ಮುಂಬೈ(ಡಿ. 21)  ಡಿಸೆಂಬರ್ 22 ರಿಂದ ಜನವರಿ 5 ರವರೆಗೆ ರಾಜ್ಯ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಮಹಾರಾಷ್ಟ್ರ ಸರ್ಕಾರ ರಾತ್ರಿ ಕರ್ಫ್ಯೂ  ಜಾರಿ ಮಾಡಿದೆ.

ಇಂಗ್ಲೆಂಡಿನಲ್ಲಿ ಕೊರೋನಾ ಆತಂಕ ಮತ್ತೆ ಹೆಚ್ಚಾಗಿರುವ ಪರಿಣಾಮ ಯುರೋಪ್ ಮತ್ತು ಪಶ್ಚಿಮ ಏಷ್ಯಾದಿಂದ ರಾಜ್ಯಕ್ಕೆ ಬಂದಿಳಿಯುವರನ್ನು 14 ದಿನಗಳ ಕ್ವಾರಂಟೈನ್ ಮಾಡಲು ಸರ್ಕಾರ ತಿಳಿಸಿದೆ.

ಆದರೆ ಕಳೆದ ಸೋಮವಾರವೇ  ಭಾರತ ಸರ್ಕಾರವು ಯುನೈಟೆಡ್ ಕಿಂಗ್‌ಡಮ್ ಕಡೆ   ಡಿಸೆಂಬರ್ 23 ರಿಂದ 31 ರವರೆಗಿನ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕೋವಾಕ್ಸಿನ್ ತಯಾರಿಕೆ ಎಲ್ಲಿಗೆ ಬಂತು?

ಯುಕೆ ಯಿಂದ ಇಳಿಯುವವರಿಗೆ, ಸಂಬಂಧಪಟ್ಟ ವಿಮಾನ ನಿಲ್ದಾಣಗಳಿಗೆ ಆಗಮಿಸಿದಾಗ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಮಹಾರಾಷ್ಟ್ರವು ಭಾರತದಲ್ಲಿ ಅತಿ ಹೆಚ್ಚು ಕೊರೋನಾ ಪೀಡಿತ ರಾಜ್ಯವಾಗಿದ್ದು, ಸುಮಾರು 19 ಲಕ್ಷ COVID-19 ಪ್ರಕರಣಗಳಿವೆ.  ಮತ್ತು 48,000 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಆದಾಗ್ಯೂ, ಕಳೆದ ಎರಡು ವಾರಗಳಲ್ಲಿ ಸೋಂಕು ಇಳಿಕೆ ಹಾದಿಯಲ್ಲಿ ಸಾಗಿದೆ. ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿ ಆದೇಶ ನೀಡಿತ್ತು.