Asianet Suvarna News Asianet Suvarna News

Covid Crisis: ಭಾರತದಲ್ಲೀಗ ಒಮಿಕ್ರೋನ್‌ ನಂ.1 ಪಟ್ಟಕ್ಕೆ!

* 407 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

* ಭಾರತದಲ್ಲೀಗ ಒಮಿಕ್ರೋನ್‌ ನಂ.1 ಪಟ್ಟಕ್ಕೆ

Covid positivity rate still above 10pc in 407 districts Centre extends curbs till Feb 28 pod
Author
Bangalore, First Published Jan 28, 2022, 7:22 AM IST

ನವದೆಹಲಿ(ಜ.28): ವಿಶ್ವದಾದ್ಯಂತ ಅನಾಹುತ ಸೃಷ್ಟಿಸಿರುವ ಒಮಿಕ್ರೋನ್‌ ರೂಪಾಂತರಿ ವೈರಸ್‌ ಇದೀಗ ಭಾರತದಲ್ಲೂ ಅತಿ ಹೆಚ್ಚು ಹಬ್ಬಿರುವ ವೈರಸ್‌ ಆಗಿ ಹೊರಹೊಮ್ಮಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದೇ ವೇಳೆ ದೇಶದ ಹಲವು ರಾಜ್ಯಗಳಲ್ಲಿ ಕೇಸುಗಳ ಬೆಳವಣಿಗೆ ಪ್ರಮಾಣ ಸ್ಥಗಿತಗೊಂಡಿದೆ. ಆದರೆ ಈ ಬೆಳವಣಿಗೆಯನ್ನು ನಾವು ಇನ್ನಷ್ಟುದಿನ ಗಮನಿಸಬೇಕು. ಈ ಹಂತದಲ್ಲಿ ನಾವು ಮೈಮರೆಯುವಂತಿಲ್ಲ ಎಂದು ಎಚ್ಚರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ಕಳೆದ ಡಿಸೆಂಬರ್‌ನಲ್ಲಿ ನಡೆಸಿ ಜಿನೋಮ್‌ ಸೀಕ್ವೆನ್ಸಿಂಗ್‌ ವೇಳೆ 1292 ಒಮಿಕ್ರೋನ್‌ ಕೇಸು ಪತ್ತೆಯಾಗಿದ್ದರೆ, ಜನವರಿಯಲ್ಲಿ ಅದು 9672ಕ್ಕೆ ಏರಿದೆ. ಇದು ಒಮಿಕ್ರೋನ್‌ ಅತಿ ಹೆಚ್ಚು ಚಲಾವಣೆಯಲ್ಲಿರುವುದರ ಸೂಚಕ ಎಂದಿದ್ದಾರೆ.

ಇದೇ ವೇಳೆ ಒಟ್ಟಾರೆ ಕೋವಿಡ್‌ ಕೇಸ್‌ಗಳ ಪೈಕಿ ಶೇ.77ರಷ್ಟುಪ್ರಕರಣಗಳು 10 ರಾಜ್ಯಗಳಲ್ಲೇ ದಾಖಲಾಗುತ್ತಿವೆ. 407 ಜಿಲ್ಲೆಗಳಲ್ಲಿ ಈಗಲೂ ಪಾಸಿಟಿವಿಟಿ ಶೇ.10ಕ್ಕಿಂತ ಹೆಚ್ಚಿದೆ. ಹೀಗಾಗಿ ಕೋವಿಡ್‌ ನಿಯಂತ್ರಣಾ ಕ್ರಮಗಳನ್ನು ಸಡಿಲಿಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆದು ಎಚ್ಚರಿಸಿದೆ.

ಕೇಸು ಹೆಚ್ಚುತ್ತಿರುವ ರಾಜ್ಯಗಳು: ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್‌, ಆಂಧ್ರ, ರಾಜಸ್ಥಾನ,

ಸೋಂಕು ಇಳಿಕೆ ರಾಜ್ಯಗಳು: ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಒಡಿಶಾ, ಹರಾರ‍ಯಣ, ಪಶ್ಚಿಮ ಬಂಗಾಳ

Follow Us:
Download App:
  • android
  • ios