ಸಂಪತ್ತಿನ ಬಗ್ಗೆ ಅಪರಿಮಿತ ದಾಹದಿಂದಾಗಿ ದೇಶದಲ್ಲಿ ಭ್ರಷ್ಟಾಚಾರವು ಕ್ಯಾನ್ಸರ್‌ನಂತೆ ಹರಡಿಕೊಂಡಿದೆ. ಸಾಂವಿಧಾನಿಕ ಕೋರ್ಟ್‌ಗಳು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ತೋರುವ ಅಗತ್ಯವಿದ್ದು, ಭ್ರಷ್ಟ ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸುಪ್ರೀಂಕೋರ್ಟ್‌ ತೀಕ್ಷ್ಣವಾಗಿ ನುಡಿದಿದೆ.

ನವದೆಹಲಿ: ಸಂಪತ್ತಿನ ಬಗ್ಗೆ ಅಪರಿಮಿತ ದಾಹದಿಂದಾಗಿ ದೇಶದಲ್ಲಿ ಭ್ರಷ್ಟಾಚಾರವು ಕ್ಯಾನ್ಸರ್‌ನಂತೆ ಹರಡಿಕೊಂಡಿದೆ. ಸಾಂವಿಧಾನಿಕ ಕೋರ್ಟ್‌ಗಳು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ತೋರುವ ಅಗತ್ಯವಿದ್ದು, ಭ್ರಷ್ಟ ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸುಪ್ರೀಂಕೋರ್ಟ್‌ ತೀಕ್ಷ್ಣವಾಗಿ ನುಡಿದಿದೆ. ದೇಶದ ಜನರಿಗಾಗಿ ಕೋರ್ಟ್‌ಗಳು ಭ್ರಷ್ಟರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಸಂವಿಧಾನದ ಪೀಠಿಕೆಯಲ್ಲಿ ಜನರಿಗೆ ನೀಡಲಾದ ಸಾಮಾಜಿಕ ನ್ಯಾಯದ ಭರವಸೆಯನ್ನು ಈಡೇರಿಸಲು ಭ್ರಷ್ಟಾಚಾರ (Corruption) ದೊಡ್ಡ ಅಡ್ಡಿಯಾಗಿದೆ ಎಂದೂ ನ್ಯಾಯಪೀಠ ಕಿಡಿಕಾರಿದೆ.

ಛತ್ತೀಸ್‌ಗಢದ (Chhattisgarh) ನಿವೃತ್ತ ಸರ್ಕಾರಿ ಅಧಿಕಾರಿ ದಂಪತಿಗಳ ವಿರುದ್ಧದ ಅಕ್ರಮ ಸಂಪತ್ತು ಗಳಿಕೆ ಪ್ರಕರಣವನ್ನು ಅಲ್ಲಿನ ಹೈಕೋರ್ಟ್ ವಜಾಗೊಳಿಸಿತ್ತು. ಆ ಆದೇಶವನ್ನು ರದ್ದುಪಡಿಸುವ ವೇಳೆ ಸುಪ್ರೀಂಕೋರ್ಟ್‌ನ ನ್ಯಾ.ಎಸ್‌.ರವೀಂದ್ರ ಭಟ್‌ (Ravindra Bhat) ಹಾಗೂ ದೀಪಂಕರ ದತ್ತ (Deepankar Datta) ಅವರ ಪೀಠ ಶುಕ್ರವಾರ ಭ್ರಷ್ಟಾಚಾರದ ವಿರುದ್ಧ ಕೋರ್ಟ್‌ಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿತು.

ಹೇಗಿತ್ತು ಲೋಕಾಯುಕ್ತದ 'ಆಪರೇಷನ್‌ ಮಾಡಾಳ್' ಕಾರ್ಯಾಚರಣೆ? ಪಿನ್‌ ಟು ಪಿನ್ ಮಾಹಿತಿ..

ಸಂಪತ್ತಿನ ಸಮಾನ ಹಂಚಿಕೆಗೆ ಪ್ರೋತ್ಸಾಹ ನೀಡಬೇಕು ಎಂಬ ಸಂಗತಿ ಸಂವಿಧಾನದ ಪೀಠಿಕೆಯಲ್ಲಿದೆ. ಆದರೆ ಅದಿನ್ನೂ ಕನಸಾಗಿಯೇ ಉಳಿದಿದೆ. ಅದಕ್ಕೆ ಭ್ರಷ್ಟಾಚಾರವೂ ಒಂದು ಕಾರಣ. ಭ್ರಷ್ಟಾಚಾರ ಇಂದು ಬದುಕಿನ ಪ್ರತಿ ಹಂತದಲ್ಲೂ ನುಸುಳಿದೆ. ದುರದೃಷ್ಟಕರ ಸಂಗತಿಯೆಂದರೆ ಕೇವಲ ಸರ್ಕಾರದಲ್ಲಿ ಮಾತ್ರ ಅದು ಇಲ್ಲ. ಸಂವಿಧಾನದ ನಿರ್ಮಾತೃಗಳು ಹೇಳಿದ ಉದಾತ್ತ ನೈತಿಕ ಮೌಲ್ಯಗಳನ್ನು ಸಮಾಜ ಕೂಡ ಮರೆಯುತ್ತಿದೆ. ಭ್ರಷ್ಟಾಚಾರದ ಮೂಲ ಕಂಡುಹಿಡಿಯಲು ಹೆಚ್ಚು ಶೋಧಿಸುವ ಅಗತ್ಯವಿಲ್ಲ. ಹಿಂದು ಧರ್ಮದಲ್ಲಿ (Hindu Dharma) ಸಪ್ತ ಮಹಾಪಾತಕಗಳ ಪೈಕಿ ದುರಾಸೆಯೂ ಒಂದು. ಸಂಪತ್ತಿನ ಕುರಿತ ದುರಾಸೆಯೇ ಭ್ರಷ್ಟಾಚಾರವನ್ನು ಕ್ಯಾನ್ಸರ್‌ನಂತೆ ಹರಡುತ್ತಿದೆ ಎಂದು ಪೀಠ ಹೇಳಿತು.

ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನಿಂದ ಪಾಠ ಕಲಿಯುವ ಅಗತ್ಯವಿಲ್ಲ: ಸಚಿವ ಆರಗ ಜ್ಞಾನೇಂದ್ರ