ಮುಖೇಶ್ ಅಂಬಾನಿ ಬಂಗಲೆ ಭದ್ರತೆಗಿದ್ದ CRPF ಯೋಧ ದುರ್ಮರಣ| ಆಕಸ್ಮಕವಾಗಿ ಹಾರಿದ ಗುಂಡು ತಗುಲು ದೇವೇಂದ್ರ ಬಕೋತ್ರಾ ಸಾವು| ಮುಖೇಶ್ ಅಂಬಾನಿ ಅವರ 27 ಅಂತಸ್ತಿನ 'ಅಂಟಿಲಿಯಾ' ಬಂಗಲೆಯ ಭದ್ರತೆಗೆ ನಿಯೋಜನೆಗೊಂಡಿದ್ದ ದೇವೇಂದ್ರ| ದೇವೇಂದ್ರ ಎದೆಗೆ ಹೊಕ್ಕ ರೈಫಲ್‌ನಿಂದ ಹಾರಿದ ಎರಡು ಗುಂಡು| ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದೇವೇಂದ್ರ|

ಮುಂಬೈ(ಜ.24): ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಭದ್ರತೆಗೆ ನಿಯೋಜನೆಗೊಂಡಿದ್ದ CRPF ಯೋಧನೋರ್ವ, ತನ್ನ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲು ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಖೇಶ್ ಅಂಬಾನಿ ಅವರ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದ ದೇವೇಂದ್ರ ಬಕೋತ್ರಾ, ತನ್ನದೇ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಹತರಾಗಿದ್ದಾರೆ.

ಸರ್ಕಾರಿ ಐಒಸಿ ಹಿಂದಿಕ್ಕಿದ ರಿಲಯನ್ಸ್ ಈಗ ಆದಾಯದಲ್ಲಿ ನಂ.1

ಮುಖೇಶ್ ಅಂಬಾನಿ ಅವರ 27 ಅಂತಸ್ತಿನ 'ಅಂಟಿಲಿಯಾ' ಬಂಗಲೆಯ ಭದ್ರತೆಗೆ ದೇವೇಂದ್ರ ಬಕೋತ್ರಾ ನಿಯೋಜನೆಗೊಂಡಿದ್ದರು. ಬುಧವಾರ ಸಾಯಂಕಾಲ 7 ಗಂಟೆ ಸುಮಾರಿಗೆ ದೇವೇಂದ್ರ ಅವರ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡುಗಳು ಹಾರಿವೆ. ಪರಿಣಾಮ ದೇವೇಂದ್ರ ಅವರ ಎದೆಗೆ ಎರಡು ಗುಂಡುಗಳು ಹೊಕ್ಕಿದ್ದವು.

ಕೂಡಲೇ ದೇವೇಂದ್ರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟರು ಎಂದು ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ.

ರಿಲಯನ್ಸ್ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ ಏರಿಕೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡೆಪ್ಯೂಟಿ ಪೊಲೀಸ್ ಕಮಿಷನರ್ ರಾಜೀವ್ ಜೈನ್, ಇದೊಂದು ದುರ್ಘಟನೆಯಾಗಿದ್ದು, ದೇವೇಂದ್ರ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.