Asianet Suvarna News Asianet Suvarna News

Covid 19: ಪಶ್ಚಿಮ ಬಂಗಾಳದಲ್ಲಿ ಕಠಿಣ ಕೋವಿಡ್‌ ನಿರ್ಬಂಧ

ಕೊರೋನಾ ಸೋಂಕು ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಹಲವು ನಿರ್ಬಂಧಗಳನ್ನು ಹೇರಿ ಭಾನುವಾರ ಆದೇಶ ಹೊರಡಿಸಿದೆ. ಜ.3ರಿಂದ ಶಾಲಾ-ಕಾಲೇಜು ಸೇರಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಗಿತಗೊಳಿಸಬೇಕು. ಕಚೇರಿಗಳಲ್ಲಿ ಶೇ.50ರಷ್ಟುಆಸನ ಸಾಮರ್ಥ್ಯದ ಉದ್ಯೋಗಿಗಳು ಮಾತ್ರ ಭೌತಿಕವಾಗಿ ಹಾಜರಾಗಿ ಕೆಲಸ ಮಾಡಬೇಕು ಎಂದು ಆದೇಶಿಸಿದೆ.

Covid 19 West Bengal govt announces fresh restrictions gvd
Author
Bangalore, First Published Jan 3, 2022, 9:41 AM IST

ಕೋಲ್ಕತಾ (ಜ.03): ಕೊರೋನಾ ಸೋಂಕು (Corona Virus) ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ (West Bengal govt) ಮುಂಜಾಗ್ರತಾ ಕ್ರಮವಾಗಿ ಹಲವು ನಿರ್ಬಂಧಗಳನ್ನು ಹೇರಿ ಭಾನುವಾರ ಆದೇಶ ಹೊರಡಿಸಿದೆ. ಜ.3ರಿಂದ ಶಾಲಾ-ಕಾಲೇಜು ಸೇರಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಗಿತಗೊಳಿಸಬೇಕು. ಕಚೇರಿಗಳಲ್ಲಿ ಶೇ.50ರಷ್ಟುಆಸನ ಸಾಮರ್ಥ್ಯದ ಉದ್ಯೋಗಿಗಳು ಮಾತ್ರ ಭೌತಿಕವಾಗಿ ಹಾಜರಾಗಿ ಕೆಲಸ ಮಾಡಬೇಕು ಎಂದು ಆದೇಶಿಸಿದೆ.

ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಪಶ್ಚಿಮ ಬಂಗಾಳ ಮುಖ್ಯಕಾರ‍್ಯದರ್ಶಿ ಎಚ್‌.ಕೆ.ದ್ವಿವೇದಿ (H.K.Dwivedi) ಅವರು, ರಾಜ್ಯದಲ್ಲಿ ರಾತ್ರಿ 10ರಿಂದ ಮುಂಜಾನೆ 5ರ ವರೆಗೆ ಕರ್ಫ್ಯೂ (Night Curfew) ಹೇರಲಾಗುತ್ತಿದೆ. ಕೇವಲ ಅಗತ್ಯ ಸೇವೆಗಳು ಮಾತ್ರ ಈ ಸಮಯದಲ್ಲಿ ಲಭ್ಯವಿರಲಿವೆ. ಸ್ಥಳೀಯ ರೈಲುಗಳು ಶೇ.50ರಷ್ಟುಆಸನ ಸಾಮರ್ಥ್ಯದೊಂದಿಗೆ ಸಂಜೆ 7 ಗಂಟೆವರೆಗೂ ಕಾರಾರ‍ಯಚರಣೆಯಲ್ಲಿರಲು ಅವಕಾಶವಿದೆ. ಸುದೀರ್ಘ ಸಂಚಾರ ಮಾಡುವ ರೈಲುಗಳು ಮಾಮೂಲಿಯಂತೆ ಸಂಚರಿಸಬಹುದು. ಮೆಟ್ರೋಗಳೂ ಈಗಿರುವ ಸಮಯದಂತೆಯೇ ಶೇ.50ರಷ್ಟುಆಸನ ಸಾಮರ್ಥ್ಯದಲ್ಲಿ ಕಾರಾರ‍ಯಚರಣೆ ನಡೆಸಬಹುದು. ಶಾಪಿಂಗ್‌ ಮಾಲ್‌, ಮಾರುಕಟ್ಟೆಗಳೂ ಶೇ.50ರಷ್ಟುಸಾಮರ್ಥ್ಯದಲ್ಲಿ ರಾತ್ರಿ10 ಗಂಟೆ ವರೆಗೂ ಕಾರ‍್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ.

ಹಾಗೆಯೇ ಮುಂಬೈ ಮತ್ತು ದೆಹಲಿಯಿಂದ ವಾರಕ್ಕೆ ಎರಡು ಬಾರಿ ಮಾತ್ರ ವಿಮಾನಗಳು ಸಂಚರಿಸಲಿವೆ. ಆದರೆ ಬ್ರಿಟನ್‌ನಿಂದ ನೇರವಾಗಿ ಬರುವ ವಿಮಾನಗಳಿಗೆ ರಾಜ್ಯಕ್ಕೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ ಎಂದರು. ಪಶ್ಚಿಮ ಬಂಗಾಳದಲ್ಲಿ ಶನಿವಾರ 4512 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು.

Massive Jump In COVID 19 Case: ಒಂದೇ ದಿನ 16 ಲಕ್ಷ ಕೋವಿಡ್‌ ಕೇಸ್‌!

ಇದೇ ವೇಳೆ, ಎಲ್ಲಾ ಪ್ರವಾಸ ತಾಣಗಳು, ಪ್ರಾಣಿಸಂಗ್ರಹಾಲಯಗಳು ಸ್ಥಗಿತಗೊಳ್ಳಲಿವೆ. ಈಜುಕೊಳ, ಪಾರ್ಲರ್‌, ಸ್ಪಾ, ಜಿಮ್‌ಗಳನ್ನೂ ಮುಚ್ಚುವಂತೆ ಆದೇಶಿಸಲಾಗಿದೆ. ಸಿನಿಮಾ ಥಿಯೇಟರ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಶೇ.50ರಷ್ಟುಆಸನ ಸಾಮರ್ಥ್ಯದಲ್ಲಿ ಮಾತ್ರ ಕಾರ‍್ಯನಿರ್ವಹಿಸಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ಸಭೆ ಸಮಾರಂಭಗಳಿಗೆ ಗರಿಷ್ಠ 200, ಮದುವೆಗೆ 50 ಮತ್ತು ಅಂತ್ಯಸಂಸ್ಕಾರಕ್ಕೆ 20 ಜನ ಮಾತ್ರ ಪಾಲ್ಗೊಳ್ಳಬಹುದೆಂಬ ನಿರ್ಬಂಧ ಹೇರಲಾಗುತ್ತಿದೆ ಎಂದು ಹೇಳಿದರು.

27,553 ಕೇಸ್‌: 2 ತಿಂಗಳ ಗರಿಷ್ಠ: ಭಾರತದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 27,553 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 2021ರ ಅಕ್ಟೋಬರ್‌ 1 ನಂತರದ (2 ತಿಂಗಳ) ಗರಿಷ್ಠ ಸಂಖ್ಯೆಯಾಗಿದೆ. ಇದೇ ವೇಳೆ ಸೋಂಕಿಗೆ 284 ಮಂದಿ (ಕೇರಳದ 241 ಹಳೆಯ ಸಾವು) ಸೋಂಕಿಗೆ ಬಲಿಯಾಗಿದ್ದಾರೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 1.22 ಲಕ್ಷಕ್ಕೆ ಹೆಚ್ಚಿದೆ. ಚೇತರಿಕೆ ಪ್ರಮಾಣ ಶೇ.98.27ರಷ್ಟಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.2.55ಕ್ಕೆ ಏರಿಕೆಯಾಗಿದೆ.

ಭಾನುವಾರದ ಸಂಖ್ಯೆಯೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.48 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 4,81,770ಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 3.42 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ಒಟ್ಟು 145 ಕೋಟಿ ಡೋಸ್‌ ಲಸಿಕೆ ವಿತರಣೆ ಮಾಡಲಾಗಿದೆ.

ದೇಶದಲ್ಲಿ ಮತ್ತೆ ವಿಶ್ವದಾಖಲೆಯ 3.54 ಲಕ್ಷ ಕೋವಿಡ್‌ ಕೇಸ್‌!

ಮಹಾರಾಷ್ಟ್ರದಲ್ಲಿ 11837 ಕೇಸ್‌: ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 11837 ಮಂದಿಗೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಕೇಸ್‌ಗಳ ಪೈಕಿ ಮುಂಬೈನಲ್ಲಿ 8067 ಕೇಸ್‌ಗಳು ದೃಢಪಟ್ಟಿದೆ. ಶನಿವಾರಕ್ಕೆ ಹೋಲಿಸಿದರೆ ಮುಂಬೈನಲ್ಲಿ ಕೋವಿಡ್‌ ಶೇ.27 ಪ್ರಮಾಣದಷ್ಟುಹೆಚ್ಚಾಗಿದೆ. ಆದಾಗ್ಯೂ, ಕಳೆದ 24 ಗಂಟೆಯಲ್ಲಿ ಮುಂಬೈನಲ್ಲಿ ಕೋವಿಡ್‌ನಿಂದ ಒಂದೇ ಒಂದು ಸಾವು ಸಂಭವಿಸಿಲ್ಲ ಎಂಬುದು ಸಮಾಧಾನಕರ.

Follow Us:
Download App:
  • android
  • ios