ಕೋವಿಡ್ ಗರ್ಭಿಣಿಗೆ ಜನಿಸಿದ ಮಗುವಿನಲ್ಲಿ ಪ್ರತಿಕಾಯ ಪತ್ತೆ!
ಕಳೆದ ಮಾಚ್‌ರ್‍ನಲ್ಲಿ ಗರ್ಭಿಣಿಯಾಗಿದ್ದಾಗ ಕೊರೋನಾ ವೈರಸ್ ತಗುಲಿ ಗುಣಮುಖರಾಗಿರುವ ಸಿಂಗಾಪುರದ ಮಹಿಳೆ| ವೈರಸ್ ವಿರುದ್ಧದ ಪ್ರತಿಕಾಯಗಳನ್ನು ಹೊಂದಿರುವ ಮಗುವಿಗೆ ಜನ್ಮ| ಗರ್ಭದೊಳಗಿದ್ದಾಗಲೇ ತಾಯಿಯಿಂದ ಮಗುವಿಗೆ ವೈರಸ್ ಹರಡುವ ಸಾಧ್ಯತೆ ಇದೆ ಎಂಬ ನೂತನ ಸುಳಿವು
ಸಿಂಗಾಪುರ(ನ.30): ಕಳೆದ ಮಾಚ್‌ರ್‍ನಲ್ಲಿ ಗರ್ಭಿಣಿಯಾಗಿದ್ದಾಗ ಕೊರೋನಾ ವೈರಸ್ ತಗುಲಿ ಗುಣಮುಖರಾಗಿರುವ ಸಿಂಗಾಪುರದ ಮಹಿಳೆಯೊಬ್ಬರು ವೈರಸ್ ವಿರುದ್ಧದ ಪ್ರತಿಕಾಯಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಗರ್ಭದೊಳಗಿದ್ದಾಗಲೇ ತಾಯಿಯಿಂದ ಮಗುವಿಗೆ ವೈರಸ್ ಹರಡುವ ಸಾಧ್ಯತೆ ಇದೆ ಎಂಬ ನೂತನ ಸುಳಿವು ಲಭ್ಯವಾಗಿದೆ.
ಈ ತಿಂಗಳು ಜನಿಸಿರುವ ಮಗುವಿನಲ್ಲಿ ಸಕ್ರಿಯ ಕೋವಿಡ್ ವೈರಸ್ ಪತ್ತೆಯಾಗಿಲ್ಲ. ಆದರೆ ವೈರಸ್ ವಿರುದ್ಧದ ಪ್ರತಿಕಾಯಗಳು ಮಗುವಿನ ದೇಹದಲ್ಲಿ ಸೃಷ್ಟಿಯಾಗಿವೆ ಎಂದು ಸುದ್ದಿಸಂಸ್ಥೆಯೊಂದು ಭಾನುವಾರ ವರದಿ ಮಾಡಿದೆ.
ಗರ್ಭಿಣಿಗೆ ಸೋಂಕು ತಗುಲಿದ್ದರೆ ಮಗುವಿಗೂ ಸೋಂಕು ತಗುಲುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅಂತಹ ಸಾಧ್ಯತೆ ತೀರಾ ಅಪರೂಪ ಎಂದು ಅಮೆರಿಕದ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಪುಣೆಯಲ್ಲಿ ಹರ್ಡ್ ಇಮ್ಯುನಿಟಿ ಅಭಿವೃದ್ಧಿ?
ದೇಶದಲ್ಲೇ ಮೊದಲ ಬಾರಿ ಮಹಾರಾಷ್ಟ್ರದ ಪುಣೆಯ ಕೆಲ ಭಾಗದಲ್ಲಿ ಕೊರೋನಾ ವೈರಸ್ ವಿರುದ್ಧ ಹರ್ಡ್ ಇಮ್ಯನಿಟಿ (ಸಮುದಾಯ ರೋಗನಿರೋಧಕ ಶಕ್ತಿ) ಅಭಿವೃದ್ಧಿಯಾಗಿರುವ ಸಾಧ್ಯತೆ ಕಂಡುಬಂದಿದೆ.
ನಗರದಲ್ಲಿ ಕೊರೋನಾ ಹರಡಿರುವ ರೀತಿಯ ಪತ್ತೆಗೆ ಹೊಸ ರೀತಿಯ ಅಧ್ಯಯನವೊಂದನ್ನು ನಡೆಸಲಾಗಿದ್ದು, ಅದರಲ್ಲಿ ಈ ಹಿಂದೆ ಕೊರೋನಾದಿಂದ ಬಳಲಿದ್ದ ಶೇ.85ರಷ್ಟುಜನರಲ್ಲಿ ಪ್ರೊಟೆಕ್ಟಿವ್ ಆ್ಯಂಟಿಬಾಡೀಸ್ (ಸುರಕ್ಷತಾ ಪ್ರತಿಕಾಯ) ಪತ್ತೆಯಾಗಿದೆ. ಅಂದರೆ ಅವರು ಕೊರೋನಾ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಗಳಿಸಿಕೊಂಡಿದ್ದಾರೆ.