Asianet Suvarna News Asianet Suvarna News

ಸೆಪ್ಟೆಂಬರ್‌- ಅಕ್ಟೋ​ಬ​ರಲ್ಲಿ 3ನೇ ಅಲೆ ತುತ್ತ​ತು​ದಿ​ಗೆ: ಐಐಟಿ ಕಾನ್ಪುರ ಅಧ್ಯ​ಯನ!

* ಕೊರೋನಾ ಮೂರನೇ ಅಲೆಯ ಬಗ್ಗೆ ಆತಂಕ

* ಸೆಪ್ಟೆಂಬರ್‌- ಅಕ್ಟೋ​ಬ​ರಲ್ಲಿ 3ನೇ ಅಲೆ ತುತ್ತ​ತು​ದಿ​ಗೆ

* ಸಂಖ್ಯಾ​ಶಾ​ಸ್ತ್ರೀಯ ಮಾದರಿ ಆಧ​ರಿಸಿ ಐಐಟಿ ಕಾನ್ಪುರ ಅಧ್ಯ​ಯನ

Covid third wave peak expected around Sept Oct finds IIT Kanpur study pod
Author
Bangalore, First Published Jun 22, 2021, 7:51 AM IST

ನವ​ದೆ​ಹ​ಲಿ(ಜೂ.22): ಕೊರೋನಾ ಮೂರನೇ ಅಲೆಯ ಬಗ್ಗೆ ಆತಂಕ ಎದು​ರಾ​ಗಿ​ರು​ವಾ​ಗಲೇ, ಸೆಪ್ಟೆಂಬರ್‌- ಅಕ್ಟೋ​ಬ​ರ್‌​ನಲ್ಲಿ 3ನೇ ಅಲೆ ತುತ್ತ​ತು​ದಿ​ಯನ್ನು ತಲು​ಪ​ಲಿದೆ ಎಂದು ಐಐಟಿ ಕಾನ್ಪುರ ನಡೆ​ಸಿದ ಅಧ್ಯ​ಯ​ನ​ ವರದಿಯೊಂದು ತಿಳಿ​ಸಿದೆ.

ಸಂಖ್ಯಾ​ಶಾ​ಸ್ತ್ರೀಯ ಮಾದ​ರಿ​ಯನ್ನು ಆಧ​ರಿಸಿ ಐಐಟಿ ಪ್ರಾಧ್ಯಾ​ಪ​ಕ​ರಾದ ರಾಜೇಶ್‌ ರಂಜನ್‌ ಮತ್ತು ಮಹೇಂದ್ರ ವರ್ಮಾ ಅವ​ರ ನೇತೃ​ತ್ವದ ತಂಡ ವರ​ದಿ​ ಸಿದ್ಧ​ಪ​ಡಿ​ಸಿ​ದೆ. ಅದ​ರಂತೆ ಮೂರನೇ ಅಲೆ ಅಕ್ಟೋ​ಬ​ರ್‌​ನಲ್ಲಿ ತುತ್ತ​ತು​ದಿ​ಯನ್ನು ತಲು​ಪುವ ನಿರೀಕ್ಷೆ ಇದೆ. ಆದರೆ, ಮುನ್ನೆ​ಚ್ಚ​ರಿಕಾ ಕ್ರಮ​ಗ​ಳನ್ನು ಪಾಲಿ​ಸಿ​ದರೆ 2ನೇ ಅಲೆ​ಗಿಂತಲೂ ಕಡಿಮೆ ಗರಿಷ್ಠ ಮಟ್ಟ​ವನ್ನು ದಾಖ​ಲಿ​ಸ​ಬ​ಹುದು ಎಂದು ಅಂದಾ​ಜಿ​ಸ​ಲಾ​ಗಿದೆ.

ಲಸಿಕೆಯವನ್ನು ಪರಿ​ಗ​ಣಿ​ಸಿ​ಲ್ಲ: ಆದರೆ, ಈ ಅಧ್ಯ​ಯ​ನಕ್ಕೆ ಲಸಿ​ಕೆಯ ಪ್ರಭಾ​ವನ್ನು ಪರಿ​ಗ​ಣಿ​ಸ​ಲಾ​ಗಿಲ್ಲ. ಒಂದು ವೇಳೆ ಲಸಿ​ಕೆ​ಯ ಪ್ರಭಾ​ವ​ವನ್ನು ಪರಿ​ಗ​ಣಿ​ಸಿ​ದರೆ ಮೂರನೇ ಅಲೆಯ ತುತ್ತ​ತುದಿ 2ನೇ ಅಲೆ​ಗಿಂತಲೂ ಗಣ​ನೀಯ ಪ್ರಮಾ​ಣ​ದಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ ಎಂಬು​ದಾ​ಗಿಯೂ ವರ​ದಿ​ಯಲ್ಲಿ ತಿಳಿ​ಸ​ಲಾ​ಗಿದೆ.

ಅಧ್ಯ​ಯ​ನ ವರ​ದಿ​ಯಲ್ಲಿ ಏನಿ​ದೆ?

ಜೂ.15ರವೇಳೆಗೆ ಭಾರ​ತ ಸಂಪೂ​ರ್ಣ​ವಾಗಿ ಅನ್‌​ಲಾಕ್‌ ಆಗ​ಲಿದ್ದು, ಜನ​ಜೀ​ವನ ಸಹ​ಜ​ಸ್ಥಿ​ತಿಗೆ ಮರ​ಳಿ​ದೆ ಎಂಬ ಸನ್ನಿವೇಶದಲ್ಲಿ 2ನೇ ಅಲೆ ಮುಕ್ತಾ​ಯದ ಬಳಿಕ ಮೂರು ರೀತಿಯ ಸನ್ನಿ​ವೇ​ಶ​ವನ್ನು ಅಧ್ಯ​ಯನ ಗುರು​ತಿ​ಸಿದೆ.

ಸಾಧ್ಯ​ತೆ-1 (ಸಾ​ಮಾನ್ಯ ಸ್ಥಿತಿಗೆ ಮರ​ಳು​ವಿ​ಕೆ​): ಅಕ್ಟೋಬರ್‌ ವೇಳೆಗೆ 3ನೇ ಅಲೆ ತುತ್ತತುದಿಗೆ. ಆದರೆ 2ನೇ ಅಲೆಗಿಂತ ಕಡಿಮೆ ಹಾನಿ.

ಸಾಧ್ಯ​ತೆ-2 (ವೈರಸ್‌ ರೂಪಾಂತರ​): ಸೆಪ್ಟೆಂಬರ್‌ ವೇಳೆಗೆ 3ನೇ ಅಲೆ. 3ನೇ ಅಲೆ ತುತ್ತತುದಿಯ ಪರಿಣಾಮವು ಹೆಚ್ಚು.

ಸಾಧ್ಯತೆ-3 (​ಕಠಿಣ ನಿಯಂತ್ರಣ): ಕಠಿಣ ಕೋವಿಡ್‌ ಮಾರ್ಗಸೂಚಿ ಪಾಲಿಸಿದರೆ, ಅಕ್ಟೋಬರ್‌ವರೆಗೂ 3ನೇ ಅಲೆ ಮುಂದೂಡಬಹುದು. 3ನೇ ಅಲೆಯ ಪರಿಣಾಮ 2ನೇ ಅಲೆಗಿಂತ ಕಡಿಮೆ

Follow Us:
Download App:
  • android
  • ios