ್ ಬಿರಿಯಾನಿ ಡೆಲಿವರಿ ಮಾಡಿದ ಸ್ವಿಗ್ಗಿ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ರೆಸ್ಟೋರೆಂಟ್ ಸಿಬ್ಬಂದಿಯನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ ಸ್ವಿಗ್ಗಿಗೆ ಕೆಟ್ಟ ಹೆಸರು ಬಂದಿದೆ. ಆದರೆ ಇಲ್ಲೊಬ್ಬ ಗ್ರಾಹಕ ಆರ್ಡರ್ ಮಾಡಿದ್ದ ಪನ್ನೀರ್ ತಿನಿಸು. ಆದರೆ ಆತನಿಗೆ ಡೆಲಿವರಿಯಾಗಿದ್ದು ಮಟನ್ ಬಿರಿಯಾನಿ. ಆದರೆ ಈ ಗ್ರಾಹಕ ಸ್ವಿಗ್ಗಿಗೆ ದೂರು ನೀಡಿಲ್ಲ, ಬದಲಾಗಿ ಖುಷಿಯಿಂದ ಸ್ವಿಗ್ಗಿಗೆ ಧನ್ಯವಾದ ಹೇಳಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಗಂಭೀರ ವಿಚಾರ ತಮಾಷೆಯಾಗಿ ಪರಿಣಮಿಸಿದೆ. ಸ್ವಿಗ್ಗಿ ಗ್ರಾಹಕ ಲಖನೌ ಇದ್ರೀಸ್ ಬಿರಿಯಾನಿ ರೆಸ್ಟೋರೆಂಟ್‌ನಿಂದ ಪನ್ನೀರಿ ಬಿರಿಯಾನಿ ಆರ್ಡರ್ ಮಾಡಿದ್ದಾನೆ. ಆರ್ಡರ್ ಮಾಡಿ ಕೆಲ ಹೊತ್ತು ಕಳೆಯುತ್ತಿದ್ದಂತೆ ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸೆಲ್ ತಂದಿಟ್ಟಿದ್ದಾನೆ. ಖುಷಿ ಖುಷಿಯಿಂದ ಗ್ರಾಹಕರ ಪಾರ್ಸೆಲ್ ಬಿಚ್ಚಿದ್ದಾನೆ. ಈ ವೇಳೆ ಅಚ್ಚರಿ ಜೊತೆಗೆ ಸಂಭ್ರಮ ಡಬಲ್ ಆಗಿದೆ. ಕಾರಣ ಈತ ಆರ್ಡರ್ ಮಾಡಿದ್ದ ಪನ್ನೀರ್ ಬಿರಿಯಾನಿ, ಆದರೆ ಡೆಲಿವರಿಯಾಗಿದ್ದು ಮಟನ್ ಬಿರಿಯಾನಿ. ಮತ್ತೊಂದು ವಿಶೇಷ ಅಂದರೆ ಈ ಬಿರಿಯಾನಿಯಲ್ಲಿ ಮಟನ್ ಪೀಸ್ ಎರಡು ಹೆಚ್ಚೇ ಇತ್ತು.
ಪನ್ನೀರ್ ಬದಲು ಮಟನ್ ಬಿರಿಯಾನಿ
ಮಟನ್ ಬಿರಿಯಾನಿ ಬ್ಯಾಟಿಂಗ್ ಮಾಡಿದ ಗ್ರಾಹಕನಿಗೆ ಸ್ವಿಗ್ಗಿಗೆ ಧನ್ಯವಾದ ಹೇಳುವ ಮನಸ್ಸಾಗಿದೆ. ಇದಕ್ಕಾಗಿ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾನೆ. ಇದ್ರೀಸ್ ಬಿರಿಯಾನಿ ಕೇಂದ್ರದಿಂದ ಲಖನೌ ಪನ್ನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಆದರೆ ನನಗೆ ಮಟನ್ ಬಿರಿಯಾನಿ ಬಂದಿದೆ. ಇದರಲ್ಲಿ ಹೆಚ್ಚೇ ಮಟನ್ ಪೀಸ್ ಇತ್ತು ಎಂದು ಟ್ವೀಟ್ ಮಾಡಿದ್ದಾನೆ.
ದೂರು ಅಲ್ಲ ಧನ್ಯವಾದ
ಈತನ ಟ್ವೀಟ್ ಗಮನಿಸಿದ ಸ್ವಿಗ್ಗಿ ತಕ್ಷನ ಪ್ರತಿಕ್ರಿಯೆ ನೀಡಿದೆ. ಈಗಾಗಲೇ ಶುದ್ದ ಸಸ್ಯಾಹಾರಿ ಆಹಾರ ನೀಡುವ ಬದಲು ಮಾಂಸಾಹಾರ ನೀಡಿ ಸಿಬ್ಬಂದಿ ಅರಸ್ಟ್, ಸ್ವಿಗ್ಗಿ ಮೇಲೆ ಕೆಟ್ಟ ಹೆಸರು, ಪ್ರಕರಣ ಎಲ್ಲಾ ತಲೆನೋವು ನೆತ್ತಿ ಮೇಲೆ ಇರುವಾಗಲೇ ಮತ್ತೊಂದು ಪ್ರಕರಣ ನಡೆದು ಹೋಯ್ತಲ್ಲ ಎಂದು ಸ್ವಿಗ್ಗಿ ಮರುಗಿದೆ. ಇಷ್ಟೇ ಅಲ್ಲ ತಕ್ಷಣವೇ ಗ್ರಾಹಕನಿಗೆ ಪ್ರತಿಕ್ರಿಸಿದೆ. ಈ ರೀತಿ ಆಗಬಾರದು. ದಯವಿಟ್ಟು ನಿಮ್ಮ ಆರ್ಡರ್ ಐಡಿ ಕೊಡಿ, ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸುತ್ತೇವೆ ಎಂದು ಸ್ವಿಗ್ಗಿ ಹೇಳಿದೆ. ಸ್ವಿಗ್ಗಿ ಪ್ರತಿಕ್ರಿಯೆ ಬಂದ ಬೆನ್ನಲ್ಲೇ ಗ್ರಾಹಕ ತಕ್ಷಣ ಸ್ವಿಗ್ಗಿಗೆ ಪ್ರತಿಕ್ರಿಯಿಸಿದ್ದಾನೆ. ತಪ್ಪಾಗಿ ಡೆಲಿವರಿ ಆಗಿರುವ ಬಗ್ಗೆ ದೂರು ನೀಡುತ್ತಿಲ್ಲ. ಬದಲಾಗಿ ಧನ್ಯವಾದ ಹೇಳುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾನೆ.
ಈ ಘಟನೆಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಪನ್ನೀರ್ ಬೆಲೆಗೆ ಸ್ವಿಗ್ಗಿ ಮಟನ್ ಬಿರಿಯಾನಿ ನೀಡಿದರೆ ಯಾರು ತಾನೇ ಧನ್ಯವಾದ ಹೇಳದೇ ಇರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಪನ್ನೀರ್ ತಿನ್ನಲು ಮನಸ್ಸಾದ ವ್ಯಕ್ತಿಯೂ ಮಟನ್ ಬಿರಿಯಾನಿ ಸಿಕ್ಕಿದ ಖುಷಿ ಕಾಡಲ್ಲಿ ದೇವತೆ ಚಿನ್ನ, ಬೆಳ್ಳಿ, ಕಬ್ಬಿಣದ ಮೂರು ಕೊಡಲಿ ಕೊಟ್ಟಂತಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.
ಚಾಯಾ ಶರ್ಮಾ ಪ್ರಕರಣ ತಲೆನೋವು
ಚಾಯಾ ಶರ್ಮಾ ಪ್ರಕರಣದಲ್ಲಿ ಆರ್ಡರ್ ಅದಲು ಬದಲಾಗಿ ಕೊನೆಗೆ ಸಿಬ್ಬಂದಿಯೂ ಅರೆಸ್ಟ್, ಇತ್ತ ಸ್ವಿಗ್ಗಿ ವಿರುದ್ಧ ತೀವ್ರ ಆಕ್ರೋಶ, ಟೀಕೆ ಕೇಳಿಬಂದಿತ್ತು. ಚಾಯಾ ಶರ್ಮಾ ನೀಡಿದ ದೂರಿನಿಂದ ಕೋಲಾಹಲವೇ ಸೃಷ್ಟಿಯಾಗಿತ್ತು.ಈ ಪ್ರಕರಣ ಕಾವು ಇನ್ನೂ ಆರಿಲ್ಲ. ಇದೀಗ ಮತ್ತೊಂದು ಪ್ರಕರಣ ಸ್ವಿಗ್ಗಿಗೆ ದೂರು ದಾಖಲಿಸಬೇಕೋ, ಬೇಡವೋ ಅನ್ನೋದು ಗೊತ್ತಾಗಿಲ್ಲ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಿಂದ ರಿಯಾಯಿತಿಗಳ ಸುರಿಮಳೆ; ಗ್ರಾಹಕರಿಗೆ ಭರ್ಜರಿ ಆಫರ್
