Covid-19: ಕೋವಿಡ್‌ ಮಧ್ಯೆ ಬಿಜೆಪಿ ನಾಯಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇರಿದ್ರೂ ಸಾವಿರಕ್ಕೂ ಹೆಚ್ಚು ಜನ

* ಕೋವಿಡ್‌ ಮಧ್ಯೆಯೂ ಮದುವೆಗೆ ಸೇರಿದ್ರು ಸಾವಿರ ಜನ
* ಗುಜರಾತ್‌ನಲ್ಲಿ ಮದುವೆ ಡಿಜೆ ಆಯೋಜನೆ
* ಬಿಜೆಪಿ ನಾಯಕರೊಬ್ಬರು ಏರ್ಪಡಿಸಿದ ಕಾರ್ಯಕ್ರಮ

covid rules brake thousands dance to DJ at wedding hosted by BJP leader in Gujarat akb

ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರು ಜನ ಮಾತ್ರ ಪಾಠ ಕಲಿಯುತ್ತಿಲ್ಲ. ಗುಜರಾತ್‌ನಲ್ಲಿ ಬಿಜೆಪಿ ನಾಯಕರೊಬ್ಬರು ಏರ್ಪಡಿಸಿದ ಮದುವೆಯೊಂದರ ಡಿಜೆ ಪಾರ್ಟಿಗೆ ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ಕೋವಿಡ್‌ ನಿಯಮಗಳನ್ನು ಮೀರಿ ಜನ ಸೇರಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರ ರಾಜಕೀಯ ನಾಯಕರು ಕೋವಿಡ್ ರೂಲ್ಸ್ ಬ್ರೇಕ್‌ ಮಾಡುವುದಲ್ಲ. ಈಗ ಗುಜರಾತ್‌ನಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿದೆ.

ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ (Tapi district)  ಈ ಘಟನೆ ನಡೆದಿದೆ. ಸ್ಥಳೀಯ ಬಿಜೆಪಿ ನಾಯಕರೊಬ್ಬರು ಮದುವೆಯೊಂದರ ಡಿಜೆಯನ್ನು ಆಯೋಜಿಸಿದ್ದು, ಇದರಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರಿದ್ದಾರೆ. ಗುಜರಾತ್‌ ಸರ್ಕಾರ ಕೂಡ ಕೋವಿಡ್‌ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ತರುವ ಸಲುವಾಗಿ ದೊಡ್ಡ ದೊಡ್ಡ ಸಮಾರಂಭಗಳನ್ನು ನಡೆಸುವುದಕ್ಕೆ ನಿರ್ಬಂಧ ಹೇರಿದೆ. ಈ ನಡುವೆ ಬಿಜೆಪಿ ನಾಯಕರೇ ಹೀಗೆ ಮದುವೆಯ ಹೆಸರಲ್ಲಿ ಡಿಜೆ ಆಯೋಜಿಸಿ ಕೋವಿಡ್‌ ತೀವ್ರ ಸ್ವರೂಪದಲ್ಲಿ ಹರಡುವುದಕ್ಕೆ ಕಾರಣರಾಗಿದ್ದಾರೆ. 

Covid Vaccine: ಬಲವಂತವಾಗಿ ಲಸಿಕೆ ನೀಡುವಂತಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಗುಜರಾತ್‌ ಸರ್ಕಾರ ಹೇರಿರುವ ಕೋವಿಡ್ ನಿಯಮಾವಳಿ ಪ್ರಕಾರ ಮದುವೆ ಸಮಾರಂಭಗಳಲ್ಲಿ 150ಕ್ಕೂ ಹೆಚ್ಚಿನ ಜನ ಸೇರುವ ಹಾಗಿಲ್ಲ. ಅದಾಗ್ಯೂ ಈ ನಿಯಮಗಳನ್ನು ಡೊಲ್ವಾನ್ ಬ್ಲಾಕ್‌ನ ಜನ ತುಂಬಾ ಕೇವಲವಾಗಿ ತೆಗೆದುಕೊಂಡಿದ್ದು,  ಇಲ್ಲಿನ ಸ್ಥಳೀಯ ಬಿಜೆಪಿ (BJP) ನಾಯಕ ಹಾಗೂ ಡೊಲ್ವಾನ್‌  (Dolvan) ತೆಹ್ಸಿಲ್‌ನಲ್ಲಿ ಉಪಾಧ್ಯಕ್ಷರು ಆಗಿರುವ ಸುನಂದಾ (Sunanda) ಅವರು ಆಯೋಜಿಸಿದ್ದ  ಕುಟುಂಬದ ಮದುವೆ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. 

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ಘಟನೆಯ ಬಗ್ಗೆ ಗುಜರಾತ್‌ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಪ್ರಸ್ತುತ ಗುಜರಾತ್‌ನಲ್ಲಿ ಮೂರನೇ ಅಲೆ ವ್ಯಾಪಕವಾಗಿ ಹಬ್ಬಿದ್ದು, ಸೋಮವಾರ ಗುಜರಾತ್‌ (Gujarat) ರಾಜ್ಯದಲ್ಲಿ  12,753 ಹೊಸ ಕೋವಿಡ್‌ (Covid-19) ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೇ ಒಟ್ಟು ಐದು ಜನ ಕೋವಿಡ್‌ನಿಂದಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ ಪ್ರಸ್ತುತ ಗುಜರಾತ್‌ 70,000 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.

Latest Videos
Follow Us:
Download App:
  • android
  • ios