ದೇಶವಿರೋಧಿಗಳು, ಭ್ರಷ್ಟರ ಶಿಕ್ಷಿಸುವ ಕಾಯ್ದೆಗಳು ರದ್ದು: ಸಿಪಿಎಂ ಪ್ರಣಾಳಿಕೆಯಲ್ಲೇನಿದೆ?
ಲೋಕಸಭಾ ಚುನಾವಣೆ ಸಂಬಂಧ ಸಿಪಿಎಂ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರಜಾಪ್ರಭುತ್ವದ ಜಾತ್ಯತೀತ ಗುಣಗಳಿಗೆ ಧಕ್ಕೆ ಬಂದಿದೆ.
ನವದೆಹಲಿ (ಏ.06): ಲೋಕಸಭಾ ಚುನಾವಣೆ ಸಂಬಂಧ ಸಿಪಿಎಂ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿದೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪ್ರಜಾಪ್ರಭುತ್ವದ ಜಾತ್ಯತೀತ ಗುಣಗಳಿಗೆ ಧಕ್ಕೆ ಬಂದಿದೆ. ಹೀಗಾಗಿ ದೇಶವನ್ನು ಉಳಿಸುವ ಸಲುವಾಗಿ ಈ ಬಾರಿ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಅದು ಕರೆಕೊಟ್ಟಿದೆ. ಜೊತೆಗೆ ತಾನು ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಸಿಎಎ ಕಾಯ್ದೆ ರದ್ದುಗೊಳಿಸಲಾಗುವುದು. ಇದಲ್ಲದೇ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ರದ್ದುಪಡಿಸಲಾಗುವುದು ಎಂದು ಭರವಸೆ ನೀಡಿದೆ.
ಪ್ರಣಾಳಿಕೆಗಳ ಮುಖ್ಯಾಂಶಗಳು
- ಸಿಎಎ, ಯುಎಪಿಎ ಮತ್ತು ಪಿಎಂಎಲ್‌ಎ ಕಾಯ್ದೆಗಳನ್ನು ರದ್ದುಗೊಳಿಸಲಾಗುವುದು.
- ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ/ ಯುವಕರಿಗೆ ಉದ್ಯೋಗ ಭರವಸೆ
- ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ
- ಮಕ್ಕಳ ಕಲ್ಯಾಣಕ್ಕೆ ಒತ್ತು/ ಯುವಕರಿಗಾಗಿ ರಾಷ್ಟ್ರೀಯ ಯುವ ನೀತಿ ಜಾರಿ
- ಉಚಿತ ಆರೋಗ್ಯ ಕೊಡಿಸುವುದು/ ಮರಣದಂಡನೆಯ ಕಾಯ್ದೆ ರದ್ದು.
ನಾಮಪತ್ರದ ವೇಳೆ ಸಿಪಿಎಂ, ಮುಸ್ಲಿಂ ಲೀಗ್ ಧ್ವಜ ಏಕಿಲ್ಲ?: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ರೋಡ್ ಶೋ ಮಾಡಿ, ನಾಮಪತ್ರ ಸಲ್ಲಿಕೆ ಮಾಡಿದ್ದು, ತನ್ನ ಮಿತ್ರ ಪಕ್ಷಗಳಾದ ಸಿಪಿಎಂ, ಇಂಡಿಯನ್ ಯೂನಿಯನ್ ಮುಸ್ಲಿ ಲೀಗ್‌ನ (ಐಯುಎಂಎಲ್) ಬಾವುಟಗಳನ್ನು ಆ ವೇಳೆ ಏಕೆ ತೋರಿಸಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಡ್ ಶೋ ವೇಳೆ ಇಂಡಿಯಾ ಕೂಟದ ಮಿತ್ರ ಪಕ್ಷಗಳ ಬಾವುಟಗಳನ್ನು ತೋರಿಸಿಲ್ಲ.
ಶತ್ರುಗಳಿಗೂ ಗೊತ್ತಾಗಿದೆ ಇದು ನವಭಾರತ: ಪ್ರಧಾನಿ ಮೋದಿ ಗುಡುಗು
ಇದು ಬಿಜೆಪಿಗೆ ಹೆದರಿದಂತೆ ಕಾಣುತ್ತದೆ. ಕಾಂಗ್ರೆಸ್‌ಗೆ ಐಯುಎಂಎಲ್‌ನ ಮತಗಳಷ್ಟೇ ಬೇಕು. ಆದರೆ ಬಾವುಟ ಬೇಡ ಎಂದು ಆರೋಪಿಸಿದರು. 2019ರ ಚುನಾವಣೆಯಲ್ಲಿ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದು, ಈಗಿನ ಗೃಹಸಚಿವ ಅಮಿತ್ ಶಾ ಐಯುಎಂಎಲ್ ಬಾವುಟ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಿಂದಲೇ ನಾಮಪತ್ರ ಸಲ್ಲಿಕೆ ವೇಳೆ ಐಯುಎಂಎಲ್ ಬಾವುಟ ಹೆಚ್ಚು ಕಾಣಿಸಿಕೊಂಡಿಲ್ಲ ಎಂದು ಕಟುವಾಗಿ ನುಡಿದರು.