* 2 ಸ್ಯಾಂಪಲ್‌ನಲ್ಲಿ ಸೋಂಕು ದೃಢ* 1 ಸ್ಯಾಂಪಲ್‌ ತಮಿಳುನಾಡಿನದ್ದು* ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ 

ಬೆಂಗಳೂರು(ಜೂ.23): ಕೊರೋನಾ ಸೋಂಕಿನ ಹೊಸ ರೂಪಾಂತರಿಯಾಗಿರುವ ‘ಡೆಲ್ಟಾಪ್ಲಸ್‌’ ರಾಜ್ಯಕ್ಕೂ ಕಾಲಿಟ್ಟಿದೆ. ನಿಮ್ಹಾನ್ಸ್‌ನಲ್ಲಿನ ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಾಜಿಕಲ್‌ ಸೈನ್ಸಸ್‌ (ಎನ್‌ಸಿಬಿಎಸ್‌) ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆ ವೇಳೆ ಇಬ್ಬರಲ್ಲಿ ಡೆಲ್ಟಾಪ್ಲಸ್‌ ಸೋಂಕು ಇರುವುದು ದೃಢಪಟ್ಟಿದೆ. 

ಇದರಲ್ಲಿ ಒಂದು ಸ್ಯಾಂಪಲ್‌ ಕರ್ನಾಟಕ ಮೂಲದ್ದಾಗಿದ್ದು, ಇನ್ನೊಂದು ಸ್ಯಾಂಪಲ್‌ ತಮಿಳುನಾಡಿಗೆ ಸೇರಿದೆ. ಮಂಗಳವಾರ ರಾಜ್ಯದಲ್ಲಿ ಎರಡು ಡೆಲ್ಟಾಪ್ಲಸ್‌ ವೈರಾಣು ಸೋಂಕಿತರು ಪತ್ತೆಯಾಗಿದ್ದಾರೆ. 

80 ದೇಶಗಳಿಗೆ ಹಬ್ಬಿದ ಡೆಲ್ಟಾ, ವಿಶ್ವದಲ್ಲೇ ಹೆಚ್ಚು ಹಬ್ಬಿದ ವೈರಸ್‌ ಪಟ್ಟದ ಭೀತಿ!

ಇದರಲ್ಲಿ ಒಂದು ಪ್ರಕರಣ ಕರ್ನಾಟಕದ್ದು. ಸದ್ಯದ ಮಟ್ಟಿಗೆ ಈ ರೂಪಾಂತರಿ ವೈರಾಣು ಹೆಚ್ಚು ವೇಗವಾಗಿ ಹರಡುತ್ತದೆ ಅಥವಾ ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ರೂಪಾಂತರಿಯ ಬಗ್ಗೆ ಅಧ್ಯಯನ ಇನ್ನೂ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.