‘ಕೊರೋನಾ ಔಷಧ’ ಕಂಡುಹಿಡಿದ ಪತಂಜಲಿ ಮೇಲೆ ಕ್ರಿಮಿನಲ್‌ ಕೇಸ್‌| ಬಾಬಾ ರಾಮದೇವ್‌ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ‍್ಯ ಬಾಲಕೃಷ್ಣ ವಿರುದ್ಧ ಕೇಸ್

ಮುಜಾಫ್ಫರ್‌ಪುರ(ಜೂ.27): ಕೊರೋನಾಗೆ ಔಷಧ ಕಂಡುಹಿಡಿದಿರುವುದಾಗಿ ಲಕ್ಷಾಂತರ ಜನರನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ಯೋಗ ಗುರು ಬಾಬಾ ರಾಮದೇವ್‌ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆಚಾರ‍್ಯ ಬಾಲಕೃಷ್ಣ ವಿರುದ್ಧ ಬಿಹಾರ ಕೋರ್ಟ್‌ನಲ್ಲಿ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಲಾಗಿದೆ.

ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಪತಂಜಲಿ!

ಸಾಮಾಜಿಕ ಕಾರ‍್ಯಕರ್ತ ತಮನ್ನಾ ಹಶ್ಮಿ ಎಂಬವರು ಮೋಸ, ಕ್ರಿಮಿನಲ್‌ ಪಿತೂರಿ ಮತ್ತಿತರ ಆರೋಪಗಳ ಮೇಲೆ ಎಫ್‌ಐಆರ್‌ ನೋಂದಣಿಗೆ ಕೋರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಕೋರ್ಟ್‌ ವಿಚಾರಣೆಯನ್ನು ಜೂನ್‌ 30ಕ್ಕೆ ಮುಂದೂಡಿದೆ.

ಕೊರೋನಾಕ್ಕೆ ಔಷಧಿ ಕಂಡುಹಿಡಿದೆವು ಎಂದು ಬೀಗುತ್ತಿದ್ದ ಪತಂಜಲಿಗೆ ಆಯುಷ್ ಶಾಕ್!

ಬಾಬಾ ರಾಮ್‌ದೇವ್‌ ನೇತೃತ್ವದ ಪತಂಜಲಿ ಸಂಸ್ಥೆ ಕೊರೋನಾ ವೈರಸ್‌ಗೆ ರಾಮಬಾಣವೆಂದು ‘ಕೊರೋನಿಲ್‌’ ಹಾಗೂ ‘ಶ್ವಾಸಾರಿ’ ಎಂಬ ಔಷಧವನ್ನು ಸಿದ್ಧಪಡಿಸಿ, ಇದರಿಂದ 7 ದಿನದಲ್ಲಿ ಕೊರೋನಾ ಗುಣಮುಖವಾಗುತ್ತದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ‘ಕೊರೋನಾ ಔಷಧ’ ಮಾರಾಟ ಸಂಬಂಧ ಜಾಹೀರಾತು ನೀಡದಂತೆ ಪತಂಜಲಿಗೆ ಸರ್ಕಾರ ತಾಕೀತು ಮಾಡಿತ್ತು.