Asianet Suvarna News Asianet Suvarna News

Road accident: ದಂಪತಿ ಇಬ್ಬರು ಮಕ್ಕಳ ದಾರುಣ ಸಾವು

ಸತ್ನಾ(ನ.25): ಅಪಘಾತವೊಂದರಲ್ಲಿ ದಂಪತಿ ಹಾಗೂ ಅವರ ಇಬ್ಬರು ಮಕ್ಕಳು ಸಾವಿಗೀಡಾದಂತಹ ದಾರುಣ ಘಟನೆ ಮಧ್ಯಪ್ರದೇಶದ ಸತ್ನಾ(Satna) ಜಿಲ್ಲೆಯಲ್ಲಿ ನಡೆದಿದೆ.

Couple their two children killed Road in accident akb
Author
Madhya Pradesh, First Published Nov 25, 2021, 6:43 PM IST
  • Facebook
  • Twitter
  • Whatsapp

41 ವರ್ಷದ ಸತ್ಯಂ ಉಪಾಧ್ಯಾಯ(Satyam Upadhyay) ಇವರ ಪತ್ನಿ 38 ವರ್ಷದ ಮನಿಕಾ(Manika) ಹಾಗೂ ಈ ದಂಪತಿಯ ಇಬ್ಬರು ಮಕ್ಕಳಾದ 10 ವರ್ಷದ ಇಶಾನಿ( Ishani) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಈ ದಂಪತಿಯ 8 ವರ್ಷದ ಪುತ್ರ ಸ್ನೇಹ್‌(Sneh) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಬುಧವಾರ ಮಧ್ಯರಾತ್ರಿ ಸತ್ನಾ ಜಿಲ್ಲೆಯ ಜೀತ್‌ ನಗರ(Jeet Nagar)ದಲ್ಲಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತೀವ್ರಗಾಯಗೊಂಡಿದ್ದ ಬಾಲಕ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಮೈಹಾರ್‌(Maihar) ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ(SDOP) ಹಿಮಾಲಿ ಸೋನಿ( Himali Soni) ಹೇಳಿದ್ದಾರೆ.

Selfie Tragedy| ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್‌ ಡಿಕ್ಕಿ: ಇಬ್ಬರ ಸಾವು

ಅಪಘಾತದ ಬಳಿಕ ಕಾರು ಟ್ರಕ್‌ನಡಿ ಸಿಲುಕಿಕೊಂಡಿದ್ದು, ಕಾರನ್ನು ಕೆಲ ದೂರದವರೆಗೆ ಟ್ರಕ್‌ ಎಳೆದೊಯ್ದಿದೆ ಎಂದು ಹಿಮಾಲಿ ಸೋನಿ ಹೇಳಿದರು. ಅಪಘಾತದಲ್ಲಿ ಸಾವಿಗೀಡಾದವರು ಮೈಹಾರ್‌ನಲ್ಲಿರುವ ತಮ್ಮ ನಿವಾಸಕ್ಕೆ ವಾಪಾಸಾಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮೃತ ಸತ್ಯಂ ಉಪಾಧ್ಯಾಯ ಮೊಬೈಲ್‌ ಶಾಪೊಂದನ್ನು ನಡೆಸುತ್ತಿದ್ದರು. ಅಲ್ಲಿಂದ ಸತ್ನಾ ನಗರ(Satna city)ಕ್ಕೆ ಹೋಗಿ ಶಾಪಿಂಗ್‌ ಮುಗಿಸಿ ವಾಪಾಸಾಗುತ್ತಿದ್ದಾಗ ಜಿಲ್ಲಾ ಕೇಂದ್ರದಿಂದ ೪೦ ಕಿ.ಲೋ ಮೀಟರ್‌ ದೂರದಲ್ಲಿ ಈ ಅನಾಹುತ ನಡೆದಿದೆ. ಘಟನೆಯ ಬಳಿಕ ಟ್ರಕ್‌ ಚಾಲಕ( truck driver)ಸ್ಥಳದಿಂದ ಪರಾರಿಯಾಗಿದ್ದ. ಆದರೆ ನಂತರದಲ್ಲಿ ಘಟನೆ ನಡೆದ ಸ್ಥಳದ ಸಮೀಪದ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿದೆ.

Follow Us:
Download App:
  • android
  • ios