Asianet Suvarna News Asianet Suvarna News

Covid Vaccine ಕೋವಿಶೀಲ್ಡ್ 2ನೇ ಡೋಸ್ ಅವಧಿ ಇಳಿಕೆ, 8 ರಿಂದ 16ರ ವಾರದೊಳಗೆ ಲಸಿಕೆ!

- 12-16 ವಾರದ ಬದಲು 8-16 ವಾರದ ನಡುವೆ ನೀಡಿ
- ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು
- ಲಸಿಕೆ ಪಡೆಯದ 6 ರಿಂದ 7 ಕೋಟಿ ಜನರಿಗೆ ಲಸಿಕೆ

Covishield Dose Gap Reduced between 8 to 16 weeks after first dose Technical Advisory Group ckm
Author
Bengaluru, First Published Mar 21, 2022, 4:03 AM IST

ನವದೆಹಲಿ(ಮಾ.21): ಕೋವಿಶೀಲ್ಡ್‌ನ 2ನೇ ಡೋಸ್‌ ನೀಡುವ ಅವಧಿಯನ್ನು ಕಡಿಮೆ ಮಾಡಲು ಲಸಿಕಾಕರಣದ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಭಾನುವಾರ ಶಿಫಾರಸು ಮಾಡಿದೆ. ಕೋವಿಶೀಲ್ಡ್‌ನ ಮೊದಲನೇ ಡೋಸು ಪಡೆದ 8 ರಿಂದ 16 ನೇ ವಾರದೊಳಗಾಗಿ ಎರಡನೇ ಡೋಸನ್ನು ನೀಡಬಹುದು ಎಂದು ತಿಳಿಸಿದೆ.

ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್‌ನ ಮೊದಲನೇ ಡೋಸನ್ನು ಪಡೆದ 12-16 ವಾರಗಳ ನಂತರ 2ನೇ ಡೋಸನ್ನು ನೀಡಲಾಗುತ್ತದೆ. ಆದರೆ, 8ನೇ ವಾರದ ನಂತರ 2ನೇ ಡೋಸ್‌ ನೀಡಿದರೆ, 12 ವಾರದ ನಂತರ ನೀಡಿದಷ್ಟೇ ಪ್ರತಿಕಾಯ ಶಕ್ತಿ ಸೃಷ್ಟಿಆಗುವುದು ಕಂಡುಬಂದಿದೆ. ಹೀಗಾಗಿ ಪರಿಷ್ಕೃತ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಜಾಗತಿಕವಾಗಿ ಕೊರೋನಾ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಲಸಿಕೆ ಪಡೆಯದ 6 ರಿಂದ 7 ಕೋಟಿ ಜನರಿಗೆ ಶೀಘ್ರವಾಗಿ ಎರಡೂ ಡೋಸು ಲಸಿಕೆಯನ್ನು ನೀಡುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವು ತಿಳಿಸಿವೆ.

ಮಾರ್ಚ್ 16 ರಿಂದ 12-14 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ, 60+ ಆದವರಿಗೆ ಬೂಸ್ಟರ್!

ಕೋವ್ಯಾಕ್ಸಿನ್‌ ಬದಲಿಲ್ಲ:
ಆದರೆ ಭಾರತ ಬಯೋಟೆಕ್‌ನ ಕೋವ್ಯಾಕ್ಸಿನ್‌ ಡೋಸುಗಳ ನಡುವಿನ ಅಂತರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೋವ್ಯಾಕ್ಸಿನ್‌ ಮೊದಲನೇ ಡೋಸು ಪಡೆದ 28 ದಿನಗಳ ನಂತರ 2 ನೇ ಡೋಸನ್ನು ವಿತರಿಸಲಾಗುತ್ತದೆ.

ದೇಶದಲ್ಲಿ ನಿನ್ನೆ ಕೇವಲ 1761 ಕೇಸ್‌
ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಕೆಯಾಗಿದ್ದು, ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಕೇವಲ 1761 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದು ಸುಮಾರು ಎರಡು ವರ್ಷಗಳಲ್ಲೇ ದಾಖಲಾದ ಸಾರ್ವಕಾಲಿಕ ಕನಿಷ್ಠ ಪ್ರಕರಣಗಳ ಸಂಖ್ಯೆಯಾಗಿದೆ. ಮೊದಲ ಅಲೆ ಆರಂಭವಾದ 2019ರ ಮಾಚ್‌ರ್‍ ನಂತರ 2000ಕ್ಕಿಂತ ಹೆಚ್ಚು ಪ್ರಕರಣ ನಿತ್ಯ ವರದಿಯಾಗುತ್ತಿದ್ದವು. ಈಗ ಸೋಂಕು 2000ಕ್ಕಿಂತ ಕೆಳಗೆ ಇಳಿದಿದ್ದು ಗಮನಾರ್ಹ. ಇದೇ ವೇಳೆ 127 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕುಗಳ ಸಂಖ್ಯೆ 26,240ಕ್ಕೆ ಇಳಿಕೆಯಾಗಿದೆ.

ಸಾಮಾನ್ಯ ಔಷಧಿಗಳಂತೆ ಸಿಗಲಿದೆ ಲಸಿಕೆ, 1 ಡೋಸ್‌ಗೆ 275 ರು.?

ದೇಶದಲ್ಲಿ ಕೋವಿಡ್‌ ಚೇತರಿಕೆ ದರವು ಶೇ. 98.74ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಹಾಗೂ ವಾರದ ಪಾಸಿಟಿವಿಟಿ ದರವು ಶೇ. 0.41ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಈವರೆಗೆ 181.21 ಕೋಟಿ ಡೋಸು ಲಸಿಕೆಯನ್ನು ವಿತರಿಸಲಾಗಿದೆ.

ಚೀನಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿ: 1 ವರ್ಷದಲ್ಲೇ ಮೊದಲು
ಚೀನಾ ಹಾಗೂ ದಕ್ಷಿಣ ಕೊರಿಯಾದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಚೀನಾದಲ್ಲಿ 2021 ಜನವರಿ ನಂತರ ಮೊದಲ ಬಾರಿ ಇಬ್ಬರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ.‘ದೇಶದಲ್ಲಿ ಸುಮಾರು 1 ವರ್ಷಕ್ಕೂ ಅಧಿಕ ಕಾಲ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಶನಿವಾರ ಒಂದೇ ದಿನ 2 ಸಾವುಗಳು ವರದಿಯಾಗಿವೆ. ಎರಡೂ ಸಾವುಗಳು ಈಶಾನ್ಯ ಚೀನಾದ ಜಿಲಿನ್‌ ಪ್ರಾಂತ್ಯದಲ್ಲಿ ಸಂಭವಿಸಿವೆ. ಮೃತಪಟ್ಟಇಬ್ಬರೂ ವ್ಯಕ್ತಿಗಳು ವೃದ್ಧರಾಗಿದ್ದು, ಅವರಲ್ಲಿ ಒಬ್ಬರು ಕೋವಿಡ್‌ ಲಸಿಕೆ ತೆಗೆದುಕೊಂಡಿರಲಿಲ್ಲ’ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಒಟ್ಟು 4,638 ಜನರು ಕೋವಿಡ್‌ ಸೋಂಕಿಗೆ ಬಲಿಯಾದಂತಾಗಿದೆ.

ಯುರೋಪ್‌, ಅಮೆರಿಕದಲ್ಲಿ ಅಬ್ಬರ ಆರಂಭ:
ದಕ್ಷಿಣ ಕೊರಿಯಾದಲ್ಲಿ ನಿತ್ಯ 4ರಿಂದ 6 ಲಕ್ಷ ಪ್ರಕರಣ ದಾಖಲಾಗುತ್ತಿದ್ದು, ಇದಕ್ಕೆ ಬಹುಪಾಲು ಬಿಎ.2 ತಳಿಯ ಅಬ್ಬರ ಕಾರಣವಾಗಿದೆ. ಇನ್ನು ಡೆನ್ಮಾರ್ಕ್ನ ಒಟ್ಟು ಪ್ರಕರಣದಲ್ಲಿ ಬಿಎ.2 ಪಾಲು ಶೇ.82ರಷ್ಟುಹಾಗೂ ಜರ್ಮನಿಯ ಹೊಸ ಕೇಸಲ್ಲಿ ಶೇ.50 ಪಾಲು ಇದೆ. ಬ್ರಿಟನ್‌ನಲ್ಲಿ ಅಧಿಕೃತ ಬಿಎ.2 ಅಂಕಿ-ಅಂಶ ಲಭ್ಯವಿಲ್ಲ. ಆದರೆ 1 ವಾರದಲ್ಲಿ ಸೋಂಕು ಶೇ.47ರಷ್ಟುಏರಿದ್ದು, ಇದಕ್ಕೆ ಬಿಎ.2 ಕಾರಣ ಎಂದು ಹೇಳಲಾಗಿದೆ.

Follow Us:
Download App:
  • android
  • ios