Asianet Suvarna News Asianet Suvarna News

ಮಾರ್ಚ್ 16 ರಿಂದ 12-14 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ, 60+ ಆದವರಿಗೆ ಬೂಸ್ಟರ್!

* ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ

* ಮಕ್ಕಳಿಗೂ ಕೊರೋನಾ ಲಸಿಕೆ ಆರಂಭಿಸಲು ದಿನಾಂಕ ನಿಗಧಿ

* ಮಾರ್ಚ್ 16 ರಿಂದ 12-14 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ

Covid vaccination for 12-14 age group booster doses for 60 plus from Wednesday
Author
Bangalore, First Published Mar 14, 2022, 3:05 PM IST

ನವದೆಹಲಿ(ಮಾ.14): ಕೇಂದ್ರ ಸರ್ಕಾರ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ನಿರ್ಧರಿಸಿದೆ. ಮಾರ್ಚ್ 16ರಿಂದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ. ಇದರೊಂದಿಗೆ, 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರು ಈಗ ಕೊರೋನಾ ಬೂಸ್ಟರ್ ಡೋಸ್ ಪಡೆಯಲು ಸಾಧ್ಯವಾಗುತ್ತದೆ. ಸೋಮವಾರ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಮಕ್ಕಳ ಪೋಷಕರು ಮತ್ತು 60 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಜನವರಿ 3, 2022 ರಿಂದ ಸರ್ಕಾರವು 15 ರಿಂದ 17 ವರ್ಷ ವಯಸ್ಸಿನ ಹದಿಹರೆಯದವರಿಗೆ ಲಸಿಕೆ ಹಾಕಲು ಪ್ರಾರಂಭಿಸಿದೆ ಎಂಬುವುದು ಉಲ್ಲೇಖನೀಯ. ದೇಶದಲ್ಲಿ ಈ ವಯೋಮಾನದ ಸುಮಾರು 7.5 ಕೋಟಿ ಮಕ್ಕಳಿದ್ದಾರೆ. ಭಾರತದಲ್ಲಿ 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಈಗಾಗಲೇ ಅನುಮೋದನೆ ಪಡೆದಿದೆ. ಈ ವಯೋಮಾನದವರಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಸಹ ಅನುಮೋದನೆಯನ್ನು ಪಡೆದುಕೊಂಡಿದೆ.

ಲಸಿಕೆ ಸಂಖ್ಯೆ 180 ಕೋಟಿ ದಾಟಿದೆ

ಭಾರತದಲ್ಲಿ ಕೊರೋನಾ ಲಸಿಕೆಗಳ ಸಂಖ್ಯೆ 180.19 ಕೋಟಿ ದಾಟಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 2,503 ಹೊಸ ಪ್ರಕರಣಗಳು ವರದಿಯಾಗಿವೆ, ಕಳೆದ 680 ದಿನಗಳಲ್ಲಿ ಇದು ಭಾರತದ ಅತ್ಯಂತ ಕನಿಷ್ಟ ಪ್ರಕರಣಗಳಾಗಿವೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 36,168 ಆಗಿದೆ, ಇದು 675 ದಿನಗಳ ಕನಿಷ್ಠವಾಗಿದೆ. ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 0.08% ರಷ್ಟಿವೆ.

ದೇಶದಲ್ಲಿ ಚೇತರಿಕೆ ದರ ಮತ್ತು ಪರೀಕ್ಷೆ

ಭಾರತದ ಚೇತರಿಕೆ ದರ 98.72%. ಕಳೆದ 24 ಗಂಟೆಗಳಲ್ಲಿ 4,377 ರೋಗಿಗಳು ಗುಣಮುಖರಾಗಿದ್ದಾರೆ ಮತ್ತು ಒಟ್ಟು ಗುಣಮುಖರಾದ ರೋಗಿಗಳ ಸಂಖ್ಯೆ (ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ) ಈಗ 4,24,41,449 ಆಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 5,32,232 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತ ಇದುವರೆಗೆ ಒಟ್ಟು 77.90 ಕೋಟಿ (77,90,52,383) ಪರೀಕ್ಷೆಗಳನ್ನು ನಡೆಸಿದೆ. ಸಾಪ್ತಾಹಿಕ ಮತ್ತು ದೈನಂದಿನ ಧನಾತ್ಮಕ ದರಗಳಲ್ಲಿ ಸ್ಥಿರವಾದ ಇಳಿಕೆ ಕಂಡುಬಂದಿದೆ. ದೇಶದಲ್ಲಿ ಸಾಪ್ತಾಹಿಕ ಸಕಾರಾತ್ಮಕತೆಯ ದರವು ಪ್ರಸ್ತುತ 0.47% ಮತ್ತು ದೈನಂದಿನ ಧನಾತ್ಮಕತೆಯ ದರವು 0.47% ಎಂದು ವರದಿಯಾಗಿದೆ.

Follow Us:
Download App:
  • android
  • ios