Asianet Suvarna News Asianet Suvarna News

ಗ್ಯಾನವ್ಯಾಪಿ ವೈಜ್ಞಾನಿಕ ಸಮೀಕ್ಷೆ: ಜು.21ಕ್ಕೆ ವಾರಾಣಸಿ ಕೋರ್ಟ್ ತೀರ್ಪು

ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜು.21ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

Court will announce its verdict on June 21 regarding petition seeking a scientific survey of the Ganavyapi Masjid next to the Kashi Vishwanath Mandir in Varanasi akb
Author
First Published Jul 15, 2023, 11:54 AM IST

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಜು.21ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಎರಡೂ ಕಡೆಯ ವಾದ ಆಲಿಸಿರುವ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣದ ಹಿಂದೂ ಪರ ಅರ್ಜಿದಾರರಿಂದ ಶಿವಲಿಂಗ ಪತ್ತೆ ಸ್ಥಳವಾದ ವಜುಖಾನಾ ಹೊರತುಪಡಿಸಿ ಇಡೀ ಗ್ಯಾನವ್ಯಾಪಿ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಇಡೀ ಮಸೀದಿ ಸಂಕೀರ್ಣದ ಪುರಾತತ್ವ ಅಧ್ಯಯನದಿಂದ ಮಾತ್ರವೇ ಗ್ಯಾನವ್ಯಾಪಿ ಮತ್ತು ಕಾಶಿ ವಿಶ್ವನಾಥ ದೇಗುಲ ವ್ಯಾಜ್ಯ ಬಗೆಹರಿಲು ಸಾಧ್ಯ ಎಂದು ಹಿಂದೂ ಪರ ವಕೀಲರು ವಾದಿಸಿದ್ದರು.

ಗ್ಯಾನವ್ಯಾಪಿ ಮಸೀದಿಯಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ಕೋರ್ಟ್ ಮೆಟ್ಟೇಲೇರಿದ್ದರು. ಇದಾದ ಬಳಿಕ ಭಾರಿ ವಿವಾದ ಶುರುವಾಗಿತ್ತು. ಇಷ್ಟೇ ಅಲ್ಲ ದೇಶದ ಹಲವು ಮಸೀದಿಗಳು ದೇವಸ್ಥಾನದ ಮೇಲೆ ನಿಂತಿದೆ. ಇವುಗಳನ್ನು ಮರಳಿ ನೀಡಬೇಕು ಅನ್ನೋ ಕೂಗು ಜೋರಾಗಿ ಕೇಳಿಬಂದಿದೆ. ಕಾಶಿ ವಿಶ್ವನಾಥನ ಆವರಣದಲ್ಲಿರುವ ಗ್ಯಾನವ್ಯಾಪಿ ಮಸೀದಿ ಪ್ರಕರಣ ಕೋರ್ಟ್‌ನಲ್ಲಿದೆ. ಇದರ ನಡುವೆ ಪೂಜೆಗೆ ಅವಕಾಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಓರ್ವ ಅರ್ಜಿದಾರ ಮಹಿಳೆಯ ಪತಿಗೆ ಕಳೆದ ವರ್ಷ ಸರ್ ತನ್ ಸೆ ಜುದಾ ಬೆದರಿಕೆ ಕರೆ ಬಂದಿತ್ತು. ಇಸ್ಲಾಮ್ ವಿರುದ್ಧ ನಡೆದುಕೊಂಡಿದ್ದೀರಿ. ನಿಮಗೆ ರುಂಡವನ್ನು ದೇಹದಿಂದ ಬೇರ್ಪಡಿಸುವ ಶಿಕ್ಷೆ ಶೀಘ್ರದಲ್ಲೇ ನೀಡಲಾಗುತ್ತದೆ ಎಂದು ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿದೆ. ಇಷ್ಟೇ ಅಲ್ಲ ಪೂಜೆಗೆ ಅವಕಾಶ ನೀಡಿ ಎಂದು ಕೋರ್ಟ್‌ಗೆ ಸಲ್ಲಿಸಿರುವ ಮನವಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು. 

ಕಾಶಿ ವಿಶ್ವನಾಥ ಮಂದಿರಕ್ಕೆ 100 ಬಾರಿ ಭೇಟಿ ನೀಡಿದ ಉತ್ತರ ಪ್ರದೇಶದ ಮೊದಲ ಸಿಎಂ ಯೋಗಿ ಆದಿತ್ಯನಾಥ್!

ಗ್ಯಾನವ್ಯಾಪಿ ಮಸೀದಿ ಆವರಣದಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಬೇಕು ಎಂದು ಲಕ್ಷ್ಮೀ ದೇವಿ ಸೇರಿದಂತೆ ಐವರು ಮಹಿಳೆಯರು ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಈ ಮನವಿಯ ಆಧಾರದಲ್ಲೇ ಸರ್ವೇ ಕಾರ್ಯವೂ ನಡೆದಿದೆ. ಇದಾದ ನಂತರ ಲಕ್ಷಿ ದೇವಿ ಪತಿ ಸೋಹನ್ ಲಾಲ್ ಆರ್ಯಾಗೆ ಪಾಕಿಸ್ತಾನದಿಂದ ಬೆದರಿಕೆ ಕರೆ ಬಂದಿತ್ತು. ಕಳೆದ ವರ್ಷ ಜುಲೈ 19 ಹಾಗೂ 20ಕ್ಕೆ ಅನಾಮಿಕ ಕರೆಯೊಂದು ಬಂದಿತ್ತು. ಫೋನ್ ರಿಸೀವ್ ಮಾಡಿದ ಬೆನ್ನಲ್ಲೇ ಸರ್ ತನ್ ಸೇ ಜುದಾ, ಸರ್ ತನ್ ಸೇ ಜುದಾ ಅನ್ನೋ ಘೋಷಣೆ ಮೊಳಗಿತ್ತು. ಬಳಿಕ ಗ್ಯಾನವ್ಯಾಪಿ ಮಸೀದಿ ವಿರುದ್ಧ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಇಸ್ಲಾಮ್‌ನಲ್ಲಿನ ಸರ್ ತನ್ ಸೆ ಜುದಾ ಶಿಕ್ಷೆ ನೀಡಡಲಾಗುತ್ತದೆ ಎಂದಿದ್ದಾರೆ. ಸತತ 2 ದಿನ ಕರೆಗಳು ಬಂದಿದೆ ಎಂದು ಸೋಹನ್ ಲಾಲ್ ಆರ್ಯ ಹೇಳಿದ್ದರು.

ಕಾಶಿ ವಿಶ್ವನಾಥನಿಗೆ ಅಕ್ಬರಿ ಪೇಟ ತಯಾರಿಸಿ ತೊಡಿಸುವ ಘಿಯಾಸುದ್ದೀನ್!

Follow Us:
Download App:
  • android
  • ios