ಚಲಿಸುತ್ತಿರುವ ಕಾರಿನ ಸನ್‌ರೂಫ್ ಮೇಲೆ ಕುಳಿತು ಲಿಪ್‌ಲಾಕ್; ರೋಮ್ಯಾನ್ಸ್ ವಿಡಿಯೋ ವೈರಲ್!
ಕಾರು ಹೆದ್ದಾರಿ ಮಾರ್ಗದಲ್ಲಿ ವೇಗವಾಗಿ ಸಂಚರಿಸುತ್ತಿದೆ. ಕಾರಿನ ಸನ್‌ರೂಫ್ ಮೇಲೆ ಕುಳಿತ ಜೋಡಿ ಮೈಮರೆತಿದ್ದಾರೆ. ಚುಂಬಿಸುತ್ತಾ, ತಬ್ಬಿಕೊಳ್ಳುತ್ತಾ ರೋಮ್ಯಾನ್ಸ್ ಮೂಡಿಗೆ ಜಾರಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ ಹೆಚ್ಚಾಗಿದೆ.

ಹೈದರಾಬಾದ್(ಅ.16) ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಕೆಲ ಕಡ್ಡಾಯ ನಿಯಮ ಪಾಲಿಸಲೇಬೇಕು. ಇಷ್ಟೇ ಅಲ್ಲ ಕಾರಿದೆ ಎಂದು ಏನುಬೇಕಾದರೂ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲೂ ಕೆಲ ನಿಮಯ ಪಾಲನೆ ಅಗತ್ಯ. ಆದರೆ ಇಲ್ಲೊಂದು ಜೋಡಿ ತಾವು ಎಲ್ಲಿದ್ದೇನೆ ಅನ್ನೋದನ್ನೇ ಮರೆತಿದ್ದಾರೆ. ಎತ್ತ ಸಾಗುತ್ತಿದ್ದೇವೆ ಅನ್ನೋದು ಗೊತ್ತಿಲ್ಲ. ಚಲಿಸುತ್ತಿರುವ ಕಾರಿನ ಸನ್‌ರೂಫ್ ಮೇಲೆ ಕುಳಿತ ಈ ಜೋಡಿ ಲಿಪ್ ಲಾಕ್ ಮಾಡಿದ್ದಾರೆ. ಚುಂಬಿಸುತ್ತಾ ಹೆದ್ದಾರಿಯಲ್ಲಿ ಸಾಗಿದ್ದಾರೆ.. ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ಚುಂಬನ ನಡೆದಿರುವುದು ಹೈದರಾಬಾದ್ ನಗರದಲ್ಲಿ. ಪಿವಿ ನರಸಿಂಹರಾವ್ ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ವೇಗವಾಗಿ ಸಾಗುತ್ತಿರುವಾಗಲೇ ಈ ಜೋಡಿಯ ರೋಮ್ಯಾನ್ಸ್ ಆರಂಭಗೊಂಡಿದೆ. ಕಾರಿನ ಸನ್‌ರೂಫ್ ತೆರೆದು ಟಾಪ್ ಮೇಲೆ ಕುಳಿತ ಜೋಡಿ, ಚುಂಬಿಸುತ್ತಾ, ಸಾರ್ವಜನಿಕರತ್ತ ಕೈಬೀಸುತ್ತಾ ಸಾಗಿದ್ದಾರೆ. ಕಾರಿನ ಮ್ಯೂಸಿಕ್ ಸಿಸ್ಟಮ್‌ನಲ್ಲಿ ರೋಮ್ಯಾಟಿಂಗ್ ಹಾಡು ಹಾಕಿದ್ದಾರೆ. ಬಳಿಕ ತಾವು ಬಾಲಿವುಡ್ ಹೀರೋ ಹೀರೋಯಿನ್ ಭಾವಿಸಿ ಸಾಗಿದ್ದಾರೆ.
ಬೈಕ್‌ನಲ್ಲಿ ಮುತ್ತಿಕ್ಕಿ, ಬಿಗಿದಪ್ಪಿ ಸಾಗಿದ ಜೋಡಿಗೆ 11 ಸಾವಿರ ರೂ ದಂಡ, ಜೊತೆಗೊಂದು ವಾರ್ನಿಂಗ್!
ಯುವತಿಯನ್ನು ತಬ್ಬಿಕೊಂಡು, ಚುಂಬಿಸುತ್ತಾ ಸಾಗಿದ್ದಾರೆ. ಎಕ್ಸ್‌ಪ್ರೆಸ್‌ವೇ ಕಾರಣ ಕಾರು ವೇವಾಗಿ ಸಾಗಿದೆ. ಈ ಜೋಡಿಯ ರೋಮ್ಯಾನ್ಸ್‌ನ್ನು ಹಿಂಭಾಗದ ವಾಹನ ಸವಾರರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.ಇಷ್ಟೇ ಅಲ್ಲ ಸಾರ್ವಜನಿಕ ಪ್ರದರ್ಶನದಲ್ಲಿ ಅಪಾಯಕಾರಿ ಸ್ಟಂಟ್, ಇತರ ವಾಹನ ಸವಾರರ ಜೀವಕ್ಕೆ ಅಪಾಯ ತರುವಂತ ವಾಹನ ಚಾಲನೆ, ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯ ವರ್ತನೆ ಸೇರಿದಂತೆ ಹಲವು ಪ್ರಕರಣ ದಾಖಲಿಸಿ ಜೋಡಿಗಳನ್ನು ಜೈಲಿಗೆ ಅಟ್ಟುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ. ಇದರ ಜೊತೆಗೆ ಆಕ್ರೋಶ ವ್ಯಕ್ತವಾಗಿದೆ. ಹೈದರಾಬಾದ್ ಟ್ರಾಫಿಕ್ ಪೊಲೀಸರು ಈ ವಾಹನ ಹಾಗೂ ಜೋಡಿಯನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ರೀತಿ ವಾಹನದಲ್ಲಿ ಲಿಪ್‌ಲಾಕ್, ರೋಮ್ಯಾನ್ಸ್ ಹೊಸದಲ್ಲ. ಇತ್ತೀಚೆಗೆ ಲಖನೌದಲ್ಲೂ ಇದೇ ರೀತಿ ಸನ್‌ರೂಫ್ ಮೇಲೆ ಕುಳಿತು ರೋಮ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಮೆಡಿಕಾಲೇಜು ತರಗತಿಯೊಳಗೆ ವಿದ್ಯಾರ್ಥಿಗಳ ರೋಮ್ಯಾನ್ಸ್, ವೈರಲ್ ವಿಡಿಯೋದಿಂದ ತನಿಖೆಗೆ ಆದೇಶ!
ಬೈಕ್ ಮೇಲೆ ರೋಮ್ಯಾನ್ಸ್ ಸೇರಿದಂತೆ ಹಲವು ಪ್ರಕರಣಗಳು ವರದಿಯಾಗಿದೆ.ಈ ಪ್ರಕರಣಗಳಲ್ಲಿ ಪೊಲೀಸರು 10 ರಿಂದ 15 ಸಾವಿರ ರೂಪಾಯಿ ದಂಡ ವಿಧಿಸಿದ ಉದಾಹರಣೆಗಳೂ ಇವೆ. ಆದರೂ ಕೆಲವರು ಎಚ್ಚೆತ್ತುಕೊಳ್ಳದಿರುವುದು ದುರಂತ.