ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನಿಂದ ಪಾಠ ಕಲಿಯುವ ಅಗತ್ಯವಿಲ್ಲ: ಸಚಿವ ಆರಗ ಜ್ಞಾನೇಂದ್ರ

ಕೆಲವೊಮ್ಮೆ ಸಿದ್ದರಾಮಯ್ಯ ಸತ್ಯ ಹೇಳುತ್ತಾರೆ. ಕಾಂಗ್ರೆಸ್‌ನ ಸಮಾವೇಶಕ್ಕೆ ಜನರನ್ನು ಹಣ ನೀಡಿ ಕರೆದುಕೊಂಡು ಬರುವುದು ದುರಂತ: ಗೃಹ ಸಚಿವ ಆರಗ ಜ್ಞಾನೇಂದ್ರ 

Home Minister Araga Jnanendra Slams Congress grg

ಶಿವಮೊಗ್ಗ(ಮಾ.03): ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರ ಮಾದ್ಯಮಗಳ ಮೂಲಕ ನನಗೆ ತಿಳಿದಿದೆ. ಇದು ಈಗ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ನಾನು ಈಗಲೇ ಪ್ರತಿಕ್ರಿಯಿಸುವುದಿಲ್ಲ. ನಾಲ್ಕೈದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಯಾವ ಹಣ ಅವರು ಇಟ್ಟುಕೊಂಡಿದ್ದರು ಎಂದು ತಿಳಿದಿಲ್ಲ. ವಿಚಾರಣೆ ಬಳಿಕ ಈ ಬಗ್ಗೆ ತಿಳಿಯಲಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 

ಸಿದ್ದರಾಮಯ್ಯ 500 ರೂ.ನೋಟು ನೀಡುವ ಹೇಳಿಕೆ ವಿಡಿಯೋ ವಿಚಾರ ಕುರಿತು ಇಂದು(ಶುಕ್ರವಾರ) ಶಿವಮೊಗ್ಗದ ಮತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ ಕೆಲವೊಮ್ಮೆ ಸಿದ್ದರಾಮಯ್ಯ ಸತ್ಯ ಹೇಳುತ್ತಾರೆ. ಕಾಂಗ್ರೆಸ್‌ನ ಸಮಾವೇಶಕ್ಕೆ ಜನರನ್ನು ಹಣ ನೀಡಿ ಕರೆದುಕೊಂಡು ಬರುವುದು ದುರಂತ ಅಂತ ಹೇಳಿದ್ದಾರೆ. 

ಪುತ್ರನ ಲಂಚಾವತಾರ: ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ರಾಜೀನಾಮೆ

ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕ ಹಣ ಭ್ರಷ್ಟಾಚಾರದ ಹಣ ಎಂದು ಕಾಂಗ್ರೆಸ್ ಲೇವಡಿಗೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ನಿಂದ ಯಾರು ಪಾಠ ಕಲಿಯಬೇಕಿಲ್ಲ. ಲೋಕಾಯುಕ್ತ ಇದ್ದಿದ್ದರೆ, 60 ಪರ್ಸೆಂಟ್ ಲಂಚ, ಬಿಲ್ಲು, ಕೆಲಸ ಮಾಡುವಾಗಲೇ ಬಿಲ್ ಹೊಡೆದು ತಿಂದಿದ್ದು ಎಲ್ಲವೂ ಹೊರಗೆ ಬರ್ತಿತ್ತು. ಹೀಗಾಗಿ ಲೋಕಾಯುಕ್ತದ ಕುತ್ತಿಗೆ ಹಿಸುಕುವ ಕೆಲಸ ಕಾಂಗ್ರೆಸ್ ಮಾಡಿತ್ತು. ಈಗ ನಮ್ಮ ಬೊಮ್ಮಾಯಿ ಸರ್ಕಾರ ಲೋಕಾಯುಕ್ತಕ್ಕೆ ಪುನರ್ಜನ್ಮ ನೀಡುವ ಕೆಲಸ ಮಾಡಿದೆ. ಲೋಕಾಯುಕ್ತ ಆಗಲೇ ಇದ್ದಿದ್ದರೆ ಕಾಂಗ್ರೆಸ್‌ನವರೆಲ್ಲಾ ಜೈಲಿನಲ್ಲಿರಬೇಕಾಗಿತ್ತು. ಕಾಂಗ್ರೆಸ್‌ನವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಅಂತ ಗೃಹ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪರಿಶೀಲನೆ ನಡೆಯುತ್ತಿದೆ, ಕಾನೂನು ಪ್ರಕಾರ ತಪ್ಪಾಗಿದ್ರೆ ಶಿಕ್ಷೆಯಾಗಲಿದೆ. ವಿಚಾರಣೆ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios