ನವದೆಹಲಿ(ಡಿ.  01) ಕೊರೋನಾ ಎರಡನೇ ಅಲೆ ಅಪ್ಪಳಿಸುತ್ತದೆ ಎಂಬ ಆತಂಕದ ನಡುವೆ ನಿಟ್ಟುಸಿರು ಬಿಡುವ ಸುದ್ದಿಇಯೊಂದು ಇದೆ. ನವೆಂಬರ್ ತಿಂಗಳಿನಲ್ಲಿ ಭಾರತದಾದ್ಯಂತ 12.8 ಲಕ್ಷ ಕೊರೋನಾ ಪ್ರಕರಣ ದಾಖಲಾಗಿದೆ. ಇದು ಕಳೆದ ನಾಲ್ಕು ತಿಂಗಳಿನಲ್ಲಿಯೇ ಅತಿ ಕಡಿಮೆ.

ಕಳೇದ ಐದು ತಿಂಗಳಿಗೆ ಹೋಲಿಕೆ ಮಡಿದರೆ ಸಾವಿನ ಸಂಖ್ಯೆಯೂ ಇಳಿಕೆಯಾಗಿದೆ. ಜೂನ್ ನಂತರ ಅತಿ ಕಡಿಮೆ ಸಾವಾಗಿದೆ. ನವೆಂಬರ್ ನಲ್ಲಿ 15,494 ಜನರು ಚೀನಿ ವೈರಸ್ ಗೆ ಬಲಿಯಾಗಿದ್ದಾರೆ.  ಅಕ್ಟೋಬರ್ ನಲ್ಲಿ 23,472 ಸಾವುಗಳು ಸಂಭವಿಸಿದ್ದವು. ಜೂನ್ ತಿಂಗಳಿನಲ್ಲಿ 11,988 ಸಾವು ಸಂಭವಿಸಿದ್ದು ಅದಾದ ಮೇಲೆ ಕೊರೋನಾ ಆರ್ಭಟ ನಿರಂತರವಾಗಿ ಮುಂದುವರಿದಿತ್ತು.

ಎಲ್ಲ ರಾಜ್ಯ ಸರ್ಕಾರಗಳಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ. ಚಳಿಗಾಲ ಮತ್ತು ಕೊರೋನಾ ಎರಡನೇ ಅಲೆಯ ಭಯ ಉದ್ದರೂ ಸಹ ಒಂದು ಹಂತದ ನಿಯಂತ್ರಣದಲ್ಲಿ ಇರುವುದು ಆಶಾಭಾವನೆ ಮೂಡಿಸಿದೆ.

ಕೋವಿಡ್ ಗರ್ಭಿಣಿಗೆ ಜನಿಸಿದ ಮಗುವಿನಲ್ಲಿ ಪ್ರತಿಕಾಯ

ಪಂನಾಬ್ ನಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲು ಚಿಂತನೆ ನಡೆಸಲಾಗಿದೆ.  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ನಿಯಂತ್ರಣಕ್ಕೆ  ಬಂದಿದ್ದ ಕೊರೋನಾ ಮತ್ತೆ ಏರಿಕೆ ದಾಖಲಿಸಿತ್ತು. ಕರ್ನಾಟಕದಲ್ಲಿಯೂ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿದ್ದು ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಹೆಚ್ಚಿದೆ. 

ಪ್ರಧಾನಿ ಮೋದಿ ಅವರೆ ಮುಂದೆ ನಿಂತು ಲಸಿಕೆ ತಯಾರಿಕೆ ಮೇಲ್ವಿಚಾರಣೆ  ನೋಡಿಕೊಳ್ಳುತ್ತಿದ್ದಾರೆ. ಹೈದರಾಬಾದ್, ಪುಣೆಯಲ್ಲಿ ಮೂರನೇ  ಹಂತದ ಟ್ರಯಲ್ ಗಳು ನಡೆಯುತ್ತಿವೆ. ಮುಂದಿನ ವರ್ಷದ ಆರಂಭದ ತಿಂಗಳಿನಲ್ಲಿಯೇ ಕೊರೋನಾಕ್ಕೆ ಅಂತ್ಯ ಸಿಗುತ್ತದೆಯೇ ನೋಡಬೇಕಿದೆ.