ನವದೆಹಲಿ(ಮೇ.25): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕಳೆದ ಅಕ್ಟೋಬರ್‌ ವೇಳೆ ಕೊರೋನಾ ಸೋಂಕು ತಗುಲಿದ್ದ ವೇಳೆ ಅವರ ಚಿಕಿತ್ಸೆಗೆ ಬಳಸಲಾಗಿದ್ದ ಆ್ಯಂಡಿಬಾಡಿ ಕಾಕ್‌ಟೇಲ್‌ (ಕ್ಯಾಸಿರಿವಿಮ್ಯಾಬ್‌ ಮತ್ತು ಇಮ್‌ಡೆವಿಮ್ಯಾಬ್‌) ಇಂಜೆಕ್ಷನ್‌ ಅನ್ನು ಇದೀಗ ಭಾರತದಲ್ಲೂ ಬಿಡುಗಡೆ ಮಾಡಲಾಗಿದೆ. ಸಿಪ್ಲಾ ಕಂಪನಿ, ಔಷಧವನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಅದಕ್ಕೆ 59750 ರು. ದರ ನಿಗದಿ ಮಾಡಲಾಗಿದೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ಮೊದಲ ಬ್ಯಾಚ್‌ನಲ್ಲಿ ನಾವು 1 ಲಕ್ಷ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದ್ದೇವೆ. ಇದು 2 ಲಕ್ಷ ಸೋಂಕಿತರಿಗೆ ಚಿಕಿತ್ಸೆಗೆ ನೆರವಾಗುತ್ತದೆ. ಒಂದು ಪ್ಯಾಕ್‌ನಲ್ಲಿ ಇಬ್ಬರಿಗೆ ಆಗುವ ಔಷಧ ಇರುತ್ತದೆ. ಅದಕ್ಕೆ ಎಲ್ಲಾ ತೆರಿಗೆಗಳು ಸೇರಿ 1,19,500 ರು. ದರ ಇರಲಿದೆ ಎಂದು ಇಂಜೆಕ್ಷನ್‌ ಅಭಿವೃದ್ಧಿಪಡಿಸಿರುವ ಅಮೆರಿಕ ಮೂಲದ ರೋಚೀಸ್‌ ಕಂಪನಿ ತಿಳಿಸಿದೆ.

ಪ್ರತಿ ಪ್ಯಾಕ್‌ 1200 ಎಂಜಿಯದ್ದಾಗಿರಲಿದೆ. ಇದರಲ್ಲಿ 600 ಎಂಜಿ ಕ್ಯಾಸಿರಿವಿಮ್ಯಾಬ್‌ ಮತ್ತು 600 ಎಂಜಿಯಷ್ಟುಇಮ್‌ಡೆವಿಮ್ಯಾಬ್‌ ಅಂಶಗಳು ಇರುತ್ತದೆ. ಇದನ್ನು 2ರಿಂದ 8 ಡಿ.ಸೆ. ಉಷ್ಣಾಂಶದಲ್ಲಿ ಇಡಬೇಕಾಗುತ್ತದೆ. ಒಂದು ಪ್ಯಾಕ್‌ ತೆರೆದ ಬಳಿಕ ಅದನ್ನು 48 ಗಂಟೆಯಲ್ಲಿ ಕಾಲಿ ಮಾಡಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಯಾರಿಗೆ ಲಾಭ?:

ಸೋಂಕಿನ ಅತ್ಯಂತ ಅಪಾಯ ಇರುವ ವ್ಯಕ್ತಿಗಳಿಗೆ, ಪರಿಸ್ಥಿತಿ ಗಂಭೀರವಾಗುವ ಮೊದಲೇ ನೀಡಿದರೆ, ಅವರು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವನ್ನಪ್ಪುವ ಪ್ರಮಾಣ ಶೇ.70ರಷ್ಟುಇಳಿಯುತ್ತದೆ. ಅವರ ಚೇತರಿಸಿಕೊಳ್ಳಲು ಬೇಕಾಗುವ ಸಮಯ 4 ದಿನಗಳಷ್ಟುಕಡಿಮೆಯಾಗುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ಇದನ್ನು ನೀಡಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona