ರಿಲಯನ್ಸ್ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ ಏರಿಕೆ
ರಿಲಯನ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ದಾಟಿದೆ | ಒಂದೇ ತಿಂಗಳಲ್ಲಿ .1 ಲಕ್ಷ ಕೋಟಿ ಮೌಲ್ಯವರ್ಧನೆ | ಈ ವರ್ಷ ಷೇರು ಬೆಲೆ ಶೇ.41 ರಷ್ಟು ಹೆಚ್ಚಳ
ನವದೆಹಲಿ (ನ. 29): ಒಂದೆಡೆ ಅನಿಲ್ ಅಂಬಾನಿ ಒಡೆತನದ ಕಂಪನಿಗಳು ತೀವ್ರ ಆರ್ಥಿಕ ನಷ್ಟಕ್ಕೆ ತುತ್ತಾಗಿ ದಿವಾಳಿ ಭೀತಿ ಎದುರಿಸುತ್ತಿದ್ದರೆ, ಮತ್ತೊಂದೆಡೆ ಅವರ ಹಿರಿಯ ಸೋದರ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹೊಸ ಇತಿಹಾಸ ಸೃಷ್ಟಿಸಿದೆ. ನಿರಂತರವಾಗಿ ಷೇರು ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಒಟ್ಟು ಮಾರುಕಟ್ಟೆಮೌಲ್ಯ ಗುರುವಾರ 10 ಲಕ್ಷ ಕೋಟಿ ರು. ಗಡಿ ದಾಟಿದೆ. ತನ್ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಕಂಪನಿ ಎಂಬ ಹಿರಿಮೆಗೆ ರಿಲಯನ್ಸ್ ಪಾತ್ರವಾಗಿದೆ.
ಗುರುವಾರ ಮಾರುಕಟ್ಟೆಮುಕ್ತಾಯವಾದಾಗ ರಿಲಯನ್ಸ್ ಕಂಪನಿ ಷೇರುಗಳು ಮುಂಬೈ ಷೇರುಪೇಟೆಯಲ್ಲಿ ಶೇ.0.65ರಷ್ಟುಏರಿಕೆ ಕಂಡು 1579.95 ರು.ಗೆ ಹೆಚ್ಚಳವಾದವು. ರಾಷ್ಟ್ರೀಯ ಷೇರುಪೇಟೆಯಲ್ಲಿ ಶೇ.0.77ರಷ್ಟುಏರಿಕೆ ದಾಖಲಿಸಿ 1582 ರು. ತಲುಪಿದವು.
41,020 ಅಂಕಗಳಲ್ಲಿ ಮುಕ್ತಾಯ: ಸೆನ್ಸೆಕ್ಸ್ ಹೊಸ ದಾಖಲೆ ನಿರ್ಮಾಣ
2018ರ ಆಗಸ್ಟ್‌ನಲ್ಲಿ 8 ಲಕ್ಷ ಕೋಟಿ ರು. ಮಾರುಕಟ್ಟೆಮೌಲ್ಯವನ್ನು ರಿಲಯನ್ಸ್ ತಲುಪಿ, ಆ ಸಾಧನೆ ಮಾಡಿದ ದೇಶದ ಮೊದಲ ಕಂಪನಿ ಎಂದು ಹೆಸರು ಮಾಡಿತ್ತು. ಕಳೆದ ಅಕ್ಟೋಬರ್‌ನಲ್ಲಿ ಕಂಪನಿಯ ಮಾರುಕಟ್ಟೆಮೌಲ್ಯ 9 ಲಕ್ಷ ಕೋಟಿ ರು. ಮುಟ್ಟಿತ್ತು. ಇದೀಗ ಒಂದೇ ತಿಂಗಳಲ್ಲಿ 10 ಲಕ್ಷ ಕೋಟಿ ರು.ಗೆ ಜಿಗಿದಿದೆ. ಈ ವರ್ಷ ಇಲ್ಲಿವರೆಗೆ ರಿಲಯನ್ಸ್ ಷೇರುಗಳ ಬೆಲೆ ಶೇ.41ರಷ್ಟುಏರಿಕೆಯಾಗಿವೆ. ಆದರೆ ಇದೇ ಅವಧಿಯಲ್ಲಿ ಸೆನ್ಸೆಕ್ಸ್ ಮೌಲ್ಯ ಕೇವಲ ಶೇ.14ರಷ್ಟುವೃದ್ಧಿಯಾಗಿದೆ.
ಭಾರತದಲ್ಲಿ ಆರ್ಥಿಕ ಕುಸಿತ ಇಲ್ಲ, ಹಿಂಜರಿಕೆ ಅಷ್ಟೇ: ನಿರ್ಮಲಾ ಸೀತಾರಾಮನ್
ಮಾರುಕಟ್ಟೆಮೌಲ್ಯದಲ್ಲಿ ರಿಲಯನ್ಸ್ ನಂತರದಲ್ಲಿರುವ ಮತ್ತೊಂದು ಕಂಪನಿ ಎಂದರೆ ಟಿಸಿಎಸ್. ಅದು 7.79 ಲಕ್ಷ ಕೋಟಿ ರು. ಮೌಲ್ಯ ಹೊಂದಿದೆ. ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್ (6.92 ಲಕ್ಷ ಕೋಟಿ ರು.), ಹಿಂದುಸ್ತಾನ್ ಯುನಿಲೀವರ್ (4.51 ಲಕ್ಷ ಕೋಟಿ ರು.) ಹಾಗೂ ಎಚ್‌ಡಿಎಫ್‌ಸಿ (3.98 ಲಕ್ಷ ಕೋಟಿ ರು.) ಇವೆ.