'ಕೋವ್ಯಾಕ್ಸಿನ್‌ ಬ್ರೆಜಿಲ್‌ ವೈರಸ್‌ ಮೇಲೆ ಪರಿಣಾಮಕಾರಿ!'

ಭಾರತದಲ್ಲೇ ತಯಾರಾದ ದೇಶೀ ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್‌’| ಕೋವ್ಯಾಕ್ಸಿನ್‌ ಬ್ರೆಜಿಲ್‌ ವೈರಸ್‌ ಮೇಲೆ ಪರಿಣಾಮಕಾರಿ!

Covaxin effective against Brazilian British and Indian variants of coronavirus studies show pod

ಹೈದರಾಬಾದ್‌(ಮೇ.04): ಭಾರತದಲ್ಲೇ ತಯಾರಾದ ದೇಶೀ ಕೊರೋನಾ ಲಸಿಕೆ ‘ಕೋವ್ಯಾಕ್ಸಿನ್‌’ ಬ್ರೆಜಿಲ್‌ ಮಾದರಿ ರೂಪಾಂತರಿ ಕೊರೋನಾ ವೈರಸ್‌ಗೂ ರಾಮಬಾಣವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ.

ಇದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಹುಟ್ಟಿದ ಡಬಲ್‌ ವೈರಸ್‌ (ಬಿ.1.617) ಕೊರೋನಾ ರೂಪಾಂತರಿ ಮೇಲೂ ಕೋವ್ಯಾಕ್ಸಿನ್‌ ಪರಿಣಾಮಕಾರಿ ಎಂದು ಅಧ್ಯಯನದಿಂದ ದೃಢಪಟ್ಟಿತ್ತು. ಈಗ ಇನ್ನೊಂದು ಅಧ್ಯಯನವು ಬ್ರೆಜಿಲ್‌ ವೈರಸ್‌ ಮೇಲೂ ಕೋವ್ಯಾಕ್ಸಿನ್‌ನ 2 ಡೋಸ್‌ ಲಸಿಕೆ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಬ್ರೆಜಿಲ್‌ ರೂಪಾಂತರಿ ವೈರಸ್‌ (ಬಿ.1.1.28.2) ಅನ್ನೂ ಎರಡು ವೈರಸ್‌ಗಳ ಸಂಗಮದಿಂದ ಉದ್ಭವಿಸಿದ ವೈರಾಣು ಎಂದು ಮೊದಲು ಭಾವಿಸಲಾಗಿತ್ತು. ಆದರೆ ಈಗ ಇದು ಹೊಸದಾಗಿ ಸೃಷ್ಟಿಯಾದ ವೈರಾಣು ಎಂದು ಅಧ್ಯಯನದಿಂದ ದೃಢಪಟ್ಟಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios