ತಮಿಳುನಾಡಿನಲ್ಲಿ ಕೋವಿಡ್‌ ಪ್ರಕರಣಗಳು  ಏರುಮುಖ ಜು.19ರ ವರೆಗೆ ತಮಿಳುನಾಡು ಸರ್ಕಾರದಿಂದ ಲಾಕ್‌ಡೌನ್‌ ವಿಸ್ತರಣೆ  ಅಂಗಡಿಗಳು, ವಾಣಿಜ್ಯ ಚಟುವಟಿಕೆಗೆ ರಾತ್ರಿ 8 ಗಂಟೆ ವರೆಗೆ ಅವಕಾಶ 

ಚೆನ್ನೈ (ಜು.11): ಕೋವಿಡ್‌ 2ನೇ ಅಲೆ ತಗ್ಗುತ್ತಿದೆ ಎಂಬ ಸಮಾಧಾನದ ಬೆನ್ನಲ್ಲೇ ತಮಿಳುನಾಡಿನಲ್ಲಿ ಕೋವಿಡ್‌ ಪ್ರಕರಣಗಳು ಕೊಂಚ ಏರುಮುಖವಾಗಿರುವ ಹಿನ್ನೆಲೆಯಲ್ಲಿ ಜು.19ರ ವರೆಗೆ ತಮಿಳುನಾಡು ಸರ್ಕಾರ ಲಾಕ್‌ಡೌನ್‌ ವಿಸ್ತರಣೆ ಮಾಡಿದೆ. 

Add Asianetnews Kannada as a Preferred SourcegooglePreferred

ಅಂತಾರಾಜ್ಯ ಬಸ್‌, ಸಿನಿಮಾ ಹಾಲ್‌, ಬಾರ್‌, ಈಜುಕೊಳ, ರಾಜಕೀಯ ಕಾರ‍್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ಶಾಲೆ, ಕಾಲೇಜುಗಳ ಬಂದ್‌ ಮುಂದುವರೆದಿದೆ. ವಿವಾಹ ಕಾರ‍್ಯಕ್ರಮಗಳಿಗೆ 50, ಅಂತ್ಯ ಸಂಸ್ಕಾರಕ್ಕೆ ಗರಿಷ್ಠ 20 ಜನರು ಮಾತ್ರ ಭಾಗವಹಿಸಬಹುದು ಎಂದು ತಿಳಿಸಲಾಗಿದೆ. 

ಜನರ ಬೇಕಾಬಿಟ್ಟಿ ಓಡಾಟ: ಸ್ವಲ್ಪ ನಿರ್ಲಕ್ಷಿಸಿದ್ರೂ ಮತ್ತೆ ಸೋಂಕು ಉಲ್ಬಣ..!

ಆದರೆ ಎಲ್ಲಾ ರೀತಿಯ ಅಂಗಡಿಗಳು, ವಾಣಿಜ್ಯ ಚಟುವಟಿಕೆಗೆ ರಾತ್ರಿ 8 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ತಮಿಳುನಾಡಿನಲ್ಲಿ ಸದ್ಯ 33,000 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ.