Asianet Suvarna News Asianet Suvarna News

PM Narendra Modi: ಅಭಿವೃದ್ಧಿ ವೇಗಕ್ಕೆ ತಡೆ ಹೇರಲು ಕೊರೋನಾಕ್ಕೆ ಬಿಡಲ್ಲ

ಕೊರೋನಾ ವೈರಸ್‌ ಹಲವು ಸವಾಲುಗಳನ್ನು ನಮಗೆ ತಂದೊಡ್ಡಿದೆ. ಆದರೆ ಭಾರತದ ಅಭಿವೃದ್ಧಿ ವೇಗವನ್ನು ಅದು ನಿಲ್ಲಿಸಲಾಗದು. ದೇಶದ ಆರ್ಥಿಕ ಚಟುವಟಿಕೆಗಳು ಕೊರೋನಾ ಪೂರ್ವಸ್ಥಿತಿಗಿಂತ ಈಗ ಉತ್ತಮವಾಗಿದೆ. 

Covid cannot impede India development this year PM Narendra Modi gvd
Author
Bangalore, First Published Jan 2, 2022, 11:09 AM IST
  • Facebook
  • Twitter
  • Whatsapp

ನವದೆಹಲಿ (ಜ.2): ಕೊರೋನಾ ವೈರಸ್‌ (Corona Virus) ಹಲವು ಸವಾಲುಗಳನ್ನು ನಮಗೆ ತಂದೊಡ್ಡಿದೆ. ಆದರೆ ಭಾರತದ ಅಭಿವೃದ್ಧಿ ವೇಗವನ್ನು ಅದು ನಿಲ್ಲಿಸಲಾಗದು. ದೇಶದ ಆರ್ಥಿಕ ಚಟುವಟಿಕೆಗಳು ಕೊರೋನಾ ಪೂರ್ವಸ್ಥಿತಿಗಿಂತ ಈಗ ಉತ್ತಮವಾಗಿದೆ. ನಮ್ಮ ಆರ್ಥಿಕತೆಯ ಬೆಳವಣಿಗೆ ದರ ಶೇ.8ಕ್ಕಿಂತ ಹೆಚ್ಚಿದೆ. ವಿದೇಶಿ ಹೂಡಿಕೆ ದಾಖಲೆ ಪ್ರಮಾಣದಲ್ಲಿ ಹರಿದುಬಂದಿದೆ. ಅಲ್ಲದೆ ಹಿಂದೆಂದಿಗಿಂತಲೂ ಈಗ ಜಿಎಸ್‌ಟಿ (GST) ಸಂಗ್ರಹ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) ಹೇಳಿದ್ದಾರೆ.

ಪ್ರಧಾನಮಂತ್ರಿ-ಕಿಸಾನ್‌ ಯೋಜನೆಯಡಿ (Pradhan Mantri Kisan Yojana) ದೇಶದ 10.09 ಕೋಟಿ ಫಲಾನುಭವಿ ರೈತರಿಗೆ ಶನಿವಾರ 20,900 ಕೋಟಿ ರು. ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ‘ಭಯಾನಕ ಮತ್ತು ವ್ಯಾಪಕವಾಗಿ ಹರಡುವ ಒಮಿಕ್ರೋನ್‌ (Omicron) ಪರಿಣಾಮ ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಭಾರೀ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಭಾರತವು ಪೂರ್ಣ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಕೊರೋನಾ ವಿರುದ್ಧ ಹೋರಾಡಲಿದೆ. ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ. 2021ರ ಸಾಲಿನಲ್ಲಿ ಆರೋಗ್ಯ, ಭದ್ರತೆ ಮತ್ತು ಕೃಷಿ ಸೇರಿದಂತೆ ಹಲವು ವಲಯಗಳಲ್ಲಿ ದೇಶ ಸಾಧಿಸಿರುವ ಸಾಧನಗಳನ್ನು ವಿವರಿಸಿದರು.

ಮೋದಿ ಮೈತ್ರಿ ನಿರಾಕರಿಸಿದ್ದೆ: ಪವಾರ್ ಹೇಳಿಕೆಯಿಂದ ಭಾರೀ ಸಂಚಲನ!

ಒಮಿಕ್ರಾನ್ ಆತಂಕದ ಕಾರಣ ಮುಂದೂಡಿಕೆ?:  2022ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) ಅವರು ಅರಬ್‌ ಸಂಯುಕ್ತ ಸಂಸ್ಥಾನ ದೇಶಕ್ಕೆ (UAE) ಕೈಗೊಳ್ಳಬೇಕಿದ್ದ ವರ್ಷದ ಮೊದಲ ಪ್ರವಾಸ ಒಮಿಕ್ರಾನ್  (Omicron) ಭೀತಿಯಿಂದಾಗಿ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಭಾರತ (India) ಮತ್ತು ಯುಎಇ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯವು 50ನೇ ವರ್ಷದ ಸಂಭ್ರಮಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಪ್ರವಾಸವು ಬಹುಮುಖ್ಯವಾಗಿತ್ತು. ಯುಎಇ  ಭೇಟಿ ವೇಳೆ ಅವರು ದುಬೈ ಎಕ್ಸ್‌ಪೋಗೂ (Dubai Expo) ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿತ್ತು.

ಯುಎಇಯಲ್ಲಿ ದಿನನಿತ್ಯದ ಪ್ರಕರಣಗಳಲ್ಲಿ ಸಾಕಷ್ಟು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 6 ರಿಂದ ನಡೆಯಬೇಕಿದ್ದ ಮೋದಿ ಪ್ರವಾಸವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ತೆ ವರದಿ ಮಾಡಿದೆ. ಭಾರತ ಹಾಗೂ ಯುಎಇ ನಡುವೆ ಆರ್ಥಿಕ ಬಾಂಧವ್ಯ ಉತ್ತೇಜನಕ್ಕಾಗಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) (CEPA) ಕುರಿತಾಗಿ ಸಾಕಷ್ಟು ಮಾತುಕತೆಗಳು ನಡೆಯುತ್ತಿದ್ದು ಪ್ರಧಾನಿ ಭೇಟಿಯ ವೇಳೆ ಈ ಒಪ್ಪಂದವನ್ನು ಪ್ರಕಟಿಸಬಹುದು ಎಂದು ಸುದ್ದಿಯಾಗಿತ್ತು. ಗಲ್ಫ್ ರಾಷ್ಟ್ರಗಳ ಪೈಕಿ ಭಾರತದ ಮೊದಲ ಸಿಇಪಿಎ ( Comprehensive Economic Partnership Agreement) ಇದಾಗಿರಲಿದೆ.

Narendra Modi New Car: ಮರ್ಸಿಡೀಸ್ ಮೇಬ್ಯಾಕ್ ಎಸ್ 650ಗೆ 12 ಕೋಟಿ ಅಲ್ಲ, ಕೇವಲ 3 ಕೋಟಿ!

ಭಾರತ, ಇಸ್ರೇಲ್, ಅಮೆರಿಕ ಮತ್ತು ಯುಎಇ ದೇಶಗಳನ್ನು ಒಳಗೊಂಡ ವಿದೇಶಾಂಗ ಮಂತ್ರಿಗಳು, ಆರ್ಥಿಕ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ ಹೊಸ ಕ್ವಾಡ್ ದುಬೈ ಎಕ್ಸ್ ಪೋ 2020 ನಡುವೆ ಮಾತುಕತೆ ನಡೆಸುವುದು ನಿಗದಿಯಾಗಿತ್ತು. ದುಬೈ ಎಕ್ಸ್ ಪೋದಲ್ಲಿ ಇಂಡಿಯನ್ ಪೆವಿಲಿಯನ್ ಸಾಕಷ್ಟು ಸದ್ದು ಮಾಡುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವರೆಗೆ ಇದು ಮುಂದುವರಿಯಲಿದೆ. ಇನ್ನೊಂದೆಡೆ ಯುರೋಪ್ (Europe )ಹಾಗೂ ಅಮೆರಿಕದಲ್ಲಿ(United States) ಕೋವಿಡ್-19 ರೂಪಾಂತರ ತ್ವರಿತವಾಗಿ ಹರಡುತ್ತಿದ್ದು ಇಡೀ ಜಗತ್ತಿಗೆ ಈ ಆತಂಕ ಸೃಷ್ಟಿಯಾಗಿದೆ. ಇನ್ನೊಂದೆಡೆ ಯುಎಇಯಲ್ಲಿ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣ ಸಚಿವಾಲಯ ಬುಧವಾರ ನೀಡಿದ ಪ್ರಕಟಣೆಯಲ್ಲಿ ದೇಶದಲ್ಲಿ 2234 ಕೋವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. 775 ಪ್ರಕರಣಗಳು ಚೇತರಿಕೆ ಕಂಡಿದೆ.  ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 9195 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 781 ಒಮಿಕ್ರಾನ್ ರೂಪಾಂತರದ ಪ್ರಕರಣಗಳಾಗಿವೆ.

Follow Us:
Download App:
  • android
  • ios