ಕೊರೋನಾಕ್ಕೆ ಔಷಧಿ ಕಂಡುಹಿಡಿದೆವು ಎಂದು ಬೀಗುತ್ತಿದ್ದ ಪತಂಜಲಿಗೆ ಆಯುಷ್ ಶಾಕ್!

ಪತಂಜಲಿ ಕೊರೋನಾ ಔಷಧಕ್ಕೆ ಆಯುಷ್ ಇಲಾಖೆ ಬ್ರೇಕ್/ ಪತಂಜಲಿ ಔಷಧಿ ತಯಾರಿಸಿರುವ ಬಗ್ಗೆ ಮಾಹಿತಿ ಇಲ್ಲ/  ಸರ್ಕಾರಕ್ಕೆ ಮಾಹಿತಿ ನೀಡುವಂತೆ  ಉತ್ತಾರಖಂಡ ಸರ್ಕಾರಕ್ಕೆ ಸೂಚನೆ/ 

AYUSH ministry orders Patanjali to stop advertising its COVID drug until examined

ನವದೆಹಲಿ(ಜೂ.23) ಪತಂಜಲಿ ಕೊರೊನಾ ಮದ್ದಿಗೆ ಆಯುಷ್ ಇಲಾಖೆ ರೆಡ್ ಸಿಗ್ನಲ್  ನೀಡಿದೆ.  ಪತಂಜಲಿ  ಉತ್ಪನ್ನದ ಬಗ್ಗೆ ಆಯುಷ್ ಇಲಾಖೆ ಗೆ ಮಾಹಿತಿ ಇಲ್ಲ ಎಂದು ತಿಳಿಸಿದೆ.

ಪರೀಕ್ಷೆ ನಡೆಸಿ ಫಲಿತಾಂಶ ಬರುವವರೆಗೂ ಈ ಔಷಧಿಯಿಂದ ಕೊರೋನಾ ದೂರವಾಗುತ್ತದೆ ಎಂಬ ಸಲಹೆ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ಆಯುಷ್ ಇಲಾಖೆ ಪತಂಜಲಿಗೆ ತಿಳಿಸಿದೆ.

ಕೊರೋನಾ ವೈರಸ್‌ಗೆ ಲಸಿಕೆ ಹಾಗೂ ಔಷಧ ಕಂಡುಹಿಡಿಯಲು ವಿಶ್ವದಾದ್ಯಂತ ಪ್ರಯತ್ನಗಳು ನಡೆದಿರುವ ನಡುವೆಯೇ, ಈ ವ್ಯಾಧಿಗೆ ಔಷಧ ಕಂಡುಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್‌ ಅವರ ಪತಂಜಲಿ  ಹೇಳಿಕೊಂಡಿತ್ತು. ಈ ಸುದ್ದಿ ದೊಡ್ಡ ಮಟ್ಟದ ಪ್ರಚಾರವನ್ನು ಪಡೆದುಕೊಂಡಿತ್ತು.

ಸುದ್ದಿಗಾರರ ಜತೆ ಮಾತನಾಡಿದ್ದ ಪತಂಜಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಚಾರ್ಯ ಬಾಲಕೃಷ್ಣ, ‘ನೂರಾರು ಕೊರೋನಾ ಪೀಡಿತರ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ. ಇದು ಶೇ.100ರಷ್ಟುಉತ್ತಮ ಫಲಿತಾಂಶ ನೀಡಿದೆ. 5 ರಿಂದ 14 ದಿನ ಅವಧಿಯಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ’ ಎಂದಿದ್ದರು.

ಮುಂಬೈನಲ್ಲಿ ಕೊರೋನಾ ವಿರುದ್ಧ ಹೋರಾಟ ಮಾಡಬಲ್ಲ ಮಾತ್ರೆಯೊಂದನ್ನು ತಯಾರಿಸಲಾಗಿದೆ ಎಂದು ಹೇಳಲಾಗಿತ್ತು. ವೈಜ್ಞಾನಿಕವಾಗಿ ಯಾವುದು ದೃಢಿಕರಣವಾಗುವ ಮುನ್ನ ಇಂಥ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಆಯುಷ್ ಇಲಾಖೆ ತಿಳಿಸಿದೆ. 

Latest Videos
Follow Us:
Download App:
  • android
  • ios