ಹೈದರಾಬಾದ್(ಮೇ.13): ಕೊರೋನಾ ವೈರಸ್ ಕಾರಣ ಲಸಿಕೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಕಾರಣ ಲಸಿಕೆ ಕೊರತೆ. ದೇಶಕ್ಕೆ ಕೋವಾಕ್ಸಿನ್ ಲಸಿಕೆ ಪೂರೈಸುತ್ತಿರುವ ಭಾರತ್ ಬಯೋಟೆಕ್ ಸಂಸ್ಥೆಗೆ ಇದೀಗ ಕೊರೋನಾ ಶಾಕ್ ನೀಡಿದೆ. ಸಂಸ್ಥೆಯ 50 ಸಿಬ್ಬಂದಿಗಳಿಗೆ ಕೊರೋನಾ ತಗುಲಿದೆ.

18 ರಾಜ್ಯಕ್ಕೆ ಲಸಿಕೆ ನೀಡಿದರೂ ಆರೋಪ, ನೋವು ತೋಡಿಕೊಂಡ ಕೋವಾಕ್ಸಿನ್ ಸಂಸ್ಥೆ!

ಈ ಕುರಿತು ಭಾರತ್ ಬಯೋಟೆಕ್ ಸಂಸ್ಥೆಯ ಸಹ ಸಂಸ್ಥಾಪಕಿ, ವ್ಯವಸ್ಥಾಪಕಿ ನಿರ್ದೇಶಕಿ ಸುಚಿತ್ರ ಎಲ್ಲಾ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕೊರೋನಾ ವಾಕ್ಸಿನ್ ಪೂರೈಕೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲ ಅನ್ನೋ ಆರೋಪಗಳು ಭಾರತ್ ಬಯೋಟೆಕ್ ಮೇಲಿದೆ. ಇದರ ನಡುವೆ ಕೊರೋನಾ ವೈರಸ್ ತಮ್ಮ ಸಂಸ್ಥೆಗೂ ತಟ್ಟಿದೆ. ಸಂಸ್ಥೆಯ 50 ಉದ್ಯೋಗಿಗಳಿಗೆ ಕೊರೋನಾ ತಗುಲಿದೆ ಎಂದು ಸುಚಿತ್ರಾ ಎಲ್ಲಾ ಟ್ವೀಟ್ ಮಾಡಿದ್ದಾರೆ.

 

ಲಸಿಕೆ ಕೊರತೆಗೆ ಪರಿಹಾರ; ಭಾರತ್ ಬಯೋಟೆಕ್-ಒಡಿಶಾ ಸರ್ಕಾರದಿಂದ ಲಸಿಕೆ ಉತ್ಪಾದಕ ಘಟಕ!

ತೀವ್ರ ಒತ್ತಡದಲ್ಲಿ ಸಂಸ್ಥೆ ಕೆಲಸ ನಿರ್ಹಿಸುತ್ತಿದೆ. ಭಾರತದ ಜನರ ಒಳಿತಿಗಾಗಿ ಸತತ ಕಾರ್ಯನಿರ್ವಹಿಸುತ್ತೇವೆ ಎಂದಿದ್ದಾರೆ. ಆದರೆ ಸುಚಿತ್ರ ಎಲ್ಲಾ ಟ್ವೀಟ್‌ಗೆ ವಿರೋಧಗಳು ವ್ಯಕ್ತವಾಗಿದೆ. ಕೊರೋನಾ ಲಸಿಕೆ ಉತ್ಪಾದಕ ಕಂಪನಿಯ ಸಿಬ್ಬಂದಿಗಳಿಗೆ ಲಸಿಕೆ ನೀಡಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಈ ಟ್ವೀಟ್‌ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.