ದೇಶದ ಕೋವಿಡ್‌ ಸೋಂಕಿತರ ಸಂಖ್ಯೆ 3 ಕೋಟಿ 50 ದಿನದಲ್ಲಿ 2ರಿಂದ 3 ಕೋಟಿಗೆ ಏರಿಕೆ ನಿನ್ನೆ 50848 ಕೇಸು, 1358 ಜನರ ಸಾವು

ನವದೆಹಲಿ(ಜೂ.24): ಬುಧವಾರ ದೇಶದಲ್ಲಿ 50848 ಜನರಲ್ಲಿ ಹೊಸದಾಗಿ ಕೋವಿಡ್‌ ಸೋಂಕು ದೃಢಪಡುವುದರೊಂದಿಗೆ, ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಅದರಲ್ಲೂ 2ನೇ ಅಲೆ ತೀವ್ರವಾಗಿದ್ದ ಕಳೆದ 50 ದಿನಗಳಲ್ಲಿ ದೇಶದಲ್ಲಿ ಹೊಸದಾಗಿ 1ಕೋಟಿ ಜನರಲ್ಲಿ ಸೋಂಕು ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 1358 ಮಂದಿ ಕೊರೋನಾಕ್ಕೆ ಬಲಿಯಾಗಿದ್ದು, ಕೋವಿಡ್‌ಗೆ ಒಟ್ಟು ಬಲಿಯಾದವರ ಸಂಖ್ಯೆ 3,90,660ರೊಂದಿಗೆ 4 ಲಕ್ಷದ ಹತ್ತಿರಕ್ಕೆ ದಾಪುಗಾಲಿಟ್ಟಿದೆ.

ಕರ್ನಾಟಕಕ್ಕೂ ಕಾಲಿಟ್ಟಿತು ಡೆಲ್ಟಾಪ್ಲಸ್‌ ವೈರಸ್‌..!

6,43,194 ಮಂದಿಯಲ್ಲಿ ಮಾತ್ರವೇ ಸೋಂಕು ಸಕ್ರಿಯವಾಗಿದೆ. ಇನ್ನು ದೇಶದ ಸೋಂಕಿತರ ಪ್ರಮಾಣ ಶೇ.2.14 ಹಾಗೂ ಗುಣಮುಖರಾದವರ ಪ್ರಮಾಣ ಶೇ.96.56ರಷ್ಟಿದೆ.