ಲಸಿಕೆ ಕೊರತೆಗೆ ಪರಿಹಾರ; ಭಾರತ್ ಬಯೋಟೆಕ್-ಒಡಿಶಾ ಸರ್ಕಾರದಿಂದ ಲಸಿಕೆ ಉತ್ಪಾದಕ ಘಟಕ!
ಲಸಿಕೆ ಪೂರೈಕೆಯಾಗುತ್ತಿಲ್ಲ, ಉತ್ಪಾದನೆ ಸಾಕಾಗುತ್ತಿಲ್ಲ, ಬೇಡಿಕೆಗೆ ತಕ್ಕಂತೆ ಲಸಿಕೆ ಇಲ್ಲ ಎಂದು ಪ್ರತಿ ರಾಜ್ಯಗಳು ಕಣ್ಣೀರಿಡುತ್ತಿದೆ. ಇದೀಗ ಲಸಿಕೆ ಸಮಸ್ಯೆಗೆ ಒಡಿಶಾ ಸರ್ಕಾರ ಪರಿಹಾರ ಕಂಡುಕೊಂಡಿದೆ. ಭಾರತ್ ಬಯೋಟೆಕ್ ಹಾಗೂ ಒಡಿಶಾ ಸರ್ಕಾರದ ಮಾಸ್ಟರ್ ಪ್ಲಾನ್ ವಿವರ ಇಲ್ಲಿದೆ.
ಒಡಿಶಾ(ಮೇ.07): ಬಹುತೇಕ ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವಿಕೆ ಆರಂಭಾಗಿಲ್ಲ. ಕಾರಣ ಲಸಿಕೆ ಕೊರತೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಒಡಿಶಾ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಭಾರತ್ ಬಯೋಟೆಕ್ ಜೊತೆ ಸೇರಿ ಒಡಿಶಾದಲ್ಲಿ ಕೋವಾಕ್ಸಿನ್ ಲಸಿಕೆ ಉತ್ಪಾದನೆ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸಲು ಮುಂದಾಗಿದೆ.
ಕೋವ್ಯಾಕ್ಸಿನ್ ದರ 200 ರು. ಇಳಿಕೆ : ಒಂದು ಡೋಸ್‌ಗೆಷ್ಟು?.
ಒಡಿಶಾ ರಾಜಧಾನಿ ಭುವನೇಶ್ವರ್ ನಗರದಲ್ಲಿ ಭಾರತ್ ಬಯೋಟೆಕ್ ನೂತನ ಲಸಿಕೆ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ. ಅತ್ಯಾಧುನಿಕ ಘಟಕ ತಲೆ ಎತ್ತಲಿದೆ. ಈ ಘಟಕದಲ್ಲಿ ಕೊರೋನಾ, ಮಲೇರಿಯಾ ಸೇರಿದಂತೆ 19 ರೀತಿಯ ಲಸಿಕೆ ಉತ್ಪಾದನೆಯಾಗಲಿದೆ ಎಂದು ಒಡಿಶಾ ಸರ್ಕಾರ ಹೇಳಿದೆ.
ರೂಪಾಂತರಿ ವೈರಸ್‌ಗೂ ಕೋವ್ಯಾಕ್ಸಿನ್ ರಾಮಬಾಣ!.
ಒಡಿಶಾ ಸರ್ಕಾರ ಲಸಿಕೆ ಉತ್ಪಾದನೆ ಘಟಕಕ್ಕೆ ಎಲ್ಲಾ ನೆರವು ನೀಡಲಿದೆ. ಈಗಾಗಲೇ ಮೂಲಭೂತ ಸೌಕರ್ಯ ಒದಗಿಸಲು ಆದೇಶಿಲಾಗಿದೆ. ತಕ್ಷಣವೇ ಕಾರ್ಯಾರಂಭಿಸಲು ಸೂಚಿಸಲಾಗಿದೆ. ನೂತನ ಘಟಕ 2022ರ ಜೂನ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಆರಂಭಿಸಲಿದೆ ಎಂದು ಭಾರತ್ ಭಯೋಟೆಕ್ ಹೇಳಿದೆ.
ಸದ್ಯ ಆಂಧ್ರ ಪ್ರದೇಶದಲ್ಲಿರುವ ಭಾರತ್ ಬಯೋಟೆಕ್‌ನಿಂದ ಒಡಿಶಾ ಸರ್ಕಾರ ಲಸಿಕೆ ಆರ್ಡರ್ ಮಾಡಿದೆ. ಸದ್ಯ ಕೊರೋನಾ ಪರಿಸ್ಥಿತಿ ನಿಯಂತ್ರಿಸಲು ಒಡಿಶಾ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆದರೆ ಭವಿಷ್ಯದಲ್ಲಿ ಈ ರೀತಿ ಸಮಸ್ಯೆ ಬರದ ರೀತಿಯಲ್ಲಿ ನೋಡಿಕೊಳ್ಳಲು ಒಡಿಶಾ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ರಾಜ್ಯದಲ್ಲೇ ಲಸಿಕೆ ಘಟಕ ಸ್ಥಾಪನೆಗೆ ಮುಂದಾಗಿದೆ.